ಸುಂದರ ಈ ನಾಡು – ನಮ್ಮ
ಕಲಿಗನ್ನಡ ನಾಡು
ಸ್ಫೂರ್ತಿಯ ನೆಲೆವೀಡು – ಅದ
ರಿಂದಲೇ ಈ ಹಾಡು
ಬೆಳ್ಗೊಳ ಪಟ್ಟದಕಲ್ಲು – ಹಾಳ್
ಹಂಪೆಯ ಮೂರ್ತಿಯ ಸೊಲ್ಲು
ಅರಿಯುತಲಿ ಏಳು – ಅರಿತು
ಕನ್ನಡತನ ಮೈ ತಾಳು
ಕೀರ್ತನೆ ಚಂಪೂ ವಚನ – ವಿವಿಧ
ಪದಗಳ ಆದಿ ಕವನ
ಹರಿದಿಹ ನುಡಿ ಗಂಗೆಯಲಿ – ಮಿಂದು
ಕನ್ನಡಕೆ ಮನ ಸಲಿಸು
ಪುಲಕೇಶಿ ನೃಪತುಂಗ – ವೀರ
ಚೆನ್ನಮ್ಮಾಜಿಯ ರಂಗ
ಮಣ್ಣಿನ ಸತ್ವವನರಿತು – ಆದ
ಅನ್ಯಾಯಕೆ ದನಿ ಎತ್ತು
ಕದಂಬ ಹೊಯ್ಸಳ ಗಂಗ – ವೀರ
ರಕ್ಕಸ ತಂಗಡಿ ರಂಗ
ಚಿತ್ರವ ಕಣ್ಣಲಿ ಹಿಡಿದು – ನಮ್ಮ
ವಿರೋಧಿಗಳಿಗೆದೆ ಒಡ್ಡು
*****