ರಾಜ್ಯ ಅಧಿಕಾರ
ಕೈಯಲ್ಲಿ ಕಂಡವರ ಕತ್ತು ಕತ್ತರಿಸುವ ಚಕ್ರ
ಹದಿನಾರು ಸಾವಿರದ ನೂರಾ ಎಂಟು ಹೆಣ್ಣುಗಳು, ಇವೆಲ್ಲ ಸಿಕ್ಕ
ಮೇಲೆ
ನಂದಗೋಕುಲ ತಾಯಿ ಯಶೋಧ ಮಾತುಬಾರದ ಮೂಕ
ಹಸುಗಳು
ಮುಗ್ಧ ಗೋಪಿಕೆಯರು ಕೊಳಲು ನಿನ್ನನ್ನೇ ನಂಬಿಕೊಂಡಿದ್ದ ರಾಧೇ
ಇವರನ್ನೆಲ್ಲ ಮರೆತು ಎಂಥ ದ್ರೋಹ ಕೊಟ್ಟೆ
ನಿನಗೆ ಖಂಡಿತವಾಗಿಯೂ ದೇವರು ಸರಿಯಾದ ಶಿಕ್ಷೆ ಕೊಡಬೇಕಿತ್ತು
ಆದರೆ ಮಾಡುವುದೇನು? ನಾನೇ ದೇವರ ದೇವನೆಂದು
ಉಡಾಫೆಹೊಡೆದು ಬಚಾವಾಗಿಬಿಟ್ಟೆ.
*****