೩,೫೦೦,೦೦೦

(೧೯೪೩ನೆಯ ಇಸವಿಯ ಕೊನೆಯ ೪ ತಿಂಗಳಲ್ಲಿ ಬಂಗಾಲದಲ್ಲಿ ಕ್ಷಾಮಕ್ಕೂ ರೋಗಕ್ಕೂ ತುತ್ತಾದವರನ್ನು ಕುರಿತು) ಸತ್ತರೇ ಅಕಟ ಮೂವತ್ತಯಿದು ಲಕ್ಷ ಬಂಗಾಲದೊಳಗೆಮ್ಮ ಕಂಗಾಲ ಬಳಗಂ! ಬೋನದಾ ದುರ್‍ಭಿಕ್ಷ, ಬೇನೆಯ ಸುಭಿಕ್ಷ - ಕರು ಉಂಡಿತೇ ಹಾಲು...

ಭಾರತಾಂಬೆಯ ಮಹಿಮೆ

ಭಾರತವನುಳಿಯುತ್ತ ನನಗೆ ಜೀವನವೆತ್ತ? ಭಾರತವೆ ನನ್ನುಸಿರು, ನನ್ನೊಗೆದ ಬಸಿರು. ಭಾರತವೆ ಧನಧಾನ್ಯ, ಭಾರತವೆ ಮನೆಮಾನ್ಯ, ಭಾರತವೆ ದೇವಾರವೆನ್ನ ಸಂಸಾರ. ಭಾರತದ ನೆಲಹೊಲವು ಸುರಭಿಯಿಳಿಕೆಚ್ಚಲವು, ಭಾರತದ ತಿಳಿಜಳವು ಸೊದೆಯ ಸವಿ ಸೆಳವು, ಭಾರತದ ಶ್ಯಾಮಲತೆ ತನುಮನಕ...

ಒಲ್ಲದ ಕೊಡಿಗೆ

ಒಲ್ಲೆವಿದನಿನ್ನು ಹರಳಡಸಿದೀ ಹಿಡಿತುತ್ತೆ? ಕೊರಳು ಕರುಳಂ ಬಗಿನ ಬುತ್ತಿ ತಾನಲ್ಲ? ಕೊಡಿಗೆ ಎನಲೊಂದೆ-‘ಆಂಗ್ಲರೆ, ನಡಿರಿ ಈವತ್ತೆ! ನೀವಿಲ್ಲಿಹನ್ನೆಗಂ ಬಿಡುಗಡೆಮಗಿಲ್ಲ!’ ಒಂದು ಕೆಯ್ಯಂದೀ ಉದಾರ (!) ಕೊಡಿಗೆಯ ಕೊಟ್ಟು ತಾವಿನ್ನು ತೆರಳಲಿಹೆನೆಂದು ತೋರ್‍ವಂದು ಮತ್ತೊಂದರಿಂದೆನ್ನ ಹಿಂದೆ...

ಜಯ ಹಿಂದ ಗೀತ

ಇನ್ನು ಹೆರವರ ನೊಗಕೆ ಮಣಿವರಾವಲ್ಲ! ಜಗದಿ ತಲೆಯೆತ್ತಿ ಹೆಬ್ಬಾಳಲೆದ್ದಿಹೆವು, ಕಳಕೊಂಡ ಬಿಡುಗಡೆಯ ಮರಳಿ ಗೆದ್ದಪೆವು ನಡೆ ಮುಂದೆ, ಹಿಂದವಿನ್ನಡಿಮೆಯನ್ನೊಲ್ಲ! ನಡೆ ಮುಂದೆ, ಹಿಂದವಿನ್ನಡಿಮೆಯನ್ನೊಲ್ಲ! ದೇವರೆಮ್ಮಯ ತಂದೆ, ಭಾರತಂ ತಾಯೆ, ತಾಯ ಮೈಸೆರೆ ಬಿಡಿಸೆ, ಬಿಡಿಸದಡೆ...

ಬಿಡುಗಡೆಗೆ

ಬಿಡುಗಡೆಯೆ! ದೇವರಿನಣಂ ಕಿರಿಯ ದೇವತೆಯೆ? ಭಾರತಕ್ಕೆ ಬಾರ, ನರನೆರಡನೆಯ ತಾಯೆ! ಋದ್ಧಿ ಬುದ್ಧಿಗಳಕ್ಕನೆಂದು ಸಂಭಾವಿತೆಯೆ, ನೀನೆಲ್ಲಿ ಶಾಂತಿಯಲ್ಲಿದೆ ನಿನ್ನ ಛಾಯೆ! ಯೂರೋಪದಾವ ಗುಣಕೊಲಿದಲ್ಲಿ ನೀ ನಿಂತು ಮಿಕ್ಕಿಳೆಯನವರ ತುಳಿಗಾಲ್ಗೆ ಬಾಗಿಸಿದೆ? ಆಶ್ಯದಾವವಗುಣಕೆ ಮುಳಿದಕಟ ನೀನಿಂತು...

ಸರಿಗೆಯಲಿ ಸಿಲುಕುತಿದೆ

ಸರಿಗೆಯಲಿ ಸಿಲುಕುತಿದೆ ಹೃದಯಸ್ವರಂ, ಹೃದಯದಲಿ ಕಲುಕುತಿದೆ ವಿರಹಜ್ವರಂ; ಎತ್ತ ನಡೆದವನೆಂದು ಮತ್ತೆನಗೆ ಬಹನೆಂದು ಮನಸಿನೋಪಂ, ಬಾಗಿಲೊಳೆ ನಿಲುಕುತಿದೆ ನಯನ ದೀಪಂ. ಮರಳುವೊಸಗೆಯ ಬೀರಿ ಗುಡುಗು ಮೊಳಗೆ, ಮನೆಯ ದಾರಿಯ ತೋರಿ ಮಿಂಚು ತೊಳಗೆ, ಬಂದರೆಲ್ಲಿದರೆಲ್ಲ,...

ಈ ಜನುಮವೆ ಮುಗಿವ ಮುನ್ನ

ಈ ಜನುಮವೆ ಮುಗಿವ ಮುನ್ನ ಕಾಣೆನೊ ಕಾಣುವೆನೊ ನಿನ್ನ ನರಿಯದೊಡನಭಿನ್ನಮೆನ್ನ ಮನದ ತಿತಿಕ್ಷೆ ಇಂದಲ್ಲಡೆ ಮುಂದೆ ನೆರೆಯ ದಿರದಿಲ್ಲಿಯೆ ಬಲ್ಲೆನೆರೆಯ- ಸಲದೆ ತಾಯ ಬಸಿರ ಮರೆಯ ಮಗುವ ದಿದೃಕ್ಷೆ? ನಿನ್ನೊಳೊಗೆದ ನನ್ನೊಳಿಂತು ನಿನ್ನ ಕಾಂಬ...

ಇನ್ನು ನೀನೆನ್ನವನು

ಇನ್ನು ನೀನೆನ್ನವನು ನಾನಿನ್ನು ನಿನ್ನವನು ಇಂದಿನಿಂದೆ, ಇಂದಿನಿಂದ ಮುಂದೆ. ನಿನ್ನ ನೆನವುದೆ ಚನ್ನ, ನಿನ್ನ ಕನವುದೆ ನನ್ನ ದಿನದ ಬಾಳು, ನನ್ನ ಮನದ ಕೂಳು. ಮಳೆಯೆ ಬೇಸಗೆಯಾಸೆ ಯಂತೆ ನನ್ನ ಪಿಪಾಸೆ ಯೆದೆಯ ನೀನೆ...

ನಾವೆ ನಮಗಾಗಿಸುವೆವೆಮ್ಮ ಕೋಟಲೆಯಂ

ನಾವೆ ನಮಗಾಗಿಸುವೆವೆಮ್ಮ ಕೋಟಲೆಯಂ- ಬಾಳ್ವೆ ಸಂಗರರಂಗವೆಂಬುದಂ ಮರೆದು, ಸಿಂಗರಂ ಗೆತ್ತು ಶಸ್ತ್ರಂಗಳಂ ಮುರಿದು ವಿಧಿಗೆರೆದು ಕಡೆದೀವೆವಳಲ ಸಂಕಲೆಯಂ. ಕಾದದೊಡೆ ಬಾಳೇಕೆ? ಕಾದೆನೆನೆ ನಿನ್ನ ಸಂಧಿಪುದೊ? ಬಂಧಿಪುದೊ? ಬಗೆಯ ವಿಧಿಯದರಿಂ ಬಿಳಿಯ ಪಳವಿಗೆಯಳವೆ? ಬಾಳನೆತ್ತುದರಿಂ ಪಡೆವಳಂ...