ಎದೆಯ ಮಾಮರದಲ್ಲಿ ಕುಳಿತಿರುವ ಕೋಗಿಲೆಯೆ
ಹಾಡು ನೀ ಸ್ವರವೆತ್ತಿ ಕನ್ನಡದಲ್ಲಿ
ಈ ಮಣ್ಣ ಸತ್ವವನು ಇದರಂತರಾರ್ಥವನು
ದಿಕ್ ದಿಕ್ಕಿಗೂ ಹರಡು ಅಭಿಮಾನದಲ್ಲಿ
ಕವಿ ಪಂಪನ ಅರಿಯುತ ರನ್ನನ ಮನಗಾಣುತ
ವಚನ ಸಾಗರದಲ್ಲಿ ಮಿಂದೇಳುತ
ನಾರಣಪ್ಪಗೆ ನಮಿಸಿ ಸವಜ್ಞಗೆ ಶೃತಿ ಬೆರಸಿ
ರಸಋಷಿಯ ತತ್ವದಲಿ ಪದ ಪಡೆಯುತ
ಹಾಡು ನೀ ಸ್ವರವೆತ್ತಿ ಕನ್ನಡದಲ್ಲಿ
ಸಿರಿಗನ್ನಡ ಪೆಂಪನು ಎಲ್ಲೆಡೆ ಚೆಲ್ಲಿ
ಬೇಲೂರ ಗುಡಿಗಳಲಿ ಮಲೆನಾಡ ಗಿರಿಗಳಲಿ
ಗೊಮ್ಮಟನ ನೆತ್ತಿಯಲಿ ಹಾರಾಡುತ
ಧುಮ್ಮಿಕ್ಕೊ ಜೋಗದಲಿ ಭೋರ್ಗರೆವ ಕಡಲಿನಲಿ
ಕಾವೇರಿ ಮಡಿಲಿನಲಿ ಕಣ್ ತೊಳೆಯುತ
ಹಾಡು ನೀ ಸ್ವರವೆತ್ತಿ ಕನ್ನಡದಲ್ಲಿ
ಜಗದೈಕ್ಯ ಗೀತೆಗೆ ದನಿ ಬೆಸೆಯುತಲಿ
*****