ಇಡೀ ಜಗತ್ತಿನಲ್ಲಿ ಇಲ್ಲದ್ದನ್ನು ಅಮೆರಿಕ ಕಂಡು ಹಿಡಿದಿದೆ. ಅದೇ ಸೆಂಡ್ ಎಂದು.
ಸ್ಮಾರ್ಟ್‌ಫೋನ್‌ಗಳ ಮೂಲಕ ಇ-ಮೇಲ್ ಕಳುಹಿಸುವ ಪ್ರಕ್ರಿಯೆಯನ್ನು ಮೈಕ್ರೋಸಾಫ್ಟ್ ಅಭಿವೃದ್ಧಿ ಪಡಿಸಿರುವ ಹೊಸ ಅಪ್ಲಿಕೇಷನ್‌ನ್ನು ಅಮೆರಿಕ ಮತ್ತಷ್ಟು ಸರಳಗೊಳಿಸಿದೆ. ಇದನ್ನೇ ‘ಸೆಂಡ್’ ಎಂದು ಅಮೆರಿಕ ಹೆಸರಿಸಿರುವುದು!
ಆಪ್ ಬಳಸಿ ಇ-ಮೇಲ್ ಕಳುಹಿಸುವಾಗ ನೇರವಾಗಿ ವಿಳಾಸ ಪಟ್ಟಿಗೆ ಹೋಗಬಹುದು. ಇದು ಎಸ್‌ಎಂಎಸ್ ಕಳುಹಿಸಿದಷ್ಟೇ ಸರಳ.
ಈಗ ಸ್ಮಾರ್ಟ್‌ಫೋನಿನಲ್ಲಿ ಇ-ಮೇಲ್ ಕಳುಹಿಸಬೇಕೆಂದರೆ ಮೊದಲು ಇ ಮೇಲ್ ಸಂದೇಶ ಕಳುಹಿಸಬೇಕೋ ಅವರ ಇ-ಮೇಲ್ ವಿಳಾಸವನ್ನು ತುಂಬಬೇಕು. ಆದಾದ ಮೇಲೆ ಇ-ಮೇಲ್ ವಿಷಯವನ್ನು ಸಂಕ್ಷಿಪ್ತವಾಗಿ ಸಬ್ಜೆಕ್ಟ್ ಕಿಂಡಿಯಲ್ಲಿ ಬರೆಯಬೇಕು ಇವಿಷ್ಟೂ ಪ್ರಕ್ರಿಯೆಗಳನ್ನು ಪೂರೈಸಿದ ಮೇಲೆ ಸಂದೇಶ ಬರೆಯಬೇಕು.
ಆದರೆ ಸೆಂಡ್ ಮೂಲಕ ಇ-ಮೇಲ್ ಮಾಡುವಾಗ ಸಂದೇಶ ಬರೆದೊಡನೆ ನೇರವಾಗಿ ಇ-ಮೇಲ್ ವಿಳಾಸಗಳ ಪಟ್ಟಿಗೆ ಹೋಗಬಹುದು. ಈಗ ಫೋನ್ ನಂಬರ್‌ನೊಂದಿಗೆ ಜೋಡಿಸದ ಇ-ಮೇಲ್ ವಿಳಾಸಗಳಿದ್ದಲ್ಲಿ ಅಂತಹ ವಿಳಾಸಗಳನ್ನು ಈಗ ಹುಡುಕುವುದು ಕಷ್ಟ ಸಾಧ್ಯ.
ಆದರೆ ಸೆಂಡ್ ಆಪ್ ಇದ್ದಲ್ಲಿ ಅಂತಹ ಇ-ಮೇಲ್ ವಿಳಾಸಗಳನ್ನೂ ನೇರವಾಗಿ ಹುಡಕಬಹುದಾಗಿದೆ. ಇದಕ್ಕೆಂದೇ ಬೇರೆ ಅಪ್ಲಿಕೇಷನ್‌ನ ಅವಶ್ಯಕತೆ ಬೇಕಿಲ್ಲ. ಸೆಂಡ್ ಬಳಸಿದರೆ ಸಬ್ಜೆಕ್ಟ್ ಲೈನ್ ಮತ್ತು ಸಹಿಯ ಅಗತ್ಯ ಬೇಕಿಲ್ಲ. ಇ-ಮೇಲ್ ಸ್ವೀಕರಿಸುವವರೂ ಸೆಂಡ್ ಬಳಸುತ್ತಿದ್ದರೆ ಅವರು ಇ-ಮೇಲ್‌ಗೆ ಪ್ರತಿಕ್ರಿಯಿಸುತ್ತಿದ್ದಾರೆಯೇ ಇಲ್ಲವೇ ಎಂಬ ಮಾಹಿತಿಯನ್ನು ಸೆಂಡ್ ನೀಡುವುದು.
ಈಗೀಗ ಈ ಅಪ್ಲಿಕೇಷನ್ ಐ-ಫೋನ್‌ಗಳಿಗೆ ಮಾತ್ರ ಲಭ್ಯವಿದೆ. ಮುಂದಿನ ದಿನಮಾನಗಳಲ್ಲಿ ವಿಂಡೋಸ್ ಮತ್ತು ಆಂಡ್ರಾಯ್ಡ್ ತಂತ್ರಾಂಶ ಬಳಸುವ ಫೋನ್‌ಗಳಿಗೂ ಲಭ್ಯವಾಗಲಿದೆ. ತನ್ನದೇ ಕಾರಚರಣೆಯ ವ್ಯವಸ್ಥೆ ವಿಂಡೋಸ್ ಬಳಸುವ ಸ್ಮಾರ್ಟ್‌ಫೋನ್‌ಗಳಿಗೆ ಈ ಆಪ್‌ನ್ನು ಒದಗಿಸುವ ಮೊತ್ತ ಮೊದಲೇ ತನ್ನ ಪ್ರತಿಸ್ಪರ್ಧಿ ಆಪಲ್ ಫೋನ್‌ಗಳಿಗೆ ಈ ಆಪ್ ಒದಗಿಸಿರುವ ಮೈಕ್ರೋಸಾಫ್ಟ್ ನಡೆ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
ಇನ್ನು ಬರು ಬರುತ್ತಾ ಏನೆಲ್ಲ ಹೊಚ್ಚ ಹೊಸತು ಕಂಡು ಹಿಡಿಯಬಹುದೋ ಕಾದು ನೋಡೋಣವಲ್ಲವೇ?
*****