ಕನ್ನಡ ಬಾವುಟ ಮೇಲಕೆ ಹಾರಿದೆ
ನೀಲಿ ಅಂಬರದಾ ಕಡೆಗೆ
ಶಾಂತಿ ಸತ್ಯತೆ ಬೀಗುತ ಸಾರಿದೆ
ವಿಶ್ವದ ಎಂಟು ದಿಕ್ಕಿನೆಡೆ
ಹಳದಿ ಸಿಂಧೂರಮ ಮಂಗಳ ವರ್ಣವ
ಬೆಳ್ಳಿಯ ಮುಗಿಲಲಿ ಹರಡುತಿದೆ
ಒಂದೇ ಬಳ್ಳಿಯ ಬಗೆಬಗೆ ಹೂಗಳ
ಅನಂತ ಸೃಷ್ಟಿಗೆ ಎರೆಯುತಿದೆ
ವರ್ಷವ ಮರಳಿಸಿ ಹರ್ಷವ ತರಿಸಿ
ಹಾರಿದೆ ಕನ್ನಡ ಧ್ವಜವಾಗಿ;
ಮಂಗಳ ಗೀತೆಯ ಕುರುಹಾಗಿ
ಎಲ್ಲೆಡೆ ಚದುರಿದ ಕನ್ನಡ ನೆಲೆಗಳು
ಕೂಡಿವೆ ಕರ್ನಾಟಕವಾಗಿ
ರಕುತದ ಕೋಡಿ ಹರಿಸಿದ ಹಿರಿಯರ
ಸವಿನೆನಪುಗಳು ಚಿರವಾಗಿ
ಕನ್ನಡದುತ್ಸವ ಈ ರಾಜ್ಯೋತ್ಸವ
ಎಲ್ಲರ ಹೃದಯದಿ ಸ್ಥಿರವಾಗಿ;
ಅಳಿಸಿದೆ ಕತ್ತಲೆ ಬೆಳಕಾಗಿ
*****