ಜಯ ಹಿಂದ ಗೀತ

ಇನ್ನು ಹೆರವರ ನೊಗಕೆ ಮಣಿವರಾವಲ್ಲ!
ಜಗದಿ ತಲೆಯೆತ್ತಿ ಹೆಬ್ಬಾಳಲೆದ್ದಿಹೆವು,
ಕಳಕೊಂಡ ಬಿಡುಗಡೆಯ ಮರಳಿ ಗೆದ್ದಪೆವು
ನಡೆ ಮುಂದೆ, ಹಿಂದವಿನ್ನಡಿಮೆಯನ್ನೊಲ್ಲ!

ನಡೆ ಮುಂದೆ, ಹಿಂದವಿನ್ನಡಿಮೆಯನ್ನೊಲ್ಲ!
ದೇವರೆಮ್ಮಯ ತಂದೆ, ಭಾರತಂ ತಾಯೆ,
ತಾಯ ಮೈಸೆರೆ ಬಿಡಿಸೆ, ಬಿಡಿಸದಡೆ ಸಾಯೆ,
ನಡೆ ಮುಂದೆ, ಸಾವಿಗಾವಂಜುವವರಲ್ಲ!

ನಡೆ ಮುಂದೆ, ಸಾವಿಗಾವಂಜುವವರಲ್ಲ!
ಊದಿ ರಣಕಾಳೆಯಂ, ಮೋದಿ ರಣಭೇರಿ,
ಹೆಗಲಿಸಿರಿ ಕೈದುವನುಘೇ ದಿಲ್ಲಿ ಸೇರಿ,
ನಡೆ ಮುಂದೆ, ಸೆಳೆಯಿರೆದುರಾಳಿಯಿಂ ಗೆಲ್ಲ!

ನಡೆ ಮುಂದೆ! ನಡೆ ಮುಂದೆ! ನಡೆ ಮುಂದೆ! ಸೈ ಸೈ!
ಜಯ ಹಿಂದ! ಜಯ ಹಿಂದ! ಜಯ ಹಿಂದ! ಜೈ ಜೈ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಎದ್ದೇಳು ಕನ್ನಡಿಗ

ಸಣ್ಣ ಕತೆ

  • ಉರಿವ ಮಹಡಿಯ ಒಳಗೆ

    ಸಹ ಉದ್ಯೋಗಿಗಳ ಓಡಾಟ, ಗ್ರಾಹಕರೊಂದಿಗಿನ ಮೊಬೈಲ್ ಹಾಗೂ ದೂರವಾಣಿ ಸಂಭಾಷಣೆಗಳು, ಲ್ಯಾಪ್‌ಟಾಪಿನ ಶಬ್ದಗಳು ಎಲ್ಲಾ ಸ್ತಬ್ದವಾದಾಗಲೇ ಮಧುಕರನಿಗೆ ಕಚೇರಿಯ ಸಮಯ ಮೀರಿದ್ದು ಅರಿವಾಯಿತು. ಕುಳಿತಲ್ಲಿಂದಲೇ ತನ್ನ ಕುತ್ತಿಗೆಯನ್ನು… Read more…

  • ಇರುವುದೆಲ್ಲವ ಬಿಟ್ಟು

    ನಿಂತ ರೈಲು ಬೋಗಿಯೊಳಗಿಂದ ನನ್ನ ದೃಷ್ಟಿ ಹೊರಗಿನ ನಿಲ್ದಾಣವನ್ನು ವೀಕ್ಷಿಸುತ್ತಿತ್ತೇ ಹೊರತು ನನ್ನ ಮನಸ್ಸು ಮಾತ್ರ ನಾಗಾಲೋಟದಿಂದ ಓಡುತ್ತಿತ್ತು. ಒಂದು ರೀತಿಯಲ್ಲಿ ಆಲೋಚನೆಗಳು ನನ್ನ ಗೆಳೆಯ ಎಂದೇ… Read more…

  • ಸಂಬಂಧ

    ದೆಹಲಿಯಲ್ಲಿ ವಿಪರೀತ ಚಳಿ. ಆ ದಿನ ವಿಪರೀತ ಮಂಜು ಕೂಡಾ ಕವಿದಿತ್ತು. ದೆಹಲಿಗೆ ಬರುವ ವಿಮಾನಗಳೆಲ್ಲಾ ತಡವಾಗಿ ಬರುತ್ತಿದ್ದವು. ಸರಿಯಾಗಿ ಲ್ಯಾಂಡಿಂಗ್ ಮಾಡಲಾಗದೆ ಫೈಲೆಟ್‌ಗಳು ಒದ್ದಾಡುತ್ತಿದ್ದರು. ದೆಹಲಿಯಿಂದ… Read more…

  • ಗಿಣಿಯ ಸಾಕ್ಷಿ

    ಹತ್ತಿರವಿದ್ದ ನೆರೆಹೊರೆಯ ಮನೆಯವರಿಗೆ ಗಿಣಿಯ ಕೀರಲು ಕಿರುಚಾಟ ಕೂಗಾಟ ಸತತವಾಗಿ ಕೇಳಿಬಂದಾಗ ಅವರು ಅಲ್ಲಿಗೆ ಧಾವಿಸಿ ಬಂದಿದ್ದರು. ಗೌರಿಯು ಕಳೇಬರವಾಗಿ ಬಿದ್ದಿರುವುದು ನೋಡಿ ಅವರಿಗೆ ದಿಗ್ಭ್ರಾಂತಿಯಾಯಿತು. ಅವಳ… Read more…

  • ಅಂತರಂಗ ಶುದ್ಧಿ ಬಹಿರಂಗ ಶುದ್ಧಿ

    ಸ್ವಾಮೀಜಿಗಳಿಗೆ ಈವತ್ತಂತೂ ಮೈ ತುರಿಸಿಕೊಳ್ಳಲೂ ಪುರುಸೊತ್ತಿಲ್ಲ. ಹಲವು ಕಾರ್ಯಕ್ರಮಗಳ ಒತ್ತಡ, ರಾಜಕಾರಣಿಗಳ ಭೇಟಿ ಜೊತೆಗೆ ತಂಡೋಪತಂಡವಾಗಿ ಆಶೀರ್ವಾದ ಬೇಡಿ ಬರುವ ಭಕ್ತರ ಕಿರಿಕಿರಿ. ಇದರ ಮದ್ಯೆ ಜಪತಪ,… Read more…