ಹೇಗಮ್ಮಾ ಆಡೋದು ಹೋಲಿ

ಹಿಂದಿಂದ ಬಂದು ಎರಡೂಜಡೆ ಹಿಡಿದೆತ್ತಿ
ಮೂಸ್ತಾನೆ ಕತ್ತು
ಇದ್ದಕ್ಕಿದ್ದಂತೆ ಮುಂದಿಂದ ಬಂದು
ಎಲ್ಲರೆದುರೆ ಕೊಡ್ತಾನೆ ಗಲ್ಲಕ್ಕೆ ಮುತ್ತು
ಚಾವಣಿ ಮೇಲಿಂದ ಮೈಮೇಲೇ ಹಾರ್ತಾನೆ
ದಾವಣಿ ಸೆರಗೆಳೀತಾನೆ
ಎಲ್ಲೆಲ್ಲಾದರೂ ಕೈ ಹಾಕಿಬಿಡ್ತಾನೆ.
ಥೂ; ನಿಮ್ಮ ಕೃಷ್ಣ ತುಂಬಾ ಪೋಲಿ.
ಗೋಪಮ್ಮ ಅವನ ಜತೆ ಹೇಂಗಮ್ಮ
ನಾನು ಆಡೋದು ಹೋಲಿ?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕೇರಳ ಕೇರಳ ಕೇರಳ
Next post ಅನಾಮಿಕಗಳು

ಸಣ್ಣ ಕತೆ