
ಎದ್ದೇಳು ಕನ್ನಡಿಗ ನಿದ್ರೆಯನು ತೊರೆದು
ಕಣ್ತೆರೆದು ನೋಡೋ ಕನ್ನಡದ ದೈನ್ಯತೆಯ
ಹೋರಾಡು ನೀನು ಕರುನಾಡ ಧೀಮಂತ
ಆಗುವೆಯೋ ನೀನು ಕಲಿಯುಗದ ಹನುಮಂತ
ಪರಭಾಷಾ ಹಾವಳಿಯು
ಕನ್ನಡವ ಮುತ್ತಿರಲು
ನಿನಗಿನ್ನು ಈ ನಿದಿರೆ ಏತಕೋ
ಕನ್ನಡ ತಾಯ್ನುಡಿಗೆ
ಕರುನಾಡ ಮುನ್ನಡೆಗೆ
ಪಣತೊಟ್ಟು ಹೊರಡೋ ಕನ್ನಡಿಗ;
ಕನ್ನಡದ ವೈಭವವ
ಅಡಗಿಸಲು ಹವಣಿಸುವ
ದುರ್ಜನರ ಸೊಕ್ಕನ್ನು ಮೆಟ್ಟುತ್ತ ನೀ
ಕರುನಾಡ ರಕ್ಷಣೆಗೆ
ಕನ್ನಡದ ಪೋಷಣೆಗೆ
ಒಗ್ಗಟ್ಟಲೀ ದುಡಿಯೋ ಕನ್ನಡಿಗ ನೀ;
ಒಗ್ಗಟ್ಟಲೀ ದುಡಿಯೋ ಕನ್ನಡಿಗ ನೀ.
*****


















