ಕಡಲೂ ಹೇರಳ ಕೆರೆಯೂ ಹೇರಳ
ತುಂಬಿದ ಕೆರೆಯೂ ಹೇರಳ
ಕೇರಳ ಕೇರಳ ಕೇರಳ

ಬಿಸಿಲೂ ಹೇರಳ ಮಳೆಯೂ ಹೇರಳ
ಹರಿಯುವ ಹೊಳೆಯೂ ಹೇರಳ
ಕೇರಳ ಕೇರಳ ಕೇರಳ

ಮರವೂ ಹೇರಳ ಗಿಡವೂ ಹೇರಳ
ಹಸಿರಿನ ಮಲೆಗಳು ಹೇರಳ
ಕೇರಳ ಕೇರಳ ಕೇರಳ

ತಾಳೆಯು ಹೇರಳ ಬಾಳೆಯು ಹೇರಳ
ನಾರೀಕೇಳವು ಹೇರಳ
ಕೇರಳ ಕೇರಳ ಕೇರಳ

ಹೊಲವೊ ಹೇರಳ ಮನೆಯೂ ಹೇರಳ
ಮನೆಗಳ ಮಂದಿಯು ಹೇರಳ
ಕೇರಳ ಕೇರಳ ಕೇರಳ

ಕೂದಲು ಹೇರಳ ಕಾಡಿಗೆ ಹೇರಳ
ಕಣ್ಣಿನ ಸೊಬಗೂ ಹೇರಳ
ಕೇರಳ ಕೇರಳ ಕೇರಳ

ಬಟ್ಟೆಗೆ ಹೇರಳ ಹೊಟ್ಟೆಗೆ ವಿರಳ
ಮಾತಿಗೆ ಮಿಗುವುದೆ ಧಾರಾಳ
ಕೇರಳ ಕೇರಳ ಕೇರಳ
*****