ಎಷ್ಟೇ ಭಾಷೆಗಳಿರಲೀ ನೆಲದಲಿ
ಕನ್ನಡ ರಥಕವು ಗಾಲಿಗಳು
ಕರ್ನಾಟಕದ ಪ್ರಗತಿಯ ಪಥದಲಿ
ಗೌರವಾನ್ವಿತ ಪಾತ್ರಗಳು
ಕಾವೇರೀ ಜಲ ಕುಡಿಯುತ ತಣಿಯಲಿ
ನಮ್ಮೀ ಭಾಷಾ ಸೋದರರು
ಆಗಿಹ ಅನ್ಯಾಯವ ಅರಿಯುತಲಿ
ದುಡಿಯಲಿ ನ್ಯಾಯಕೆ ಬಾಂಧವರು
ಕನ್ನಡದನ್ನವ ಉಂಡವರು
ಕರುನಾಡವರೆನಿಸಿರುವವರು
ಬೆಳಗಾವಿಯ ಸಿರಿ ಸುಂದರ ಬೀಡಲಿ
ಅನ್ಯಭಾಷೆಯನು ನುಡಿವವರು
ಈ ಮಣ್ಣಿನ ತಾವ್ ಕನ್ನಡಿಗರೆಂಬ
ಸತ್ಯವನರಿದು ಮರೆತವರು
ಕಾಯಲಿ ಕನ್ನಡದೇಕೀಕರಣ
ಮರೆಯಲಿ ಕನಸಿದೆ ಛಿದ್ರೀಕರಣ
*****