ಏ ರಘು
ನೀ ಮಾತಾಡಕ್ಹತ್ಯಂದ್ರ
ರಾಜಕೀಯದವರಂಗ
ಯದ್ವಾತದ್ವಾ ಎಡವಟ್ಟು
ಹೇರಾ ಪೇರಿ ಮಾತಾಡ್ತಿನೋಡು
ಎಲ್ಲಾರೂ ಝಬರಿಸಿ ಬೈದು
ನಿನ್ನ ಹೊರಗ ಹಾಕಿದ್ರ
ಮನಿಯೆಲ್ಲಾ ಭಣ ಭಣ
ಸ್ಮಶಾನದಂಗ ಮೌನ
ಏ ರಾಘು
ನಿನ್ನ ಯಡವಟ್ಟತನಾ ಬಿಡೋ
ನಮಗೂ ಭಣ ಭಣ ಬ್ಯಾಡಾ
ಮಾತಾಽಡ, ಬ್ಯಾಡ ಅನ್ನೋದಿಲ್ಲೋ
ಮಾತಾಡೋ ಮುನ್ನ ತಿಳಕೋ
ಅರಗಿಸಿ ಕೋ, ಕುಡಕೋ
ಆಮ್ಯಾಲ ಕಕ್ಕೋ
ಅಂದರ ಅದಕ್ಕೊಂದು
ಛಲೋ ಅರ್ಥಪಾ.
*****
Related Post
ಸಣ್ಣ ಕತೆ
-
ಸ್ನೇಹಲತಾ
೧೫-೯-೧೯.. ಈಗ ಮನಸ್ಸಿಗೆ ನೆಮ್ಮದಿಯೆನಿಸುತ್ತಿದೆ. ಇಂದಿನಿಂದ ಮತ್ತೆ ನನ್ನ ದಿನಚರಿ ಬರೆಯುವ ಕಾರ್ಯಕ್ರಮವನ್ನು ಆರಂಭಿಸಬೇಕು. ದಿನಚರಿಯೆ ನನ್ನ ಸಹಧರ್ಮಿಣಿ; ನನ್ನ ಸಹ-ಸಂಚಾರಿ; ಅದೆ ನನಗೆ ಸಂತಸ ಕೊಡುವುದು.… Read more…
-
ಸಿಹಿಸುದ್ದಿ
ಶ್ರೀನಿವಾಸ ದೇವಸ್ಥಾನದಲ್ಲಿ ಎರಡು ಪ್ರದಕ್ಷಿಣೆ ಹಾಕಿ ಮೂರನೇ ಪ್ರದಕ್ಷಿಣೆಗೆ ಹೊರಡುತ್ತಿದ್ದಂತೆಯೇ, ಯಾರೋ ಹಿಂದಿನಿಂದ "ಕಲ್ಯಾಣಿ," ಎಂದು ಕರೆದಂತಾಯಿತು. ಹಿಂತಿರುಗಿ ನೋಡಿದರೆ ಯಾರೋ ಮಧ್ಯ ವಯಸ್ಸಿನ ಮಹಿಳೆ ಬರುತ್ತಿದ್ದರು.… Read more…
-
ಕಳಕೊಂಡವನು
ಸುಮಾರು ಒಂದು ಗಂಟೆಯ ಪಯಣದಿಂದ ಸುಸ್ತಾದ ಅವನು ಬಸ್ಸಿನಿಂದ ಇಳಿದು ರಸ್ತೆಯ ಬದಿಗೆ ಬಂದು ನಿಂತು ತನ್ನ ಕೈಗಡಿಯಾರ ದೃಷ್ಟಿಸಿದ. ಮಧ್ಯಾಹ್ನ ಒಂದು ಗಂಟೆ. ಒಮ್ಮೆ ಮುಖ… Read more…
-
ಒಲವೆ ನಮ್ಮ ಬದುಕು
"The best of you is he who behaves best towards the members of his family" (The Holy Prophet) ವಾರದ ಸಂತೆ.… Read more…
-
ಇಬ್ಬರು ಹುಚ್ಚರು
ಸದಾಶಿವನಿಗೆ ಹೀಗೆ ಹುಚ್ಚನಾಗಿ ಅಲೆಯುವ ಅಗತ್ಯ ಖಂಡಿತಕ್ಕೂ ಇರಲಿಲ್ಲ. ಅವನಿಗೊಂದು ಹಿತ್ತಿಲು ಮನೆಯೂ, ಹಿತ್ತಿಲಲ್ಲಿ ಸಾಕಷ್ಟು ಫಲ ಕೊಡುವ ಗೇರು ಮರಗಳೂ ಇದ್ದವು. ದಿನಕ್ಕೆ ಸಾವಿರ ಬೀಡಿ… Read more…