ಕೌರವರ ಮಂತಣಗಾರನಾದ ಶಕುನಿ ಮಾಡಿದ ಕಾರ್ಯ ಅಕಾರ್ಯವೆಂದ ನಿಂದಿಸುವುದು, ಅಜ್ಞಾನದ ಪರಿಣಾಮವೆಂದು ಭಾವಿಸಬಹುದಲ್ಲವೆ? ೧ ಧೀರುರೇ, ಭಲಭಲರೆ! ಶಕುನಿಯೇ ನಾ ನಿನಗೆ ತಲೆವಾಗಿ ವಂದಿಸುವೆನೈ! ಭಾರತೀಯರ ಮೇಲೆ ನೀ ಮಾಡಿದುಪಕಾರ ಭಾರವಾಗಿಹುದು ಕಾಣೈ! ೨...
(ಒಂದು ಕತೆ) ಚೆಲುವು ಹಿರಿಯದೊ-ಹೃದಯ- ದೊಲವು ಹಿರಿಯದೊ? ಚೆಲುವಿನಲಿಯೆ ಒಲವು ಇಹುದೊ? ಒಲವಿನಲಿಯೆ ಚೆಲುವು ಇಹುದೊ? ಎಳೆಯ ಚೆನ್ನನೊಬ್ಬನಿಂದು ಕೆಲೆದು ಕುಣಿದು ಆಡಿ .ಹಾಡಿ, ಕುಳಿತ ಜನರ ಕಣ್-ಮನಗಳ ಸೆಳೆದುಕೊಂಡ ಸೊಬಗನೂಡಿ. ನೆರೆದ ಮಂದಿಯಲ್ಲಿ...
(ಜೀವನದಲ್ಲಿಯ ಒಂದು ಅನುಭವದ ಅನ್ಯೋಕ್ತಿಯಿದು.) ೧ ‘ಇರುಳೆಲ್ಲವೂ ತಿರುಗಿ ತಿರೆಗೆ ಚೆಲುವನು ಬೀರಿ, ನರರ ಕಣ್‌ಮನ ತಣಿವ ತೆರದಿ ಒಲವನು ತೂರಿ, ಚರಿತಾರ್ಥನಾಗಲಿಕೆ ಸರಿಯಿದೇದಿನ’ ಎಂದು, ಹುಣ್ಣಿಮಯ ತಣ್‌ಗದಿರ ತುಂಬುಮೊಗದಲಿ ಬಂದು, ಅಳತೆಯಿಲ್ಲದ ಪಳುಕು-...
ಭಾರತಕ್ಕೆ ಬಂದಿತಂತೆ ಸ್ವಾತಂತ್ರದ ಹುಣ್ಣಿವೆ, ಕನ್ನಡಿಗರಿಗೇನಿದೆ, ಬರಿ ಕಂಬನಿಗಳ ಕಣ್ಣೆವೆ! ೧ ಈ ಹಬ್ಬದ ಬಯಕೆಯಿಂದ ನಾವು ದುಡಿದುದೆಷ್ಟು! ‘ಹಬ್ಬ ಬಹುದು, ಬಹುದು!’ ಎಂದು ಹಿಗ್ಗಿ ಮಿಡಿದುದೆಷ್ಟು! ಆದರೇನು? ಇಲ್ಲ ನಮಗೆ ಸುಖವು ಎಳ್ಳಿನಷ್ಟು-...
(ಒಂದು ಸಾಂಪ್ರದಾಯಿಕ ಭಾವನೆಯ ಉತ್ಪ್ರೇಕ್ಷೆ) ೧ ರಾತ್ರಿ ಸತೀಪತಿ ಚಂದಿರನು-ಕತ್ತಲೆಯೆಂಬಾ ಕುಲಟೆಯಲಿ ಇರುಳೆಲ್ಲವು ರತನಾಗಿರುತ-ಪರಿಪರಿಯ ಸರಸವಾಡುತಲಿ ಜಗಕಿಂದು ಮೊಗವ ತೋರಿಸಲು-ಬಗೆಯೊಳು ನಾಚಿಕೆಯೊಂದುತಲಿ, ‘ಮಲಗಿದ ಜನರೇಳುವ ಮೊದಲು ಮರೆಯಾಗುವೆ’ ನೆಂದು ಜವದೊಳು ಪಡುವಲ ಸೀಮೆಯ ಬೆಟ್ಟದೊಳು...