ಅಯ್ಯೋ
ಅಯ್ಯೋ ಗಂಡ ನೋಡಿದರೆ ಕೋಲಲ್ಲಿ ಬಾರಿಸ್ತಾನೆ ಇವನು ನೋಡಿದರೆ ಕೊಳಲಲ್ಲಿ ಬಾರಿಸ್ತಾನೆ. *****
ಅದನ್ನೇ ಹಾಕಿಕೊಂಡು ಬಾ ಅಂತ ಗುಟ್ಟಾಗಿ ಕಿವಿಯಲ್ಲಿ ಹೇಳಿದ್ದು ನೋಡಿ ಸಂಭ್ರಮದಿಂದ ಹಾಕಿಕೊಂಡೆ, ನನ್ನ ಹೊಸ ವಜ್ರದ ಬೆಂಡೋಲೆ ಸಂಜೆ ಓಡಿ ಯಮುನಾ ತೀರಕ್ಕೆ ಹೋಗಿ ನೋಡಿದರೆ ಅಲ್ಲೊಂದು ಹೆಂಗಸರ ದೊಡ್ಡಗ್ವಾಲೆ *****
ಅವನಿಗೋ ಅವಳಮ್ಮನ ಮುದ್ದು ಮಡಕೆ ಒಡಕೊಂಡು ಮನೆಗೆ ಹೋದ ನಮಗೆ ಬೆನ್ನ ತುಂಬಾ ನಮ್ಮ ಅಮ್ಮಂದಿರ ಗುದ್ದು. *****
ಅದೆಲ್ಲಾ ನನಗೆ ಹೇಳಬೇಡಿ ಮನುಷ್ಯರಿಗೆ ಮನುಷ್ಯತ್ವ ಇದೆಯೋ ಮೊದಲು ನೋಡಿ ನೀವು ಹೇಳುವ ಧರ್ಮ, ಧರ್ಮಯುದ್ಧ, ಜಿಹಾದ್ ಅದೆಲ್ಲಾ ನನಗೆ ಸಂಬಂಧವಿಲ್ಲ. ಬಿಲ್ಲು, ಬಾಣ, ಗದೆ, ಕೋವಿ, ತುಪಾಕಿಯಂಥಾ ಚಿಲ್ಲರೆ ಅಸ್ತ್ರಗಳು ನನ್ನ ಹತ್ತಿರವಿಲ್ಲ. ದಯವಿಟ್ಟು ತಿಳಕೊಳ್ಳಿ ನೀವು ಯಾರು ಒಪ್ಪಲಿ ಬಿಡಲಿ ನಾನು ಸೂಪರ್ ಪವರ್, ನಾನು ದೇವರ ಅವತಾರ, ಅಮೇರಿಕಾದ ಬುಷ್ ಇಲ್ಲವೆ? […]
ಸರಿಯಪ್ಪಾ ಕೃಷ್ಣ ಪರಮಾತ್ಮ ಇದೇನಿದು ಆ ರಾಮ ನೋಡಿದರೆ ಮರದ ಮರೆಯಲ್ಲಿ ನಿಂತು ಬಾಣ ಬಿಡೋದು: ನೀನು ನೋಡಿದರೆ ಇದ್ದಕ್ಕಿದ್ದಂತೆ ಹೇಳ್ದೆ ಕೇಳ್ದೆ ಚಕ್ರ ಬೀಸಿ ಯಾರನ್ನಾದರವರ್ನ ಕೊಂದೇಬಿಡೋದು ಇದೆಲ್ಲಾ ಯಾವ ಧರ್ಮ? ಯಾವ ಯುದ್ಧ? ಯಾವುದೋ ಓಬಿರಾಯನ ಕಾಲದ ಪುರಾಣಿಕರ ಮಾತ ಕೇಳ್ಕೊಂಡು ನೀನು ದೇವರು, ಏನ್ಬೇಕಾದರೂ ಮಾಡಬಹುದೂಂತ ಬೀಗಬೇಡ: ಈಗ ಕಾಲ ಬದಲಾಗಿದೆ, […]
ಯಾರೋ ಹಚ್ಚಲಿ ಎಂದು ಬತ್ತಿ ಹೊಸೆದು ಬುತ್ತಿ ಕಟ್ಟಿದ್ದು ಸಾಕು ಇನ್ನು ಕಾಯುವುದಕ್ಕೆಲ್ಲಿದೆ ಸಮಯ ನೆತ್ತಿ ಮೇಲಿದ್ದ ಸೂರ್ಯ ಸುಸ್ತಾಗಿ ಪಡುವಣಕ್ಕಿಳಿದ ಪಾಪ ನೀನೇ ಹಚ್ಚಿಬಿಡು ಬತ್ತಿ ಇಟ್ಟುಬಿಡು ಅಜ್ಜಿ ಕಾಲಿಗೆ ದೀಪ ***** * ಅಜ್ಜಿ ಕಾಲಿಗೆ ದೀಪ: ಗುಲಗುಂಜಿ ಆಟದಲ್ಲಿ ಸೋಲೊಪ್ಪಿಕೊಳ್ಳುವುದು
ಪಾಚಿಗಟ್ಟಿದ ನೆನಪ ಲೋಳೆಯ ಮೇಲೆ ಕಾಲಿಟ್ಟು ಕಣ್ಕಾಣದಂತೆಲ್ಲೋ ಜಾರದಿರು ಮನಸು ಇದ್ದಲ್ಲೆ ಕಣ್ಮುಚ್ಚಿ ಧೇನಿಸು ಕಂಡರೂ ಕಂಡಾವು ಒಂದೆರಡು ಕನಸು *****
ಸತ್ತ ನೆನ್ನೆ ಮೊನ್ನೆಗಳು ಎತ್ತೆತ್ತ ಹೋದವೋ ಕಣ್ಣಿ* ಕಿತ್ತು ಚದುರಿಬಿಟ್ಟವು ಕಣ್ಣಿಗೇ ಕಾಣದಂತೆ ಕತ್ತೆತ್ತಿ ನೋಡು ನಿನ್ನ ಮುಂದಿದೆ ಇಂದು ಇನ್ನೊಂದು ನಾಳೆ ಬದುಕ ಪುಸ್ತಕದ ಮತ್ತೊಂದು ಹಾಳೆ ***** *ಕಣ್ಣಿ: ಸಣ್ಣ ಕರುಗಳನ್ನು ಕಟ್ಟಿಹಾಕಲು ನುಣುಪಾಗಿ ಹೊಸೆದ ಹಗ್ಗ