Year: 2015

#ಕವಿತೆ

ಪೋಸ್ಟಾಪೀಸು

0
ಕಾಸರಗೋಡಿನ ಕಾರಡ್ಕ ಎಂಬಲ್ಲಿ ೧೯೪೦ ರಲ್ಲಿ ಜನನ. ಕಾಸರಗೋಡು, ತಿರುವನಂತಪುರ, ಹೈದರಾಬಾದುಗಳಲ್ಲಿ ವಿದ್ಯಾಭ್ಯಾಸ. ಇಂಗ್ಲೀಷ್ ಸಾಹಿತ್ಯದಲ್ಲಿ ಎಂ. ಎ.; ಭಾಷಾಶಾಸ್ತ್ರದಲ್ಲಿ ಪಿಎಚ್.ಡಿ. ಕೇರಳದ ಹಲವೆಡೆ ಇಂಗ್ಲೀಷ್ ಅಧ್ಯಾಪಕರಾಗಿ ವೃತ್ತಿಜೀವನ ಆರಂಭ; ಆನಂತರ ಹೈದರಾಬಾದಿನ ಉನ್ನತ ಶಿಕ್ಷಣ ಸಂಸ್ಥೆ ಸೆಂಟ್ರಲ್ ಇನ್ಸ್‌ಟಿಟ್ಯೂಟ್ ಆಫ್ ಇಂಗ್ಲಿಷ್ ಎಂಡ್ ಫಾರಿನ್ ಲಾಂಗ್ವೇಜಸ್‌ನಲ್ಲಿ ಪ್ರಾಧ್ಯಾಪಕ.೨೦೦೨ರಲ್ಲಿ ನಿವೃತ್ತಿ.ಅಮೇಲೆ ಅಮೆರಿಕ, ಯೆಮೆನ್ ದೇಶಗಳಲ್ಲಿ ಅಧ್ಯಾಪನ. ಸದ್ಯ ಹೈದರಾಬಾದಿನಲ್ಲಿ ವಾಸ್ತವ್ಯ. ‘ಮುಖಾಮುಖಿ’ ಕವನಸಂಕಲನಕ್ಕೆ ಕೇರಳದ ಕುಮಾರನ್ ಆಶಾನ್ ಅವಾರ್ಡ್ ಮತ್ತು ಕಾಂತಾವರದ ವರ್ಧಮಾನ ಪ್ರಶಸ್ತಿ; ‘ಅವಧ’ ಕವನ ಸಂಕಲನಕ್ಕೆ ಮತ್ತು ‘ಸಮ್ಮುಖ’ ಲೇಖನ ಸಂಕಲನಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಮತ್ತು ‘ಅಕ್ಷಯ ಕಾವ್ಯ’ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ೨೦೧೫ರ ಸಾಲಿನ ಪ್ರಶಸ್ತಿ ಲಭಿಸಿದೆ. ಅಲ್ಲದೆ, ಪುತ್ತೂರು ಕರ್ನಾಟಕ ಸಂಘದ ನಿರಂಜನ ಪ್ರಶಸ್ತಿ, ಮತ್ತು ಶಿವಮೊಗ್ಗ ಕರ್ನಾಟಕ ಸಂಘದ ಹಾ.ಮಾ.ನಾ. ಪ್ರಶಸ್ತಿಗಳೂ ದೊರಕಿವೆ.ಕರ್ನಾಟಕ ಸಹಿತ್ಯ ಅಕಾಡೆಮಿಯ ಗೌರವ ಸಾಹಿತ್ಯ ಪ್ರಶಸ್ತಿಗೂ ಇವರು ಪಾತ್ರರಾಗಿದ್ದಾರೆ. ತಿರುಮಲೇಶ್ ಇಂಗ್ಲೀಷ್‌ನಲ್ಲೂ ಹಲವಾರು ಲೇಖನಗಳನ್ನು ಮತ್ತು ಪುಸ್ತಕಗಳನ್ನು ಬರೆದಿದ್ದಾರೆ.
*****
ತಿರುಮಲೇಶ್ ಕೆ ವಿ
Latest posts by ತಿರುಮಲೇಶ್ ಕೆ ವಿ (see all)

ಪೋಸ್ಟಾಪೀಸಿಗೆ ದಿನಾ ಮಧ್ಯಹ್ನ ಬಸ್ಸಿನಲ್ಲಿ ಟಪ್ಪಾಲಿನ ಗೋಣಿಚೀಲ ಬರುತ್ತದೆ.  ಪೇದೆ ಅದನ್ನು ಒಡೆದು ಕೊಡವಿ ಹಾಕುತ್ತಾನೆ.  ಕಾಗದಗಳ ಕಟ್ಟು ಕೆಳಕ್ಕೆ ಬೀಳುತ್ತದೆ.  ಪೋಸ್ಟ್ ಮಾಸ್ತರರು ಒಂದೊಂದಕ್ಕೇ ಸೀಲು ಹಾಕುತ್ತಾರೆ. ನಂತರ ಒಂದೊಂದನ್ನೇ ವಿಂಗಡಿಸುತ್ತಾರೆ. ಕಾರ್ಡುಗಳಿವೆ, ಇನ್ಲೇಂಡುಗಳಿವೆ, ಕವರುಗಳಿವೆ. ಕೆಲವು ಹೊಸ ರೀತಿಯ ಸ್ಟಾಂಪುಗಳು.  ನಾವು ಕುತೂಹಲದಿಂದ ಕಾಯುತ್ತೇವೆ: ನಮಗೆ ಕಾಗದವಿದೆಯೇ, ಏನಾದರೂ ಇದೆಯೇ ಎಂದು.  ಕಾರಣ […]

#ವಚನ

ಲಿಂಗಮ್ಮನ ವಚನಗಳು – ೪೨

0

ತನುವ ಕರಗಿಸಿ, ಹರಿವ ಮನವ ನಿಲಿಸಿ, ಅಂಗಗುಣವನೆ ಅಳಿದು, ಲಿಂಗಗುಣವನೆ ನಿಲಿಸಿ, ಭಾವವಳಿದು ಭವಕೆ ಸವಿದು, ಮಹಾ ದೇವನಾದ ಶರಣರ ಜಗದ ಮಾನವರೆತ್ತ ಬಲ್ಲರು ಅಪ್ಪಣಪ್ರಿಯ ಚನ್ನಬಸವಣ್ಣ? ***** ಸಂಗ್ರಹ: ರಾ|| ಸಾ|| ಫ. ಗು. ಹಳಕಟ್ಟಿ

#ಕವಿತೆ

ಅರಗಿಸಿಕೋ

0
ಲತಾ ಗುತ್ತಿ
Latest posts by ಲತಾ ಗುತ್ತಿ (see all)

ಏ ರಘು ನೀ ಮಾತಾಡಕ್ಹತ್ಯಂದ್ರ ರಾಜಕೀಯದವರಂಗ ಯದ್ವಾತದ್ವಾ ಎಡವಟ್ಟು ಹೇರಾ ಪೇರಿ ಮಾತಾಡ್ತಿನೋಡು ಎಲ್ಲಾರೂ ಝಬರಿಸಿ ಬೈದು ನಿನ್ನ ಹೊರಗ ಹಾಕಿದ್ರ ಮನಿಯೆಲ್ಲಾ ಭಣ ಭಣ ಸ್ಮಶಾನದಂಗ ಮೌನ ಏ ರಾಘು ನಿನ್ನ ಯಡವಟ್ಟತನಾ ಬಿಡೋ ನಮಗೂ ಭಣ ಭಣ ಬ್ಯಾಡಾ ಮಾತಾಽಡ, ಬ್ಯಾಡ ಅನ್ನೋದಿಲ್ಲೋ ಮಾತಾಡೋ ಮುನ್ನ ತಿಳಕೋ ಅರಗಿಸಿ ಕೋ, ಕುಡಕೋ ಆಮ್ಯಾಲ […]

#ಕವಿತೆ

ಅಮ್ಮ ಪ್ರಕೃತಿ

0
Latest posts by ವೃಷಭೇಂದ್ರಾಚಾರ್‍ ಅರ್ಕಸಾಲಿ (see all)

ಏಕಮ್ಮ ಓ ಪ್ರಕೃತಿ ಎನ್ನಿಂದ ದಿನದಿನವು ದೂರಕೆ ಸಾಗುತ ನಿಲ್ಲುತಿರುವೆ ನರಕವಾಗಿದೆ ಎನ್ನ ಜೀವನ ವಿಕೃತಿಯಲಿ ತಬ್ಬಲಿಗೈದೆನ್ನ ಕೊಲ್ಲು ತಿರುವೆ ಎಲೆ ಎಲೆ ಪಿಸುಮಾತು ಕೇಳಿಸದೆ ಕಿವಿಗಳಿಗೆ ನಾಗರಿಕ ಸಂತೆಯಲಿ ಮುಚ್ಚಿರುವುದು ನಗುವ ಹೂಗಳ ಮೋಡಿ ಎನ್ನಿಂದ ದೂರಾಗಿ ಕಾಗದದ ಹೂ ಮೂಗ ಮುತ್ತುತಿಹುದು ಹಸುರ ಹುಲ್ಲಿಗೆ ಮೆತ್ತ ಮುತ್ತಿನಪ್ಪುಗೆಯಿಂದ ಎರವಾಗಿ ನಾ ನಯದ ಮರುಳಿನಲ್ಲಿ […]

#ಇತರೆ

ಮಾನವೀಯತೆ ಎಂದರೇನು?

0

ಪ್ರಿಯ ಸಖಿ, ಎಂಟು ಹತ್ತು ವರ್ಷದ ಹುಡುಗನೊಬ್ಬ ತನ್ನಮ್ಮನನ್ನು ಪ್ರಶ್ನಿಸುತ್ತಿದ್ದಾನೆ. “ಅಮ್ಮ ಮಾನವೀಯತೆ ಎಂದರೇನು?” ಅಮ್ಮ ಕ್ಷಣಕಾಲ ತಬ್ಬಿಬ್ಬಾಗುತ್ತಾಳೆ. ದೊಡ್ಡ ದೊಡ್ಡ ಪದಗಳಲ್ಲಿ ಮಾನವೀಯತೆಯನ್ನು ಅರ್ಧೈಸಿ ಹೇಳಬಹುದು. ಆದರೆ ಇನ್ನೂ ಪ್ರಪಂಚದ ಜ್ಞಾನವಿಲ್ಲದ ಮುಗ್ಧ ಮಗುವಿಗೆ ಅದು ಅರ್ಥವಾಗುವುದು ಹೇಗೆ? ಮಾನವೀಯತೆಯೆಂದರೆ ಮನುಷ್ಯತ್ವ, ಮನುಷ್ಯ ಧರ್ಮ ಎಂದು ಪದಕೋಶದ ಅರ್ಥ ಹೇಳಿದರೆ ಮಗುವಿನ ಬುದ್ದಿಗೆ ತಿಳಿಯುತ್ತದೆಯೇ. […]

#ಕವಿತೆ

ಜೂ ನೋಡಿದೆ

0
ಲಕ್ಷ್ಮೀನಾರಾಯಣ ಭಟ್ಟರು ಕನ್ನಡ ಕಾವ್ಯದ ಜೀವಂತಿಕೆಯನ್ನು ಹೆಚ್ಚಿಸುತ್ತ ಆಧುನಿಕ ಕನ್ನಡ ಕಾವ್ಯವನ್ನು ಬೆಳೆಸುತ್ತ ಬಂದಿರುವ ಪ್ರಮುಖ ಕವಿಗಳಲ್ಲಿ ಒಬ್ಬರು.ಅವರ ಅನುವಾದಗಳು ಕನ್ನಡ ಕಾವ್ಯಕ್ಕೆ ಕೊಟ್ಟ ಬೆಲೆಬಾಳುವ ಉಡುಗೊರೆಗಳು ಮಾತ್ರವಾಗಿರದೆ ಸ್ವಂತಕ್ಕೆ ಪಡೆದ ರಕ್ತದಾನವೂ ಆಗಿದೆ. ಸ್ವಂತ ಪ್ರತಿಭೆ, ಶ್ರೇಷ್ಠಕವಿಗಳ ಆಪ್ತ ಅಧ್ಯಯನ ಎರಡೂ ಅವರನ್ನೂ ಎತ್ತರಕ್ಕೆ ಹತ್ತಿಸಿವೆ. ಅಧ್ಯಯನ, ಚಿಂತನೆ ಇವು ಅವರಲ್ಲಿ ಹಾಸು ಹೊಕ್ಕಾಗಿ ಒಂದನ್ನು ಮತ್ತೊಂದು ಬಲಗೊಳಿಸುತ್ತ ಬಂದಿವೆ.
ಲಕ್ಷ್ಮೀನಾರಾಯಣ ಭಟ್ಟ ಎನ್ ಎಸ್
Latest posts by ಲಕ್ಷ್ಮೀನಾರಾಯಣ ಭಟ್ಟ ಎನ್ ಎಸ್ (see all)

ಜೂ ನೋಡಿದೆ – ನಾ ಜೂ ನೋಡಿದೆ, ಬೋನಿನಲ್ಲಿ ಹುಲಿ ಸಿಂಹ ತೋಳ ನೋಡಿದೆ. ಚೂಪು ಹಲ್ಲಿದೆ – ಸಿಂಹ ಕೋಪವಾಗಿದೆ, ರೋಪಿನಿಂದ ಘುರ್‍ ಅಂದ್ರೆ ನಡಗತ್ತೆ ಎದೆ. ಬಣ್ಣ ಬಣ್ಣದ – ಅಗಲ ಪಟ್ಟೆ ಹುಲಿ ಇದೆ, ಸಣ್ಣ ಚೂರಿಯಂಥ ಉಗುರು ಹೆಜ್ಜೆ ಒಳಗಿದೆ. ಕಾಳ ಹೊಟ್ಟೆಯ- ಭಾರಿ ತೋಳ ಅಲ್ಲಿದೆ, ಕುರೀಮರಿ ಎಲ್ಲಿ […]

#ಕವಿತೆ

ಪುಟ್ಟ ಕನ್ನಡಿ

0
ಶ್ರೀನಿವಾಸ ಕೆ ಎಚ್
Latest posts by ಶ್ರೀನಿವಾಸ ಕೆ ಎಚ್ (see all)

ಭೂಮಿ ಕಾಣಿ ಧವಸ ಧಾನ್ಯ ಮನಿಶಾ ಪ್ರಾಣಿ, ಈ ಜಗತ್ತೆಲ್ಲಾ ಸೂರ್ಯನದೇ ಅಂಗಡಿ ಅದರೊಳಗೇ ಈ ಚಂದ್ರ ಒಂದು ಪುಟ್ಟ ಕನ್ನಡಿ. *****

#ಕವಿತೆ

ನಾವು

0
ಕಾಸರಗೋಡಿನ ಕಾರಡ್ಕ ಎಂಬಲ್ಲಿ ೧೯೪೦ ರಲ್ಲಿ ಜನನ. ಕಾಸರಗೋಡು, ತಿರುವನಂತಪುರ, ಹೈದರಾಬಾದುಗಳಲ್ಲಿ ವಿದ್ಯಾಭ್ಯಾಸ. ಇಂಗ್ಲೀಷ್ ಸಾಹಿತ್ಯದಲ್ಲಿ ಎಂ. ಎ.; ಭಾಷಾಶಾಸ್ತ್ರದಲ್ಲಿ ಪಿಎಚ್.ಡಿ. ಕೇರಳದ ಹಲವೆಡೆ ಇಂಗ್ಲೀಷ್ ಅಧ್ಯಾಪಕರಾಗಿ ವೃತ್ತಿಜೀವನ ಆರಂಭ; ಆನಂತರ ಹೈದರಾಬಾದಿನ ಉನ್ನತ ಶಿಕ್ಷಣ ಸಂಸ್ಥೆ ಸೆಂಟ್ರಲ್ ಇನ್ಸ್‌ಟಿಟ್ಯೂಟ್ ಆಫ್ ಇಂಗ್ಲಿಷ್ ಎಂಡ್ ಫಾರಿನ್ ಲಾಂಗ್ವೇಜಸ್‌ನಲ್ಲಿ ಪ್ರಾಧ್ಯಾಪಕ.೨೦೦೨ರಲ್ಲಿ ನಿವೃತ್ತಿ.ಅಮೇಲೆ ಅಮೆರಿಕ, ಯೆಮೆನ್ ದೇಶಗಳಲ್ಲಿ ಅಧ್ಯಾಪನ. ಸದ್ಯ ಹೈದರಾಬಾದಿನಲ್ಲಿ ವಾಸ್ತವ್ಯ. ‘ಮುಖಾಮುಖಿ’ ಕವನಸಂಕಲನಕ್ಕೆ ಕೇರಳದ ಕುಮಾರನ್ ಆಶಾನ್ ಅವಾರ್ಡ್ ಮತ್ತು ಕಾಂತಾವರದ ವರ್ಧಮಾನ ಪ್ರಶಸ್ತಿ; ‘ಅವಧ’ ಕವನ ಸಂಕಲನಕ್ಕೆ ಮತ್ತು ‘ಸಮ್ಮುಖ’ ಲೇಖನ ಸಂಕಲನಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಮತ್ತು ‘ಅಕ್ಷಯ ಕಾವ್ಯ’ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ೨೦೧೫ರ ಸಾಲಿನ ಪ್ರಶಸ್ತಿ ಲಭಿಸಿದೆ. ಅಲ್ಲದೆ, ಪುತ್ತೂರು ಕರ್ನಾಟಕ ಸಂಘದ ನಿರಂಜನ ಪ್ರಶಸ್ತಿ, ಮತ್ತು ಶಿವಮೊಗ್ಗ ಕರ್ನಾಟಕ ಸಂಘದ ಹಾ.ಮಾ.ನಾ. ಪ್ರಶಸ್ತಿಗಳೂ ದೊರಕಿವೆ.ಕರ್ನಾಟಕ ಸಹಿತ್ಯ ಅಕಾಡೆಮಿಯ ಗೌರವ ಸಾಹಿತ್ಯ ಪ್ರಶಸ್ತಿಗೂ ಇವರು ಪಾತ್ರರಾಗಿದ್ದಾರೆ. ತಿರುಮಲೇಶ್ ಇಂಗ್ಲೀಷ್‌ನಲ್ಲೂ ಹಲವಾರು ಲೇಖನಗಳನ್ನು ಮತ್ತು ಪುಸ್ತಕಗಳನ್ನು ಬರೆದಿದ್ದಾರೆ.
*****
ತಿರುಮಲೇಶ್ ಕೆ ವಿ
Latest posts by ತಿರುಮಲೇಶ್ ಕೆ ವಿ (see all)

ಒಂದೊಂದು ಮನೆಯೊಳಗೂ ಒಂದೊಂದು ಭರಣಿ. ಭರಣಿಯೊಳಗೆ ಪುರಾತನದ ದೈವಗಳು.  ಯಾರೂ ತೆರೆಯರು.  ಸಂಪುಟದಿಂದ ಹೊರ ಬರುವ ದೇವರುಗಳು ಕಲ್ಲಿನವು.  ಹಲವು ಕಾಲದ ನೀರಿನಿಂದ ಸವೆದವು.  ಮನೆಹಿಂದೆ ಒಂದೊಂದು ಮರದ ಮೇಲೂ ಒಂದೊಂದು ಪ್ರೇತಗಳು ಸದಾಕಾಲ ಫಲ ಬಿಟ್ಟ ಹಾಗೆ. ಸೊಂಟದೆತ್ತರ ಮುಳಿಹುಲ್ಲು ಬೆಳೆದ ಗುಡ್ಡಗಳಲ್ಲಿ ಬೆಳಗಿನ ಜಾಮ ದಾರಿತಪ್ಪಿಸುವ ಯಕ್ಷಿಗಳು.  ಕಾನತ್ತೂರ ಕಾಡಿನಲ್ಲಿ ರಾತ್ರೋರಾತ್ರಿ ಕಾಣಿಸುವುವು […]

#ವಚನ

ಲಿಂಗಮ್ಮನ ವಚನಗಳು – ೪೧

0

ದಾರಿವಿಡಿದು ಬರಲು, ಮುಂದೆ ಸರೋವರವ ಕಂಡೆ, ಆ ಸರೋವರದ ಮೇಲೆ ಮಹಾಘನವ ಕಂಡೆ. ಮಹಾಘನವಿಡಿದು, ಮನವ ನಿಲಿಸಿ, ಕಾಯಗುಣಗಳನುಳಿದು, ಕರಣಗುಣವ ಸುಟ್ಟು, ಆಶೆಯನೆ ಅಳಿದು, ರೋಷವನೆ ನಿಲಿಸಿ, ಜಗದೀಶ್ವರನಾದ ಶರಣರ ಮರ್ತ್ಯದ ಹೇಸಿಗಳೆತ್ತ ಬಲ್ಲರು ಅಪ್ಪಣಪ್ರಿಯ ಚನ್ನಬಸವಣ್ಣ? ***** ಸಂಗ್ರಹ: ರಾ|| ಸಾ|| ಫ. ಗು. ಹಳಕಟ್ಟಿ

#ಕವಿತೆ

ಕಾರ್ಡಿಯೋಗ್ರಾಫಿ

0
ಲತಾ ಗುತ್ತಿ
Latest posts by ಲತಾ ಗುತ್ತಿ (see all)

ಬಿಟ್ಟೂ ಬಿಟ್ಟೂ ಬರುವ ಮಳೆ ತಟ್ಟೇ ತಟ್ಟೀ ಮಲಗಿಸುವ ಅಮ್ಮ ಪೆಟ್ಟು ಕೊಟ್ಟು ಕಲಿಸುವ ಅಪ್ಪ ಬಿಕ್ಕಿ ಬಿಕ್ಕಿ ಅಳುವ ಕಂದಮ್ಮಗಳು ಸೊಕ್ಕಿ ಸೊಕ್ಕಿ ಬೆಳೆವ ಹೂಗಿಡ ಮರಗಳು ರಣ ರಣವಾಗಿ ಬರುವ ಸೂರ್ಯ ಕಾರ್ಡಿಯೋಗ್ರಾಫಿ ಹಾಗೆ ಇವೆಲ್ಲವುಗಳೊಂದಿಗೆ ಏರಿಳಿಯುತ್ತೇನೆ. *****