ಯಾರೆಂಬರು ಮುಗಿದುವೆಂದು ಬವರಾಂ?

ಹತೋ ವಾ ಪ್ತವ್ಸ್ಯಸಿ ಸ್ವರ್‍ಗಂ ಜಿ ತ್ವಾವಾ ಭೋಕ್ಷ್ಯಸೇ ಮಹೀಮ್ |
ತಸ್ಮಾದುತಿಷ್ಟ ಕೌಂತೇಯ ಯುದ್ಧಾಯ ಕೃತನಿಶ್ಚಯ ತಿ (ಗೀತಾ ೨.೩೭)

ಯಾರಂಬರು ಮುಗಿದುವೆಂದು ಬವರಂ?
ನಂಬದಿರದು ಮರುಳರ ಮಾತೆ:
ನರನೆನ್ನವರಂ ನರನನ್ನೆವರಂ
ರಣಾಂಗಣವೆ ಶಾಂತಿಯ ಮಾತೆ!
ಶಾಂತಿಯೆ ನಿನ್ನಯ ಸಾಧನಮಾಗೆ
ಸದಾ ಸಿದ್ಧವಿರು ಯುದ್ಧಕ ಸಾಗೆ.

ಯುದ್ಧವಿಲ್ಲದಭಿವೃದ್ಧಿಯದುಂಟೆ?
ಯುದ್ಧದೆ ಮನುಜತೆಯ ವಿಕಾಸಂ-
ಬೆಂಕಿಯೊಳಲ್ಲವೆ ಕಬ್ಬಿಣ ದಾಂಟೆ
ಯತ್ರ ತಂತ್ರ ಶಕ್ತಿಯ ಸಾನಂ?
ಯೋಧನಾದ ನರನಮರಸಮಾನಂ,
ಯೋಧನೆಂದೆ ಸೃಷ್ಟಿಯ ಯಜಮಾನಂ.

ಕಟ್ಟಳೆಯೊಳೆ ಹಳಸಿದ ಬಾಳುವೆಗೆ
ಯುದ್ಧದಿ ನವಯೌವನ ಸಿದ್ಧಿ;
ಪರವಶತಗೆ ನಾಚದ ತಾಳುವೆಗೆ
ಯುದ್ಧದೊಳಾ ಪಾಪದ ಶುದ್ದಿ;
ಯುದ್ಧವೆ ಮೃತಜೀವನದುತ್ಥಾನಂ,
ಯುದ್ಧವೆ ಉತ್ಕ್ರಾಂತಿಯ ಸೋಪಾನಂ.

ನರತೆಯೊಂದ ನರನಾದಡನೇಕಂ,
ಏಕಾರ್‍ಥದ ಮಂದಿಯೆ ಜನತ;
ಜನತ ಜನತೆಯೊಳಗಿರದು ಏವೇಕಂ-
ಸ್ವಾರ್ಥಕಲ್ಲವಲ್ಲವೆ ತನತೆ?
ಸ್ವಾರ್ಥತೆ ಪರ್‍ಆರ್‍ಥದಲಿ ಕೆಯ್ಮಾಡ
ಸಂಗರವಾ ಪ್ರಸಭವನೀಡಾಡೆ

ಸರ್‍ವಜೀವಿಗಳೊಳೊರ್‍ವನೆ ಮನುಜಂ
ವರಹಿತ ಗೆಯಲೆಂದೊಗೆತಂದು,
ತನ್ನ ಹಂಗನವಮನ್ನಸಿ ದನುಜಂ
ತಾನೆನೆ ಪರರಲಿ ಮಲೆವಂದು,
ಕೇಸುರಿ ಬಲೆಯ ಕೇಸರಿಗೆಂತು
ಸಮರವಾತನಂ ಕಮರಿಸಲಂತು

ಸಾಲದು ನರಜನ್ಮವ ಬರಿದೆತ್ತ-
ಜನ್ಮಮಾತ್ರವೇತರ ಕಾರ್‍ಯಂ?
ನರನಹೆಯಾ? ದುಡಿ ನರತೆಯ ಮತ್ತ-
ದ್ವಿಜನಾಗದ ಮನುಜನನಾರ್‍ಯಂ!
ಪರರಳಲಿನ ವರಿಹರಿಕಗೆ ನಂದು
ಹೊಸ ಬಾಳೆತ್ತಿದವನೆ ದ್ವಿಜನಿಂದು.

ಅನ್ಯನಲ್ಲ, ನೀನೆ ನನ್ನ ಯೋಧಂ!
ಕಾದೆನಲಾ ಪ್ರಕೃತಿಯೆ ನಿನಗೆ.
ಕಟ್ಟಾಜ್ಞೆಯದಕ ತಟ್ಟಿ ವಿರೋಧಂ
ಎಲ್ಲಿನೆಲ್ಲಿಗುರುಳಿದೆ ಕೊನೆಗೆ!
ಕತ್ತಿಗೆ ಬಾರದ ಕಬ್ಬಿಣ ಬಾಗಿ
ಸುಟ್ಟಪುದನುದಿನ ಸಟ್ಟುಗಮಾಗಿ
ಅಳಿವೆಯೊ? ಉಳಿವೆಯೊ? ಪ್ರಶ್ನೆಯನಿತ್ತೆ-
ಮೂರನೆಯದಿಲ್ಲ ನಿನಗಾಯ.
ಕಾದದಡೆ ಸಾವಿಗವುತಣವಿತ್ತೆ
ಕಾದೆ ಸದೆದೆ ಸಾವನೆ ಸಾಯ!
ಪ್ರಬಲರಬಲರಂ ಕಬಲಿಸೆ, ಹಗೆಯಾ
ಕಾದೊ ಕಾದದೆಯೊ ಬದುಕುವೆ, ಬಗೆಯಾ!

ಕದೆ ಸಾವೆನೆಂದಕಟಾ ಗಾಸಿಯೊ?
ಕಾದದವರಿಗಿಲ್ಲವ ಸಾಯೆ?
ಕತ್ತಿಯಾಗಿ ಹಾಯೆ ಸಾಯೆ ವಾಸಿಯಾ?
ನಾಲದಂತ ಕಾಲಲಿ ತೇಯೆ?
ಸಾವಿಗಂಜೆ ಸಾವಿರ ಸಲ ಸತ್ತ,
ಸಾವನಂಜದವನೂಮ್ಮೆಯನಿತ್ತ.

ಕಾದೆ ಸಾವನೆಂದಲ್ಲಿಗೆ ಸರಿಯ,
ಬಾಳ್ವೆ ಸಾವಿನೊಳೆ ನೆರವೇರೆ?
ಬಾಳ್ವೆ ಬಾಳತಕ್ಕುದೊ ನಾನರಿಯೆ,
ಸಾವು ಸಾಯತಕ್ಕುದು ನೇರೆ!
ಧರ್‍ಮಯುದ್ಧವೊಂದಲ್ಲದೆ ಬೇರ
ದಾರಿಯೆ ವೀರಸ್ವರ್‍ಗವನೇರೆ?

ಸೆರೆಗೇಕಂಜುವೆ? ನೆರೆಯಾಳಲ್ಲವ
ತನ್ನ ಮನೆಯೊಳನ್ಯರ ತೊತ್ತು?
ಸಿಕ್ಕ ಮಡೆಯ ಮುಕ್ಕುವ ಗಿಳಿ ಬಲ್ಲವೆ
ಗೂಡೊ ಬೀಡೊ ಎನುವಾ ಗೊತ್ತು?
ಬಸುರಲಿ ಸೋಸಿಲ್ಲವೆ ನೀ ಸೆರೆಯಾ?
ಹೊಸ ಹುಟ್ಟಿನ ಬಸಿರಾ ಸೆರೆಯರಿಯಾ!

ತನ್ನ ಕಡುಕನ್ನೆಲ್ಲ ಮುನ್ನ ಕಾದು,
ತಾಯಿಳೆಯ ಬಿಡುಗಡೆಗೆ ಕಾದು,
ನರತೆಯ ಸರಿಸೋದರತೆಗೆ ಕಾದು,
ಮನುಜನ ವಿಮೋಚನೆಗೆ ಕಾದು.
ಪೂಸತೆ ಭವಿಷ್ಯವ ನೊಸಯಿಸೆ ಕಾದು,
ಬದುಕಿದೊಂದು ಕೂಳುಗುಳವೆನೆ ಕಾದು.

ನೀನಜರಾಮರನಹೆಯಾ? ಕಾದು-
ನರರಿಗೆ ವೆರೆತಮರತಯೊಳವೆ?
ಕಂಚೊ ಕಲ್ಲೊ ಕತೆ ಕವಿತೆಯೊ ಕಾದು
ನಿನ್ನನುಳಿಸೆ ನಿನಗಿನ್ನಳಿವೆ?
ಗೆದ್ದರೆ ಹೊಸ ಹೊತ್ತೆದ್ದುದು ಮುಂದೆ.
ಬಿದ್ದರೆ ನೇಸರಿನುದ್ದಕೆ ನಿಂದೆ!

ನಿನಗೆ ಕಾದೆನುವೆನಿದೊ ಧರ್‍ಮರಣಂ,
ಪರಾಕ್ರಮಣವದು ರಣವಲ್ಲ,
ವರರ ಬಿಡುವಿನವಹರಣವೆ ಮರಣಂ-
ಬಿಡುವ ತುಡುಕಿ ಕೆಡದವರಿಲ್ಲ.
ಬಿಡುಗಡೆ ಎನೆ ಜನಜನತೆಯ ಸೊತ್ತು,
ಕಳೆವನು ಸೆಳೆವನು ನಿಯತಿಯ ತುತ್ತು.

ಸಗ್ಗದಿಂದ ಸೋನೆಯಂತ ಸುರಿಯದು,
ಬಿಡುಗಡೆ ಗಡ ಬಾರದು ಬರಿದೆ!
ಕಾಯ್ವೊಡೆಯಗೆ ಬರಿ ಬಾಯಿಗೆ ದೊರೆಯದು-
ಕಾದದ ಕೆಯ್ಗೆಂದಿಗುಮರಿದೆ!
ದುಡಿಯದೆ ಪಡೆದಾ ಬಿಡುಗಡೆಯಲ್ಲ-
ರಣಹೇಡಿಗೆ ದೇವರ ನೆರವಿಲ್ಲ.

ಆಯುಧವಿಲ್ಲೆಂದೆದೆಗೆಡಬೇಡ-
ಯೋಧನೆತ್ತಲತ್ತಲೆ ಕತ್ತಿ!
ಸಾಧಕನೆ ತನ್ನ ಸಾಧನ, ನೋಡ!
ಹೇಡಿ ಏವನಾಯುದ್ಧದತ್ತಿ?
ಮನದೊರೆಯಲಿ ನಿನಗನುತಹ ಸಿರಿಯ
ಹೊತ್ತು ಕಾವ ಬಗೆಗತ್ತಿಯ ಹಿರಿಯ!

ನೆರವಿಗೆ ಯಾರೆಂದೇತಕ ಖನ್ನ
ಕಾದಿಸುವೊಡೆಯನೆ ಜತೆಗಿಲ್ಲಾ?
ಎಂದಿನಿಂದ ಕಾದವನಿದೊ! ನಿನ್ನ
ನುಳಿದು ತಾನೆ ಕಾದುವನಲ್ಲ.
ಕಂಡಿಸೆದೆಯನಿಡು ಗಂಡಡಿ ಮುಂದೆ
ನೂಕು ರವೀಂದು ಪತಾಕೆಯ ಹಿಂದೆ

ಕೇಳದೆ ಜಗದಿ ಗೋಳಿನ ಕಾಳ?
ಕಳಕಳಿಸದೆ ನಿನ್ನೆದೆಯಾರ?
ನಾಳೆ ಎಂಬ ಜಡಗೆಂದಿಗು ನಾಳ.
ಬಂದೆನೆಂಬ ಕುದುರೆಗೆ ಹಾರ!
ನೆಟ್ಟನೆ ರಣರಂಗದಿ ಮುಂಬರಿಯೊ,
ಜಯ ಶಾಂತಿ ಎಂದಶಾಂತಿಯನಿರಿಯಾ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹಾರಿದೆ ಕನ್ನಡ ಬಾವುಟ

ಸಣ್ಣ ಕತೆ

  • ಗದ್ದೆ

    ಅದೊಂದು ಬೆಟ್ಟದ ಊರು. ಪುಟ್ಟ ಪುಟ್ಟ ಗುಡ್ಡಕ್ಕೆ ತಾಗಿಕೊಂಡು ಸಂದಿಯಲ್ಲಿ ಗೊಂದಿಯಲ್ಲಿ ಎದ್ದ ಗುಡಿಸಲುಗಳು ಅರ್ಥಾತ್ ಈ ಜೀವನ ಕಳೆಯೋ ಬಗೆಯಲಿ ಕಟ್ಟಿಕೊಂಡ ಪುಟ್ಟ ಮನೆಗಳು ಹೊತ್ತು… Read more…

  • ನೆಮ್ಮದಿ

    ಅವನಿಗೆ ನೆಮ್ಮದಿ ಬೇಕಿತ್ತು. ಆ ಜನನಿಬಿಡ ರಸ್ತೆಯ ಪಕ್ಕದಲ್ಲಿರುವ ನ್ಯೂಸ್ ಪೇಪರ್ ಸ್ಟಾಲಿಗೆ ತಾಗಿ ನಿಂತು ಅವನು ರಸ್ತೆಯನ್ನು ವೀಕ್ಷಿಸುತ್ತಿದ್ದ. ಸೂರ್‍ಯೋದಯವಾಗಿ ಕೆಲವೇ ಗಂಟೆಗಳಾಗಿರಬಹುದು. ಜಾತ್ರೆಗೆ ಸೇರಿದಂತೆ… Read more…

  • ನಂಟಿನ ಕೊನೆಯ ಬಲ್ಲವರಾರು?

    ಕುಳಿತವನು ಅಲುಗದಂತೆ ತದೇಕ ಚಿತ್ತದಿಂದ ಕಡಲನ್ನು ನೋಡುತ್ತಿದ್ದ. ಹಾಗೇ ಕುಳಿತು ಅರ್ಧಗಂಟೆ ಕಳೆದಿತ್ತು. ಮೊಲದ ಬಾರಿಗೆ ಕಡಲ ಕಂಡವನ ಚಿತ್ತ ಕಲಕುವುದೇಕೆಂದು ಕುಳಿತಲ್ಲೇ ಅವನನ್ನು ಬಿಟ್ಟು ತಿರುಗಾಡಿ… Read more…

  • ವರ್ಗಿನೋರು

    ಆಗ್ಲೇ ವಾಟು ವಾಲಿತ್ತು. ಯೆಷ್ಟು ವಾಟು ವಾಲ್ದ್ರೇನು? ಬಳ್ಳಾರಿ ಬಿಸ್ಲೆಂದ್ರೆ ಕೇಳ್ಬೇಕೇ? ನಡೆವ... ದಾರ್ಗೆ ಕೆಂಡ ಸುರ್ದಂಗೆ. ನೆಲಂಭೋ ನೆಲಾ... ಝಣ ಝಣ. ‘ಅಲ್ಗೆ’ ಕಾದಂಗೆ. ಕಾಲಿಟ್ರೆ… Read more…

  • ಪ್ರಥಮ ದರ್ಶನದ ಪ್ರೇಮ

    ಭಾಗೀರಥಿ ತೀರದಲ್ಲಿರುವದೊಂದು ಅತಿ ರಮಣೀಯವಾಗಿರುವ ಪ್ರದೇಶದಲ್ಲಿ ಕುಸುಮಪುರವೆಂಬ ಚಿಕ್ಕಿದಾದ ನಗರವಿತ್ತು. ಭೂಮಿಯ ಗುಣಕ್ಕಾಗಿ ಆ ಪ್ರದೇಶದಲ್ಲಿ ಬೆಳೆಯುವ ಬಕುಲ, ಚಂಪಕ, ಮಾಲತಿ, ಪುನ್ನಾಗ, ಗುಲಾಬೆ, ಸೇವಂತಿ ಮುಂತಾದ… Read more…