ವಾಟರ್‌ಬೈಕ್ ಕಥೆ

ವಾಟರ್‌ಬೈಕ್ ಕಥೆ

ಪೆಟ್ರೋಲ್- ಡಿಸೇಲ್ ಇತ್ಯಾದಿ ಬಳಕೆಯ ಬದಲು ಪರ್‍ಯಾಯ ಇಂಧನದ ಬಳಕೆಯ ಬಗ್ಗೆ ಸುದೀರ್‍ಘ ಚಿಂತನೆ ಸಂಶೋಧನೆಗಳು ನಿರಂತರವಾಗಿ ನಡೆಯುತ್ತಲೇ ಇದೆ.

ಹಣ ಉಳಿಸುವ ಆಲೋಚನೆ ಒಂದೆಡೆಯಾದರೆ, ಪೆಟ್ರೋಲ್ ಡಿಸೇಲ್ ಕೊರತೆಯನ್ನು ನೀಗಿಸುವ ಯೋಚನೆಯು ನಿರಂತರವಾಗಿ ಸಾಗುತ್ತಲೇ ಇದೆ.

ಆದರೆ… ಇಷ್ಟು ವರ್ಷಗಳಾದರೂ ಹರ್ಷದ ಸುದ್ದಿ ಮಾತ್ರ ಇಲ್ಲವೇ ಇಲ್ಲ ಎನಬೇಡಿ!

ಬ್ರೆಜಿಲ್‌ನ ಸಾವೋಪೌಲೊದ ರಿಕಾರ್‍ಡೋ ಜಿವಡೋ ನೀರಿನಿಂದ ಬೈಕ್ ಓಡಿಸುತ್ತಿದ್ದಾನೆ! ಬರೋಬ್ಬರಿ ಒಂದು ಲೀಟರ್ ನೀರಿಗೆ ಈತನಲ್ಲಿರುವ ಬೈಕ್ ೩೦೦ ಮೈಲಿ ಓಡುವುದು. ಇವರು ಇಂಧನದ ಬದಲು ನೀರನ್ನು ತುಂಬಿಸಿ ಬೈಕ್ ಓಡಿಸುವ ವೀಡಿಯೋವನ್ನು ಕೂಡಾ ಈಗಾಗಲೇ ಬಿಡುಗಡೆಗೊಳಿಸಿರುವರು.

ಇವರ ಬಳಿ ಇರುವ ಬೈಕಿನ ಹೆಸರು- ಟಿ ಪವರ್ ಎಚ್‌ಓ ಎಂದು. ಇದೊಂದು ಸುಂದರ ವಾಟರ್ ಬೈಕ್, ಅಂದರೆ ನೀರ ಮೇಲೆ ಚಲಿಸುವುದಲ್ಲ. ರಸ್ತೆ ಮೇಲೆ ಸಲಿಸಾಗಿ ಓಡುವುದು.

ಸಾವೋಪೌಲೊದ ರಿಕಾರ್‍ಡೊ ಅವರ ಸಂಶೋಧನೆಯ ಪ್ರಕಾರ ಬೈಕ್‌ನಲ್ಲಿ ಕಾರ್ ಬ್ಯಾಟರಿಯೊಂದನ್ನು ಅಳವಡಿಸಿರುವರು. ಇದರಿಂದಾಗಿ ಇದು ವಿದ್ಯುತ್ ಉತ್ಪಾದಿಸಿ ನೀರಿನ ಕಣಗಳಿಂದ ಜಲಜನಕ ಪ್ರತ್ಯೇಕಿಸುತ್ತದೆ. ಹೀಗಾಗಿ ದಹನ ಕ್ರಿಯೆಯುಂಟಾಗಿ, ಅದರಿಂದ ಬಿಡುಗಡೆಯಾಗುವ ಶಕ್ತಿಯಿಂದ ಬೈಕ್ ಓಡುವುದು!

ಅಬ್ಬಾ! ಇಂಧನ ಉಳಿತಾಯ ಹಾಗೂ ವಾಯುಮಾಲಿನ್ಯ ಇತ್ಯಾದಿ ತಪ್ಪಿಸಿ ಪರ್‍ಯಾಯ ಇಂಧನದ ವ್ಯವಸ್ಥೆಯಾಗುವ ಎಲ್ಲ ಮೂಲಗಳನ್ನು ಈಗಾಗಲೇ ಸಂಶೋಧಿಸಲಾಗಿದೆ.

ಆದ್ದರಿಂದ ಇವೆಲ್ಲ ಪರ್‍ಯಾಯ ಇಂಧನಗಳಾಗಿ ಎಲ್ಲ ಕಡೆ ಬಳಕೆಯಾದರೆ ಬಹಳಷ್ಟು ಸಮಸ್ಯೆಗಳು ಇಲ್ಲವಾಗಿ ಹೊಸಹೊಸ ಆವಿಷ್ಕಾರಗಳಿಗೆ ಎಡೆ ಮಾಡಿಕೊಡುತ್ತವೆಂದು ಭಾವಿಸಲಾಗಿದೆ.

ಅಂತೂ ಇಂತೂ ನಾವು ನೀವು ಕಾಯೋಣವಲ್ಲವೇ??
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನನ್ನ ಶಾರದ ಮಾತೆ
Next post ಮಾಡಿದಷ್ಟೂ ಮುಗಿಯದೆ

ಸಣ್ಣ ಕತೆ

  • ವ್ಯವಸ್ಥೆ

    ಮಗಳ ಮದುವೆ ಪಿಕ್ಸ್ ಆಗಿದ್ದರಿಂದ ದೊಡ್ಡ ತಲೆ ಭಾರ ಇಳಿದಂತಾಗಿತ್ತು. ಮದುವೆ ಮುಂದಿನ ತಿಂಗಳ ಕೊನೆಯ ವಾರವೆಂದು ದಿನಾಂಕವನ್ನೂ ನಿಗದಿಪಡಿಸಲಾಗಿತ್ತು. ಗಂಡಿನವರ ತರಾತುರಿಗೆ ಒಪ್ಪಲೇಬೇಕಾದ ಪರಿಸ್ಥಿತಿ ನನ್ನದು.… Read more…

  • ಶಾಕಿಂಗ್ ಪ್ರೇಮ ಪ್ರಕರಣ

    ಅವನು ಅವಳನ್ನು ದಿನವೂ ತಪ್ಪದೇ ನೋಡುತ್ತಿದ್ದ. ಅವಳು ಕಾಲೇಜಿಗೆ ಹೋಗುವ ಹೊತ್ತಿಗೆ ಅವಳನ್ನು ಹಿಂಬಾಲಿಸುತ್ತಿದ್ದ. ಕಾಲೇಜು ಬಿಡುವ ಹೊತ್ತಿಗೆ ಗೇಟಿನ ಎದುರು ಕಾದು ನಿಂತು ಮತ್ತೆ ಹಿಂಬಾಲಿಸುತ್ತಿದ್ದ.… Read more…

  • ಮೋಟರ ಮಹಮ್ಮದ

    ನಮ್ಮಂತಹ ಈಗಿನ ಜನಗಳಿಗೆ ಹೊಲ, ಮನೆ, ಪೂರ್ವಾರ್ಜಿತ ಆಸ್ತಿ ಪಾಸ್ತಿಗಳಲ್ಲಿ ಹೆಚ್ಚು ಆದರವಿಲ್ಲೆಂದು ನಮ್ಮ ಹಿರಿಯರು ಮೇಲಿಂದ ಮೇಲೆ ಏನನ್ನೋ ಒಟಗುಟ್ಟುತ್ತಿರುತ್ತಾರೆ. ನಾವಾದರೋ ಹಳ್ಳಿಯನ್ನು ಕಾಣದೆ ಎಷ್ಟೋ… Read more…

  • ಕೆಂಪು ಲುಂಗಿ

    ಬೇಸಿಗೆಯ ರಜೆ ಬಂತೆಂದರೆ ಅಮ್ಮಂದಿರ ಗೋಳು ಬೇಡ; ಮಕ್ಕಳೆಲ್ಲಾ ಮನೆಯಲ್ಲೇ... ಟೀವಿಯ ಎದುರಿಗೆ ಇಲ್ಲವಾದರೆ ಅಂಗಳದ ಸೀಬೆಮರ ಮತ್ತು ಎತ್ತರವಾದ ಕಾಂಪೌಂಡಿನ ಗೋಡೆಗಳ ಮೇಲೆ.... ಯಾರಾದರೂ ಬಿದ್ದರೆ,… Read more…

  • ಗಂಗೆ ಅಳೆದ ಗಂಗಮ್ಮ

    ಕನ್ನಡ ನಾಡು ಆರ್ಯದ್ರಾವಿಡ ಸಂಸ್ಕೃತಿಗಳನ್ನು ಅರಗಿಸಿಕೊಂಡು ತನ್ನದಾದ ಒಂದು ಉಚ್ಚ ಸಂಸ್ಕೃತಿಯಿಂದ ಬಹು ಪುರಾತನ ಕಾಲದಿಂದಲೂ ಕೀರ್ತಿಯನ್ನು ಪಡೆದಿದೆ. ಇಂತಹ ನಾಡಿನಲ್ಲಿ ಕಾಣುವ ಅವಶೇಷಗಳು ಒಂದೊಂದು ಹಿರಿಸಂಸ್ಕೃತಿಯ… Read more…