ಬಾಳುವೆಯ ಗೂಡೊಳಗೆ ತತ್ತಿಯಿದನೆಂದು
ಮೃತ್ಯು ತಾನಿಕ್ಕಿ ಮೆಯ್ಗರೆಯಿತೆನಗರಿವೆ?
ಆಸೆಯಾ ಗರಿಗೆದರಿ ಬಯಲಲಲೆವಂದು
ನಿನ್ನನಾಂ ಮರೆತೆ, ಮರೆತೆನ್ನ ತಿರಿತಿರಿವೆ! ೪
ಬಾಸೆಯಂ ಬೇಡಿ ನಾನರಚುವಂದೆನ್ನ
ಕಯ್ಯೊಳಾರ್ಮರಸಿಟ್ಟರೀ ಗಿರಿಕೆಯನ್ನ?
ನಾನರಿಯೆ, ಗುಲ್ಲನಿದನಾಡಿಸುತ ನಿನ್ನ
ಮರೆತೆನೊಯ್ಯನೆ ಮರೆತೆ ಮನವಿಯನ್ನೆನ್ನ! ೮
* *
ತಿರುತಿರುಗಿ ಬಿರಿದುದೀ ಗಿರುಗಟೆಯ ಬಳಲು!
ಇರುಳ ಕಾರೆರಕೆ ಬೆಂಬತ್ತುತಿದೆ ಸರಿಸಂ!-
ನೆನವರಿವುದೀಗೆರೆಯ, ನಿನ್ನ ಹೆಸರಾಂತು
ಕಂಗಳಿಂ ಕರೆವುದೆನ್ನೆದೆಯುಕ್ಕುವಳಲು! ೧೨
ಕಣ್ದೆರೆಯ, ನಿನ್ನ ಕಣ್ಣೆಂದುಮಿನಿದೆರಸಂ1
೨ಮರಸದೆನ್ನಲಿ ಎನ್ನು! – ನಿರವಿಸೆನಗಿಂತು!
*****
೧ ಇನಿದಾದ ಉನ್ಮೀಲನ
೨ ಮರೆಯಾಗಿಸದು