ಸತ್ಯದ ವಿಳಾಸ

ಒಮ್ಮೆ ಶಿಷ್ಯ ಗುರುಗಳಲ್ಲಿ ಬಂದು “ಸತ್ಯದ ವಿಳಾಸ ನಿಮಗೆ ಗೊತ್ತೇ?” ಎಂದ. “ನನಗೆ ಹಲವು ವಿಳಾಸಗಳು ಗೊತ್ತು, ಅದನ್ನು ಬೇಕಾದರೆ ಹೇಳುತ್ತೇನೆ. ಅದನ್ನು ಹಿಡಿದು ನೀ ಸತ್ಯವನ್ನು ಹುಡುಕು” ಎಂದರು ಗುರುಗಳು.

“ಹೇಳಿ ಗುರುಗಳೇ’ ಎಂದ ಶಿಷ್ಯ.

“ಎಲ್ಲಾ ಪರ್‍ವತಗಳನ್ನು ಹತ್ತುತ್ತ ಹೋಗು ಕೊನೆಗೆ ಒಂದು ಪರ್ವತದ ಶಿಖರದಲ್ಲಿ ನಕ್ಷತ್ರದ ಬೆಳಕಿನಲ್ಲಿ ಸತ್ಯದ ವಿಳಾಸ ಸಿಗುತ್ತದೆ.” ಎಂದರು ಗುರುಗಳು.

“ಇದು ಬಹಳ ಕಷ್ಟ ಗುರುಗಳೆ” ಎಂದ ಶಿಷ್ಯ.

“ಹಾಗಾದರೆ ಒಂದು ಕೆಲಸ ಮಾಡು. ಸಪ್ತ ಸಮುದ್ರವನ್ನು ದಾಟುವಾಗ ಬಹಳ ಜಾಗರೂಕತೆ ಇಂದ ಕಣ್ತೆರದು ನೋಡುತ್ತಿರು. ಅಲೆ ಅಲೆಗಳ ಲಿಪಿ ಕೊರತದಲ್ಲಿ ಸತ್ಯದ ಸ್ಪಷ್ಟ ವಿಳಾಸ ಸಿಗುತ್ತದೆ” ಎಂದರು ಗುರುಗಳು. “ಗುರುಗಳೇ! ಇದು ಬಹಳ ಕಷ್ಟ ಸಾಧ್ಯ” ಎಂದ ಶಿಷ್ಯ.

“ಹೋಗಲಿ ಬಿಡಪ್ಪಾ. ಒಂದು ಕೆಲಸ ಮಾಡು, ಹೂವು ಬಿರಿದ ಎಡೆಯಲೆಲ್ಲ ಹೋಗುವ ದುಂಬಿಯ ಹಿಂದೆ ನೀನು ಓಡುತ್ತಿರು. ದುಂಬಿ ಝೇಂಕಾರದಲ್ಲಿ ಸತ್ಯದ ವಿಳಾಸ ಹೇಳುತ್ತಿರುತ್ತದೆ. ಅದನ್ನು ಅರ್‍ಥವಿಸಿ ತಿಳಿದುಕೊ.”

“ಗುರುಗಳೇ! ಹೂವಿನಿಂದ ಹೂವಿಗೆ ಹಾರುವ ದುಂಬಿಯ ಹಿಂದೆ ಹಾರಾಡಲು ಸಾಧ್ಯವಿಲ್ಲ. ಏನಾದರು ಬೇರೆ ಸುಲಭೋಪಾಯವಿಲ್ಲವೆ, ಗುರುಗಳೇ?”. “ಸತ್ಯದ ವಿಳಾಸ
ಯಾವುದಾದರೂ ಓಣೀಲಿ ಸಿಕ್ಕೊಲ್ಲವೇ?” ಎಂದ.

ಅದಕ್ಕೆ ಗುರುಗಳೆಂದರು ನನಗೆ ಗೊತ್ತಿರುವ ಓಣಿ ಆಕಾಶದಲ್ಲಿ ಇದೆ. ಅದಕ್ಕೆ ನೀನು ಏಣಿ ಹತ್ತಿ ಹೋಗಬೇಕು. ಆಗಸದ ನೀಲಿ ಓಣಿಯ ಗೋಡೆಯ ಮೇಲೆ ಸತ್ಯದ ವಿಳಾಸ ಇರುತ್ತದೆ. ಆದರೆ ಮೋಡ ಮುಚ್ಚಿರುತ್ತದೆ. ಅದು ಮಳೆ ಬರೋತನಕ ಕಾಯಬೇಕು. ಮಿಂಚು ಬಂದಾಗ ಓದಿಕೋಬೇಕು” ಎಂದರು ಗುರುಗಳು.

“ಗುರುಗಳೇ! ನನಗೆ ಸತ್ಯದ ವಿಳಾಸವು ಬೇಡ, ನಿತ್ಯದ ವಿಳಾಸವೇ ಸಾಕು” ಎಂದು ನಮಸ್ಕರಿಸಿ ಶಿಷ್ಯ ಕಾಲು ಕಿತ್ತಿದ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅಲಲಾ ಸೃಜನ ಶೀಲತೆಯೆಂದೊಡೇಂ?
Next post ಅದೃಷ್ಟ

ಸಣ್ಣ ಕತೆ

  • ಒಂದು ಹಿಡಿ ಪ್ರೀತಿ

    ತೆಂಗಿನ ತೋಟದಲ್ಲಿ ಬಾಗಿಕೊಂಡು ಹಣ್ಣಾಗಿ ಉದುರಿದ ಅಡಕೆಗಳನ್ನು ಒಂದೊಂದಾಗಿ ಹೆಕ್ಕಿ, ಸನಿಹದಲ್ಲಿದ್ದ ಪ್ಲಾಸ್ಟಿಕ್ ಚೀಲಕ್ಕೆ ತುಂಬಿಸುತ್ತಿದ್ದಂತೆ ಪಕ್ಕದಲ್ಲಿ ಸರಕ್ಕನೆ ಹರಿದು ಹೋದ ಕೇರೆ ಹಾವಿನಿಂದಾಗಿ ಒಮ್ಮೆ ವಿಚಲಿತರಾದರು… Read more…

  • ಜೀವಂತವಾಗಿ…ಸ್ಮಶಾನದಲ್ಲಿ…

    ಎರಡು ಮೂರು ವರ್ಷದ ಅಂತರದಲ್ಲಿ ಒಂದಾದ ಮೇಲೊಂದು ಗಂಡು ಮಕ್ಕಳು ಜನನವಾದಾಗ ದೇಬಾನಂದಸಾಹುಗೆ ಅವನ ಪತ್ನಿ ನಿಲಾಂದ್ರಿಗೆ ಬಹಳ ಸಂತಸವಾಗಿತ್ತು. "ಮಕ್ಕಳು ದೊಡ್ಡವರಾಗಿ ವಿದ್ಯಾವಂತರಾಗಿ ಉದ್ಯೋಗ ಮಾಡಿದರೆ… Read more…

  • ಗದ್ದೆ

    ಅದೊಂದು ಬೆಟ್ಟದ ಊರು. ಪುಟ್ಟ ಪುಟ್ಟ ಗುಡ್ಡಕ್ಕೆ ತಾಗಿಕೊಂಡು ಸಂದಿಯಲ್ಲಿ ಗೊಂದಿಯಲ್ಲಿ ಎದ್ದ ಗುಡಿಸಲುಗಳು ಅರ್ಥಾತ್ ಈ ಜೀವನ ಕಳೆಯೋ ಬಗೆಯಲಿ ಕಟ್ಟಿಕೊಂಡ ಪುಟ್ಟ ಮನೆಗಳು ಹೊತ್ತು… Read more…

  • ಏಕಾಂತದ ಆಲಾಪ

    ಅಂದು ದಸರೆಯ ಮುನ್ನಾದಿನ ಮಕ್ಕಳಿಗೆಲ್ಲಾ ಶಾಲಾ ರಜೆ ದಿವಸಗಳು. ಅವಳು ಕಾತ್ಯಾಯನಿ, ಒಂದು ತಿಂಗಳಿಂದ ಆ ಪಟ್ಟಣದ ಪ್ರಸಿದ್ಧ ನೇತ್ರಾಲಯಕ್ಕೆ ಅಲೆಯುತ್ತಿದ್ದಾಳೆ. ಎರಡೂ ಕಣ್ಣುಗಳು ಪೊರೆಯಿಂದ ಮುಂದಾಗಿವೆ.… Read more…

  • ಆ ರಾಮ!

    ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು… Read more…