ಕಪ್ಪು-ಇತಿಹಾಸ

ಬೇಲೂರ ಗುಡಿಯಲ್ಲಿ ಕಲೆಯಾದ ಶಿಲೆಯಲ್ಲಿ
ದೀನ ದುರ್ಬಲರೊಡಲ ಬಿಸಿಯುಸಿರಿದೆ
ಆ ಬಿಸಿಯು ಮೈ ಸೋಕಿ ತೆರೆದ ಈ ಕಣ್ಮುಂದೆ
ಕಪ್ಪು-ಇತಿಹಾಸ ಸಂಪುಟ ತೆರೆದಿದೆ
ಭವ್ಯತೆಯ ಹಂಪೆಯಲಿ ಬೆವರು-ಕಂಬನಿ-ರಕ್ತ
ಹೊಳೆ ತುಂಬೆ ಭದ್ರೆಯಾಗಿ ಹರಿದಾಡಿದೆ
ಇದರಲ್ಲಿ ಮಿಂದೆದ್ದ ಪ್ರಜ್ಞಾಂತರಂಗದಲಿ
ಜಿಗಣೆಗಳ ನೂರು ನಿಜ ಕಥೆ ಜರುಗಿದೆ
ಜಂಬೂ ಸವಾರಿಯಲ್ಲಿ ಮೈಸೂರ ಬೀದಿಗಳಲಿ
ಹೊಟ್ಟೆ-ಬಟ್ಟೆ ಕಟ್ಟಿದ ಹಣ ಚೆಲ್ಲಿದೆ
ಬಡತನ-ಬಿಸಿಗಾಳಿಯಲು ಆನೆ-ಅಂಬಾರಿಗಳು
ಜೀವಂತ ಶವಗಳ ಜೊತೆ ಸಾಗಿದೆ
ಸುವರ್ಣಾಕ್ಷರದಲಿ ಮೂಡಿದ ಕರ್ಣಾಟ ಕತೆ
ಕತ್ತಲಲಿ ಕರಗಿದವರ ಮರೆಮಾಡಿದೆ
ಇದನರಿತು ತೆರೆದ ಒಳ-ಕಂಗಳಿಗೆ ನಿಜವುಣಿಸೆ
ಕಪ್ಪು-ಇತಿಹಾಸ ಸಂಪುಟ ತೆರೆದಿದೆ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅಪೂರ್‍ವ ತ್ಯಾಗ
Next post ಕನ್ನಡಿಗರ ತಾಯಿ

ಸಣ್ಣ ಕತೆ

  • ಮೋಟರ ಮಹಮ್ಮದ

    ನಮ್ಮಂತಹ ಈಗಿನ ಜನಗಳಿಗೆ ಹೊಲ, ಮನೆ, ಪೂರ್ವಾರ್ಜಿತ ಆಸ್ತಿ ಪಾಸ್ತಿಗಳಲ್ಲಿ ಹೆಚ್ಚು ಆದರವಿಲ್ಲೆಂದು ನಮ್ಮ ಹಿರಿಯರು ಮೇಲಿಂದ ಮೇಲೆ ಏನನ್ನೋ ಒಟಗುಟ್ಟುತ್ತಿರುತ್ತಾರೆ. ನಾವಾದರೋ ಹಳ್ಳಿಯನ್ನು ಕಾಣದೆ ಎಷ್ಟೋ… Read more…

  • ಅಪರೂಪದ ಬಾಂಧವ್ಯ

    ಹೆತ್ತ ತಾಯಿ ಬಿಟ್ಟುಹೋದ ಎರಡು ಮುಂಗಸಿ ಮರಿಗಳು ಅನಾಥವಾಗಿ ಚೀರಾಡುತ್ತಿದ್ದುದು, ಮನೆಯ ಮಕ್ಕಳ ಕಣ್ಣಿಗೆ ಬಿದ್ದಿತು. "ಅಪ್ಪಾ ಇಲ್ಲಿ ನೋಡು, ಮುಂಗುಸಿ ಮರಿ ಅಳುತ್ತಾ ಇವೆ. ಅದಕ್ಕೆ… Read more…

  • ಮಿಂಚಿನ ದೀಪ

    ಸಂಜೆ ಮೊಗ್ಗೂಡೆದಿತ್ತು. ಆಕಾಶದ ತುಂಬೆಲ್ಲಾ ಬಣ್ಣದ ಬಾಟಲಿ ಉರುಳಿಸಿದ ಹಾಗೆ ಕೆಂಪು, ನೀಲಿ ಬಣ್ಣ ಚೆಲ್ಲಿ, ಚಳಿಗಾಲದ ಸಂಜೆಯ ಮಬ್ಬಿನ ತೆಳುಪರದೆಯ ‘ಓಡಿನಿ’ ಎಲ್ಲವನ್ನೂ ಸುತ್ತುವಂತೆ ಪಸರಿಸಿಕೊಂಡಿತ್ತು.… Read more…

  • ದೇವರು ಮತ್ತು ಅಪಘಾತ

    ಊರಿನ ಕೊನೆಯಂಚಿನಲ್ಲಿದ್ದ ಕೆರೆಯಂಗಳದಲ್ಲಿ ಅಣಬೆಗಳಂತೆ ಮೈವೆತ್ತಿದ್ದ ಗುಡಿಸಲುಗಳಲ್ಲಿ ಕೊನೆಯದು ಅವಳದಾಗಿತ್ತು. ನಾಲ್ಕೈದು ಸಾರಿ ಮುನಿಸಿಪಾಲಿಟಿಯವರು ಆ ಗುಡಿಸಲುಗಳನ್ನು ಕಿತ್ತು ಹಾಕಿದ್ದರೂ ಮನುಷ್ಯ ಪ್ರಾಣಿಗಳ ಸೂರಿನ ಅದಮ್ಯ ಅವಶ್ಯಕ… Read more…

  • ಜುಡಾಸ್

    "ಪೀಟರ್" "ಪ್ರಭು" "ಇನ್ನು ಮೂರುದಿನ ಮಾತ್ರ, ಪೀಟರ್. ಅನಂತರ...." ಮಾತು ಅರ್ಧಕ್ಕೆ ನಿಂತಿತು. ಯೇಸುಕ್ರಿಸ್ತ ತನ್ನ ಶಿಷ್ಯರೊಂದಿಗೆ ಕಾಲುನಡಿಗೆಯಲ್ಲಿ ಜೆರೂಸಲೆಂ ನಗರಕ್ಕೆ ನಡೆದು ಬರುತ್ತಿದ್ದ. ಹನ್ನೆರಡುಜನ ಶಿಷ್ಯರೂ… Read more…

cheap jordans|wholesale air max|wholesale jordans|wholesale jewelry|wholesale jerseys