ಕೋಲಾಟದ ಪದ

ಬಾರಣ್ಣ ನೀ ನೋಡು
ಕರ್ನಾಟಕಾ ನಾಡು
ದೇವಿ ಚಾಮುಂಡಿಯ ಗುಡಿ ನೋಡು;
ನೋಡುತ್ತ ಕುಣಿಯುತ ನಲಿದಾಡು
ಇನ್ನೆಲ್ಲು ಕಾಣದ
ಮುಂದೆಲ್ಲು ನೋಡದ
ಸೌಂದರ್ಯವಿಲ್ಲಿ ನೋಡು ಬಾರೊ;
ಎದೆಬಿಚ್ಚಿ ರಾಗ ಹಾಡು ಬಾರೊ
ಮುಗಿಲುದ್ದ ಗೋಪುರ
ಮೈಲುದ್ದ ದೇಗುಲ
ಕಣ್ಣಾರೆ ಕಂಡು ನಲಿದಾಡೊ;
ಚಿಂತೆಯ ಮರೆತು ಕುಣಿದಾಡೊ
ಕೊಡಗಿನ ಕಾವೇರಿ
ಮಲೆನಾಡ ಮೈಸಿರಿ
ಜೋಗ ಜಲಪಾತ ನೋಡೊ ಬಾರೊ;
ಚೆಲುವಿನ ಕಡಲಲ್ಲಿ ಈಜು ಬಾರೊ
ಬೆಳ್ಗೊಳದ ಗೊಮ್ಮಟ
ಬಿಜಾಪುರದ ಗೊಮ್ಮಟ
ದಿಟ್ಟತನವನ್ನು ನೋಡು ಬಾರೊ;
ಗಂಡೆದೆಯ ನಿಲುವ ತಾಳು ಬಾರೊ
ಶಿಲ್ಪ ಕಲಾ ಬೇಲೂರು
ಸಿಂಹಿಣಿಗಳ ಕಿತ್ತೂರು
ಪಂಪಕವಿಯ ಬನವಾಸಿ ನೋಡು ಬಾರೊ;
ಭ್ರಾತೃತ್ವದ ಮಾಲೆ ಹಿಡಿದು ಬಾರೊ
ಪಡುವಣದ ಕರಾವಳಿ
ಕಣ್ಣಿಗೆ ಶೋಭಾವಳಿ
ಸಹ್ಯಾದ್ರಿ ಗಿರಿಸಾಲು ನೋಡು ಬಾರೊ;
ಅಭಿಮಾನದ ಗೀತೆ ಹಾಡು ಬಾರೊ
ಭೂದೇವಿ ಮೆಚ್ಚಿದವಳು
ಭಾರತಿಯ ಹಿರಿಮಗಳು
ಭುವನೇಶ್ವರೀ ತವರ ನೋಡು ಬಾರೊ;
ವಿಶ್ವಮಾನವನಾಗಿ ಕೂಡು ಬಾರೊ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬಾರಣೆ
Next post ಚಾತಕ

ಸಣ್ಣ ಕತೆ

  • ಯಿದು ನಿಜದಿ ಕತೀ…

    ಯೀ ಕತೀನ ನಾ... ಯೀಗಾಗ್ಲೇ, ಬರ್ಲೇಬೇಕಾಗಿತ್ತು! ಆದ್ರೆ ನಾ ಯೀತನ್ಕ...  ಯಾಕೆ ಬರ್ಲೀಲ್ಲ? ನನ್ಗೇ ಗೊತ್ತಿಲ್ಲ. ಯಿದು ನಡೆದಿದ್ದು... ೧೯೬೬ರಲ್ಲಿ. ‘ವುಗಾದಿ ಮುಂದೆ ತಗಾದಿ...’ ಅಂಬಂಗೆ,  ವುಗಾದಿ… Read more…

  • ಉರಿವ ಮಹಡಿಯ ಒಳಗೆ

    ಸಹ ಉದ್ಯೋಗಿಗಳ ಓಡಾಟ, ಗ್ರಾಹಕರೊಂದಿಗಿನ ಮೊಬೈಲ್ ಹಾಗೂ ದೂರವಾಣಿ ಸಂಭಾಷಣೆಗಳು, ಲ್ಯಾಪ್‌ಟಾಪಿನ ಶಬ್ದಗಳು ಎಲ್ಲಾ ಸ್ತಬ್ದವಾದಾಗಲೇ ಮಧುಕರನಿಗೆ ಕಚೇರಿಯ ಸಮಯ ಮೀರಿದ್ದು ಅರಿವಾಯಿತು. ಕುಳಿತಲ್ಲಿಂದಲೇ ತನ್ನ ಕುತ್ತಿಗೆಯನ್ನು… Read more…

  • ಮೋಟರ ಮಹಮ್ಮದ

    ನಮ್ಮಂತಹ ಈಗಿನ ಜನಗಳಿಗೆ ಹೊಲ, ಮನೆ, ಪೂರ್ವಾರ್ಜಿತ ಆಸ್ತಿ ಪಾಸ್ತಿಗಳಲ್ಲಿ ಹೆಚ್ಚು ಆದರವಿಲ್ಲೆಂದು ನಮ್ಮ ಹಿರಿಯರು ಮೇಲಿಂದ ಮೇಲೆ ಏನನ್ನೋ ಒಟಗುಟ್ಟುತ್ತಿರುತ್ತಾರೆ. ನಾವಾದರೋ ಹಳ್ಳಿಯನ್ನು ಕಾಣದೆ ಎಷ್ಟೋ… Read more…

  • ಕರೀಮನ ಪಿಟೀಲು

    ಕರೀಮನ ಹತ್ತಿರ ಒಂದು ಪಿಟೀಲು ಇದೆ. ಅದನ್ನು ಅವನು ಒಳ್ಳೆ ಮಧುರವಾಗಿ ಬಾರಿಸುತ್ತಾನೆ. ಬಾರಿಸುತ್ತ ಒಮ್ಮೊಮ್ಮೆ ಭಾವಾವೇಶದಲ್ಲಿ ತನ್ನನ್ನು ತಾನು ಮರೆತುಬಿಡುತ್ತಾನೆ. ಕರೀಮನ ಪಿಟೀಲುವಾದವೆಂದರೆ ಊರ ಜನರೆಲ್ಲರೂ… Read more…

  • ಬೂಬೂನ ಬಾಳು

    ನಮ್ಮೂರು ಚಿಕ್ಕ ಹಳ್ಳಿ. ಹಳ್ಳಿಯೆಂದ ಕೂಡಲೆ, ಅದಕ್ಕೆ ಬರಬೇಕಾದ ಎಲ್ಲ ವಿಶೇಷಣಗಳೂ ಬರಬೇಕಲ್ಲವೇ ? ಸುತ್ತಲೂ ಹಸುರಾಗಿ ಒಪ್ಪುವ ಹೊಲಗಳು, ನಾಲ್ಕೂ ಕಡೆಗೆ ಸಾಗಿ ಹೋಗುವ ದಾರಿಗಳು,… Read more…