ಭರತವಾಕ್ಯ

ಹೊಸತೆ ಇರಲಿ, ಹಳತೆ ಇರಲಿ,
ಒಳಿತು ಯಾವುದೊ, ಬಾಳ್ಗೆ ಬರಲಿ!
ಮೂಡಲೇನು, ಪಡುವಲೇನು?
ಬೆಳಕ ಬದುಕಿಗೆ ಹೂಡಿ ತರಲಿ !
ಹಳ್ಳ-ತಿಟ್ಟು ಸರಿಯಲಿ-
ಒಳ್ಳೆ ದಾರಿ ಸಮೆಯಲಿ! ೧

ಸೃಷ್ಟಿ ದೇವಿ ಕೊಟ್ಟ ಪಯಿರ
ಒಟ್ಟು ಗೂಡುತಲೆಲ್ಲರೊಕ್ಕಲಿ!
ಕೊಟ್ಟುಕೊಂಡು ಎಲ್ಲರುಂಡು
ಹೊಟ್ಟೆಯುರಿಯನು ತಿಕ್ಕಿ ಮುಕ್ಕಲಿ!
ದುಡಿದು ಒಡಲು ಸೊಕ್ಕಲಿ-
ಅಲಸಿಕೆಯದು ಬಿಕ್ಕಲಿ! ೨

ಇದ್ದ ಜನರ ಕೊಡುವ ಕೈಯಿ
ಇಲ್ಲದವರನು ಬಳಿಗೆ ಕರೆಯಲಿ!
ಬಿದ್ದ ಜನರು ಮೇಲಕೆದ್ದು
ಮುಂದೆ ಇದ್ದವರನ್ನು ಬೆರೆಯಲಿ!
ಶ್ರದ್ಧೆ ಸ್ನೇಹ ಮರೆಯಲಿ-
ಇಗ್ಗು ನೆಲವ ಹೊರೆಯಲಿ! ೩

ದನಿಯನೆತ್ತಿ ಕೊಳಲು ವೀಣೆ
ಇನಿದು ಗಾನವ ಬಿಡದ ಮಾಡಲಿ!
ಜನರು ಜಗಳ-ವಾದವುಳಿದು
ಸರಸ ಕವನವ ಸತತ ಹಾಡಲಿ !
ಧರೆಯೆ ಸ್ವರ್‍ಗವಾಗಲಿ-
ನರರೆ ಅಮರರಾಗಲಿ! ೪
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅಪರಾಧದ ಒಂದು ಮುಖವಾಗಬಲ್ಲ – ವೈವಾಹಿಕ ಅತ್ಯಾಚಾರ
Next post ತ್ಯಾವಣನಾಯಕ

ಸಣ್ಣ ಕತೆ

  • ಮುಗ್ಧ

    ಆಲೀ........ ಏ ಆಲೀ........ ಐಸಮ್ಮ ಮಗನನ್ನು ಎಷ್ಟು ಜೋರಾಗಿ ಕರೆದರೂ ಆಲಿಯಿಂದ ಉತ್ತರ ಬರಲಿಲ್ಲ. ಒಂದು ಕಡೆ ಕತ್ತಲೆಯಾಗುತ್ತಾ ಬರುತ್ತಿದೆ. ಬೀಡಿ ಕಟ್ಟುಗಳನ್ನು ಸಂಜೆಯ ಒಳಗೆ ಬ್ರಾಂಚಿಗೆ… Read more…

  • ಹನುಮಂತನ ಕಥೆ

    ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…

  • ಆನುಗೋಲು

    ರೈಲು ನಿಲ್ದಾಣದಲ್ಲಿ ನಿಂತಿತು! "ಪೇಪರ! ಡೇಲಿ ಪೇಪರ!........ಟಾಯಿಮ್ಸ, ಫ್ರೀ ಪ್ರೆಸ್, ಸಕಾಳ! ಪ್ಲಾಟ ಫಾರ್ಮ ಮೇಲಿನ ಜನರ ನೂರೆಂಟು ಗದ್ದಲದಲ್ಲಿ ಈ ಧ್ವನಿಯು ಎದ್ದು ಕೇಳಿಸುತ್ತಿತ್ತು. ಹೋಗುವವರ… Read more…

  • ಯಿದು ನಿಜದಿ ಕತೀ…

    ಯೀ ಕತೀನ ನಾ... ಯೀಗಾಗ್ಲೇ, ಬರ್ಲೇಬೇಕಾಗಿತ್ತು! ಆದ್ರೆ ನಾ ಯೀತನ್ಕ...  ಯಾಕೆ ಬರ್ಲೀಲ್ಲ? ನನ್ಗೇ ಗೊತ್ತಿಲ್ಲ. ಯಿದು ನಡೆದಿದ್ದು... ೧೯೬೬ರಲ್ಲಿ. ‘ವುಗಾದಿ ಮುಂದೆ ತಗಾದಿ...’ ಅಂಬಂಗೆ,  ವುಗಾದಿ… Read more…

  • ಜಡ

    ಮಾರಯ್ಯನನ್ನು ಅವನ ಹಳ್ಳಿಯಲ್ಲಿ ಹಲವರು ಹಲವು ಹೆಸರುಗಳಿಂದ ಕರೆಯುತ್ತಿದ್ದರು. ಹಾಗಾಗಿ ಅವನ ನಿಜವಾದ ಪೂರ್ತಿ ಹೆಸರು ಮಾರಯ್ಯನೆಂಬುವುದು ಸಮಯ ಬಂದಾಗ ಅವನಿಗೆ ಒತ್ತಿ ಹೇಳಬೇಕಾಗಿ ಬರುತ್ತಿತ್ತು. ಅಂತಹ… Read more…