ಕೋರಿಕೆ

ಮರೆಯದಿರಣ್ಣ ಕನ್ನಡವ; ಜನ್ಮಕೊಟ್ಟ ಈ ಕನ್ನಡವ ಮಾತು ಕೊಟ್ಟ ನುಡಿಗನ್ನಡವ ತುತ್ತು ಕೊಟ್ಟ ತಾಯ್ಗನ್ನಡವ ಹಳಿಯದಿರಣ್ಣ ಕನ್ನಡವ; ತಾಯ್ಮೊಲೆ ಉಣಿಸಿದ ಕನ್ನಡವ ವಿದ್ಯೆಯ ನೀಡಿದ ಕನ್ನಡವ ಸಭ್ಯತೆ ಕಲಿಸಿದ ಕನ್ನಡವ ಅಳಿಸದಿರಣ್ಣ ಕನ್ನಡವ; ಶತಶತಮಾನದ...

ಧಾರವಾಡದ ತಾಯೆ

ಧಾರವಾಡ ತಾಯೆ ನಿನ್ನದೆಂತ ಮಾಯೆ! ಚಿತ್ತ ತಣಿಸುವ ಸತ್ಯ ಸಾರುವ ತತ್ತ್ವಲೇಪದ ಕಾವ್ಯ ಕರ್ಮಕೆ ಮಡಿಲು ಆದ ತಾಯೆ-ಆಹ ನಿನ್ನದೆಂತ ಮಾಯೆ! ಲೋಕ ಮೆಚ್ಚುವ ಸತ್ವ ಮಿಂಚುವ ಆದಿ ಪಂಪ ಆ ಕುವರವ್ಯಾಸರ ನಿನ್ನ...

ಗಾಲಿಗಳು

ಎಷ್ಟೇ ಭಾಷೆಗಳಿರಲೀ ನೆಲದಲಿ ಕನ್ನಡ ರಥಕವು ಗಾಲಿಗಳು ಕರ್ನಾಟಕದ ಪ್ರಗತಿಯ ಪಥದಲಿ ಗೌರವಾನ್ವಿತ ಪಾತ್ರಗಳು ಕಾವೇರೀ ಜಲ ಕುಡಿಯುತ ತಣಿಯಲಿ ನಮ್ಮೀ ಭಾಷಾ ಸೋದರರು ಆಗಿಹ ಅನ್ಯಾಯವ ಅರಿಯುತಲಿ ದುಡಿಯಲಿ ನ್ಯಾಯಕೆ ಬಾಂಧವರು ಕನ್ನಡದನ್ನವ...

ಕಪ್ಪು-ಇತಿಹಾಸ

ಬೇಲೂರ ಗುಡಿಯಲ್ಲಿ ಕಲೆಯಾದ ಶಿಲೆಯಲ್ಲಿ ದೀನ ದುರ್ಬಲರೊಡಲ ಬಿಸಿಯುಸಿರಿದೆ ಆ ಬಿಸಿಯು ಮೈ ಸೋಕಿ ತೆರೆದ ಈ ಕಣ್ಮುಂದೆ ಕಪ್ಪು-ಇತಿಹಾಸ ಸಂಪುಟ ತೆರೆದಿದೆ ಭವ್ಯತೆಯ ಹಂಪೆಯಲಿ ಬೆವರು-ಕಂಬನಿ-ರಕ್ತ ಹೊಳೆ ತುಂಬೆ ಭದ್ರೆಯಾಗಿ ಹರಿದಾಡಿದೆ ಇದರಲ್ಲಿ...

ಕನ್ನಡ ನಾಡಿನ ಹಿರಿಮೆ

ಕನ್ನಡ ನಾಡು ಚಿನ್ನದ ಬೀಡು ಪಾವನವೀ ನಾಡು | ಎಲ್ಲು ಚೆಲುವಿನ ಸಿರಿ ನೋಡು ಕನ್ನಡ ನಾಡು ಕಿನ್ನರ ಬೀಡು ರೂಪಸಿಯರ ನಾಡು | ಸಿಂಹ ವಾಣಿಗಳಾ ನೋಡು ಕನ್ನಡ ನಾಡು ಹಸಿರಿನ ಬೀಡು...

ಜಾಗೃತ ಗೀತೆ

ಬಂಡವಾಳವಾಗುತಿದೆ ಕನ್ನಡ ಭಾಷೆ - ನಮ್ಮ ಕನ್ನಡ ಭಾಷೆ ಬಂಡವಾಳವಾಗುತಲಿ ಅಳಿದು ಹೋಗುತ್ತಲಿದೆ ಕನ್ನಡ ಭಾಷೆ - ನನ್ನ ಕನ್ನಡ ಭಾಷೆ ಓಟಿಗಾಗಿ ಸೀಟಿಗಾಗಿ ಜನರ ಕುಣಿಸೊ ನೋಟಿಗಾಗಿ ಕನ್ನಡವನೆ ನಂಬಿಹರು ಸ್ವಾರ್ಥಭರಿತ ಧೂರ್ತರು...

ನನ್ನೆದೆಯ ಕೋಗಿಲೆ

ಎದೆಯ ಮಾಮರದಲ್ಲಿ ಕುಳಿತಿರುವ ಕೋಗಿಲೆಯೆ ಹಾಡು ನೀ ಸ್ವರವೆತ್ತಿ ಕನ್ನಡದಲ್ಲಿ ಈ ಮಣ್ಣ ಸತ್ವವನು ಇದರಂತರಾರ್ಥವನು ದಿಕ್ ದಿಕ್ಕಿಗೂ ಹರಡು ಅಭಿಮಾನದಲ್ಲಿ ಕವಿ ಪಂಪನ ಅರಿಯುತ ರನ್ನನ ಮನಗಾಣುತ ವಚನ ಸಾಗರದಲ್ಲಿ ಮಿಂದೇಳುತ ನಾರಣಪ್ಪಗೆ...

ಕನ್ನಡದ ಜನ

ಕನ್ನಡಕೆ ಕೈಯೆತ್ತಿ ಓ ನನ್ನ ಬಂಧುಗಳೆ ಇಲ್ಲವಾದರೆ ತೊಲಗಿ ಈ ನೆಲದ ‘ಭಾರ’ಗಳೆ ಉಂಡ ಅನ್ನದ ಋಣವ ತೀರಿಸದೆ ಏಕಿಂತು ಮುಳ್ಳಾಗಿ ನಿಲ್ಲುವಿರಿ ತಾಯ್ ನಡೆವ ಹಾದಿಗೆ? ಕನ್ನಡದ ಈ ನಾಡು ಸಿಂಗರದ ಬೀಡು...

ಅಭಿಮಾನದ ಹಣತೆ

ಹೊತ್ತಿಸು ಎದೆಯಲಿ ಕನ್ನಡಿಗ ಅಭಿಮಾನದ ಹಣತೆ ತಾಯ್ನಾಡಿಗೆ ಬೆಳಕಾಗುತಲಿ ಕಾಯ್ದುಕೊ ನಿನ್ನ ಘನತೆ ಇತಿಹಾಸದ ಪುಟಪುಟದಲ್ಲೂ ಬೆಳಗಿದೆ ಕರುನಾಡು ಏತಕೊ ಏನೋ ಸೊರಗುತಿದೆ ಈ ದಿನದಲಿ ನೋಡು ಪೋಷಿಸಿ ಬೆಳಸಿಹ ಕಾವೇರಿ ಹೊರಟಿಹಳು ಅಲ್ಲಿ...

ಕೋಲಾಟದ ಪದ

ಬಾರಣ್ಣ ನೀ ನೋಡು ಕರ್ನಾಟಕಾ ನಾಡು ದೇವಿ ಚಾಮುಂಡಿಯ ಗುಡಿ ನೋಡು; ನೋಡುತ್ತ ಕುಣಿಯುತ ನಲಿದಾಡು ಇನ್ನೆಲ್ಲು ಕಾಣದ ಮುಂದೆಲ್ಲು ನೋಡದ ಸೌಂದರ್ಯವಿಲ್ಲಿ ನೋಡು ಬಾರೊ; ಎದೆಬಿಚ್ಚಿ ರಾಗ ಹಾಡು ಬಾರೊ ಮುಗಿಲುದ್ದ ಗೋಪುರ...