ಸಂಕೀರ್ಣತೆಯಲ್ಲಿಯೇ ಕ್ರೀಯಾಶೀಲತೆ ಕಂಡ – ಟಿ.ಎಸ್ ಏಲಿಯಟ್

ಸಂಕೀರ್ಣತೆಯಲ್ಲಿಯೇ ಕ್ರೀಯಾಶೀಲತೆ ಕಂಡ – ಟಿ.ಎಸ್ ಏಲಿಯಟ್

Thomas Stearns Eliot ಬ್ರೀಟಿಷ ಪ್ರಬಂಧಕಾರ, ನಾಟಕಕಾರ, ಪ್ರಕಾಶಕ, ಸಾಮಾಜಿಕ ಕಾರ್ಯಕರ್ತ ಹೀಗೆ ಹಲವು ಸಾಮಥ್ರ್ಯಗಳ ಟಿ ಎಸ್ ಏಲಿಯಟ್ ಇಪ್ಪತ್ತನೇ ಶತಮಾನದ ಆಂಗ್ಲ ಪ್ರಭಾವಿ ಸಾಹಿತಿ ಕವಿಗಳಲ್ಲಿ ಒಬ್ಬ. ಈ ಹಿಂದೆ ಎಲಿಯಟ್ನ ವೇಸ್ಟಲ್ಯಾಂಡ್ ಮತ್ತು ದಿ ಕಾಕ್ ಟೇಲ್ ಪಾರ್‍ಟಿ ಕೃತಿಗಳ ಕುರಿತು ಚರ್‍ಚಿಸಿದ್ದು ಕವಿಸಾಹಿತಿ ವಿಮರ್ಶಕನ ಖಾಸಗಿ ಬದುಕಿನ ಕುರಿತ ಕಿರುನೋಟ ನೀಡಬಹುದೇನೋ ಈ ಲೇಖನ. Eliot ತನ್ನನ್ನು ಹೀಗೆ ಕರೆಸಿಕೊಳ್ಳುತ್ತಾನೆ A royalist in politics, an anglo-catholic in religion, and a classicist in literature.

೧೮೮೮ ರ ಸಪ್ಟೆಂಬರ ೨೬ ರಂದು ಅಮೇರಿಕಾದ ಸೇಂಟ್ ಲೂಯಿಸ್ ಮಿಸ್ಸೋರಿಯಲ್ಲಿ ಸುಸಂಸ್ಕೃತ ಕುಟುಂಬದಲ್ಲಿ ಜಿನಿಸಿದ ಏಲಿಯಟ್ನ ಪೂರ್‍ವಿಕರು ಓಲ್ಡ ಮತ್ತು ನ್ಯೂ ಇಂಗ್ಲೇಂಡ ಮೂಲದವರು. ಎಲಿಯಟ್ನ ತಾತ William Eliot, ಯುನಿಟೇರಿಯ್ನ್ಫ಼್ ಕ್ರಿಶ್ಚಿಯನ್ ಚರ್‍ಚಿನ ಸ್ಥಾಪನೆಯ ಉದ್ದೇಶದಿಂದ ಮಿಸ್ಸೋರಿಗೆ ಬಂದರು. ತಂದೆ Henry Eliot ಯಶಸ್ವಿ ಬಿಸಿನೆಸ್ ಮ್ಯಾನ್ ಆಗಿದ್ದು ತಾಯಿ Charlotte Stearns ಕವಿಯತ್ರಿಯೂ ಸಾಮಾಜ ಸೇವಕಿಯೂ ಆಗಿದ್ದಳು. ಪೋಷಕರ ಆರು ಮಕ್ಕಳಲ್ಲಿ ಏಲಿಯಟ್ ಕೊನೆಯ ಪುತ್ರ. ಆತನ ಸಹೋದರಿಯರೆಲ್ಲ ಆತನಿಗಿಂತ ಹನ್ನೊಂದರಿಂದ ಹತ್ತೊಂಬತ್ತು ವರ್ಷ ಹಿರಿಯರು. ಅಣ್ಣ ಎಂಟು ವರ್ಷಗಳಿಗೆ ಹಿರಿಯನಾಗಿದ್ದ. ಕೊನೆಯವನಾಗಿ ಹುಟ್ಟಿದ ಏಲಿಯಟ್ಗೆ ಮುದ್ದಿನಿಂದ ಟೋಮ್ ಎಂದೇ ಕರೆಯುತ್ತಿದ್ದರು. ತಂದೆತಾಯಿಗಳಿಬ್ಬರೂ ಮದ್ಯವಯಸ್ಸಿನಲ್ಲಿದ್ದಾಗ ಹುಟ್ಟಿದ ಎಲಿಯಟ್ ದೈಹಿಕವಾಗಿ ಅಶಕ್ತ. ಹುಟ್ಟಿನಿಂದ ಬಂದ ಹರ್‍ನಿಯಾ ಕಾಯಿಲೆಯಿಂದ ಬಾಲ್ಯದಲ್ಲಿ ತೀವ್ರ ಮುಜುಗರಕ್ಕೆ ಒಳಗಾಗುತ್ತಿದ್ದ. ಹೀಗಾಗಿ ಶಾಲಾ ದಿನಗಳಲ್ಲಿ ಈ ಕಾರಣದಿಂದ ಆಟೋಟಗಳಲ್ಲಿ ಭಾಗವಹಿಸಲಾಗುತ್ತಿರಲಿಲ್ಲ. ಏಕಾಂಗಿಯಾಗುತ್ತಿದ್ದ ನೋಯುತ್ತಿದ್ದ. ಈ ಬಳಲಿಕೆಯ ಕಾರಣದಿಂದ ಬೇರೆಡೆಗೆ ಮನಸ್ಸು ತಿರುಗಿಸಿಕೊಳ್ಳುವ ಹಂತದಲ್ಲಿ ಆತನ ಜೊತೆಯಾದದ್ದು ಸಾಹಿತ್ಯ. ವಿಚಿತ್ರವಾಗಿ ಸಾಹಿತ್ಯದ ಗೀಳಿಗೆ ಬಿದ್ದ ಈತ ಅದರಲ್ಲಿಯೇ ಉನ್ಮತ್ತನಾಗುತ್ತ ಹೋದ. Robert Sencourt ಎಂಬ ಎಲಿಯಟ್ ಸ್ನೇಹಿತ ಆತನ ಕುರಿತು ಹೀಗೆ ಬರೆಯುತ್ತಾನೆ. “would often curl up in the window-seat behind an enormous book, setting the drug of dreams against the pain of living

ಪ್ರಾರಂಭಿಕ ಶಿಕ್ಷಣವನ್ನು ಸ್ಮಿಥ್ ಆಕಾಡೆಮಿಯಲ್ಲಿ ಪ್ರಾರಂಭಿಸಿ ಲ್ಯಾಟಿನ್, ಪ್ರಾಚೀನ ಗ್ರೀಕ್, ಪ್ರೆಂಚ್, ಜರ್ಮನ್ ಭಾಷೆಗಳನ್ನು ಕಲಿತ. ಹದಿನಾಲ್ಕರ ಎಳೆಯ ಪ್ರಾಯದಲ್ಲಿಯೇ Edward Fitzgerald’s ಅನುವಾದಿಸಿದ ಉಮ್ಮರ್ ಖಯ್ಯಾಮ್ ನ ಕವಿತೆಗಳನ್ನು ಓದಿ ಪ್ರಭಾವಿತನಾಗಿ ಕವಿತೆಗಳ ರಚನೆಗೆ ತೊಡಗಿದ. ಮಿಸ್ಸೋರಿಯಲ್ಲಿ ಹುಟ್ಟಿನಿಂದ ಹದಿನಾರು ವರ್ಷ ಪ್ರಾಯವಾಗುವವರೆಗೆ ಇದ್ದ ಮುಂದೆ ೧೯೦೫ ರಲ್ಲಿ ಹೆಚ್ಚಿನ ಶಿಕ್ಷಣಕ್ಕೆ ಬೇರೆಡೆ ಹೋದರೂ ರಜಾ ಅವಧಿಗಳಲ್ಲಿ ಮಿಸ್ಸೊರಿ ಆತನ ಕೈಬೀಸಿ ಕರೆಯುತ್ತಿತ್ತು. ಮಿಸ್ಸೋರಿಗೂ ತನಗೂ ಇದ್ದ ಅನುಬಂಧದ ಕುರಿತು ತನ್ನ ಸ್ನೇಹಿತನಿಗೆ ಹೀಗೆ ಬರೆಯುತ್ತಾನೆ. MIssouri and the Mississippi have made a deeper impression on me than any other part of the world ಸೇಂಟ ಲೂಯಿಸ ಮತ್ತು ಮಿಲ್ಟನ್ ಅಕಾಡೆಮಿಗಳಲ್ಲಿ ವಿದ್ಯಾಭ್ಯಾಸ ಪೂರೈಸಿ ಮುಂದಿನ ಶಿಕ್ಷಣಕ್ಕಾಗಿ ಹಾವರ್ಡ ವಿಶ್ವವಿದ್ಯಾಲಯಕ್ಕೆ ಸೇರಿದಂದಿನಿಂದ ಸಾಹಿತ್ಯದ ಗೀಳು ವಿಸ್ತೃತಗೊಂಡಿತು. ೧೯೧೪ ರಲ್ಲಿ ತನ್ನ ೨೫ ನೇ ವಯಸ್ಸಿನಲ್ಲಿ ಯುದ್ದ ಕಾರಣದಿಂದ ಅಮೇರಿಕಾದಿಂದ ಇಂಗ್ಲೆಂಡಿಗೆ ಹೊರಟುಹೋದ ಅಲ್ಲಿಯೇ ದುಡಿದ, ಬೆಳೆದ ವಿವಾಹವಾದ. ಎಲ್ಲ ಅಲ್ಲಿಯೇ ಬೆಸೆದುಕೊಳ್ಳಲು ಅಮೇರಿಕಾದ ಪೌರತ್ವವನ್ನು ತ್ಯಜಿಸಿ ಇಂಗ್ಲೆಂಡಿನ ಪ್ರಜೆಯಾದ.

ಹಾವರ್ಡನಲ್ಲಿ ಎರಡು ವರ್ಷ ಫಿಲೊಸೊಫಿ ಅಸಿಸ್ಟಂಟ್ ಆಗಿ ಕೆಲಸ ಮಾಡಿ ಮುಂದೆ ಇನ್ನೆರಡು ವರ್ಷ ಪ್ಯಾರಿಸ್ಗೆ ಹೋಗಿ ಫಿಲೊಸಫಿಯನ್ನು ಅಧ್ಯಯನ ಮಾಡಿದ. ಪುನಃ ಹಾವರ್ಡಗೆ ಹಿಂತಿರುಗಿ ಭಾರತೀಯ ತತ್ವಜ್ಞಾನ ಹಾಗೂ ಸಂಸ್ಕೃತವನ್ನು ಕಲಿತ. ೧೯೧೪ರಲ್ಲಿ ಜರ್ಮನಿಗೆ ಹೋಗಿ ಗ್ರೀಕ್ ತತ್ವಜ್ಞಾನ ಅಧ್ಯಯನ ಮಾಡತೊಡಗಿದ. ಆದರೆ ಅದಾಗಲೇ ಮೊದಲ ಮಹಾಯುದ್ಧ ಶುರುವಾಗಿತ್ತು. ಅಲ್ಲಿಂದ ಅರ್ಧಕ್ಕೆ ಬಿಟ್ಟು ಇಂಗ್ಲಂಡಿಗೆ ಬಂದು ಆಕ್ಸಫರ್ಡ ಯುನಿವರ್‍ಸಿಟಿಗೆ ಸೇರಿದ. ಆದರಾತನಿಗೆ ಆ ವಾತಾವರಣ ಒಗ್ಗಿಬರಲಿಲ್ಲ. ಬದಲಿಗೆ ಇಂಗ್ಲಂಡಿನ ಪಟ್ಟಣದ ಗಲ್ಲಿಗಲ್ಲಿಗಳಲ್ಲಿ ಹೆಚ್ಚಿನ ವಿಚಾರಗಳ ಕಲಿತ. ಇದೇ ಸಂದರ್ಭದಲ್ಲಿ ಆತನಿಗೆ ಆ ಕಾಲದ ಪ್ರಭಾವಿ ಅಮೇರಿಕನ್ ಕವಿ ಎಜ್ರಪೌಂಡನೊಂದಿಗೆ ಗೆಳೆತನ ಬೆಳೆಯಿತು. ಏಲಿಯಟ್ನ ಸಾಹಿತ್ಯ ಕರಿಯರ್ಗೆ ಒಂದೊಳ್ಳೆಯ ಸಖ್ಯವೂ ಒದಗಿತು. ಹಲವು ಸಾಹಿತಿಗಳ ಸಂಗ ದೊರೆಯಿತು. ಕಾವ್ಯ ಕುಸುರಿ ಬೆಳೆಯಿತು. ೧೯೧೬ ರಲ್ಲಿ ಹಾವರ್ಡನಿಂದ ಪಿ ಎಚ್ ಡಿ. ಪದವಿ ಪ್ರಬಂಧ ಮಂಡಿಸಿದ್ದ.

ಈ ನಡುವೆ ತನ್ನ ೨೬ ನೇ ವಯಸ್ಸಿನಲ್ಲಿ ವಿವಿಯನ್ ಹೇವುಡ್ಳನ್ನು ಮದುವೆಯಾದ. ಆದರೆ ಮೊದಲ ಈ ವೈವಾಹಿಕ ಬದುಕು ಸುಖಪ್ರದವಾಗಿರಲಿಲ್ಲ. ಹೊಸ ದಂಪತಿಗಳು ತತ್ವಜ್ಞಾನಿ ಬರ್ಟಂಡ್ ರಸ್ಸಲ್ನ ಮನೆಯೊಂದರಲ್ಲಿ ಹೊಸ ಜೀವನವನ್ನು ಪ್ರಾರಂಭಿಸಿದರು. ಕೆಲವು ವಿಮರ್ಶಕರ ಪ್ರಕಾರ ರಸ್ಸೆಲ್ ವಿವಿಯನ್ಳೊಂದಿಗೆ ಸಂಬಂಧಹೊಂದಿದ್ದು ಆಕೆಯ ಬಗ್ಗೆ ವಿಶೇಷ ಆಸಕ್ತನಾಗಿದ್ದ ಎಂಬ ಆಪಾದನೆ ಇದೆಯಾದರೂ ಅದು ಎಲ್ಲಿಯೂ ಸತ್ಯವೆಂದು ದೃಢಪಟ್ಟಿಲ್ಲ. ಇಷ್ಟಾಗಿಯೂ ವಿವಿಯನ್ಳ ಆರೋಗ್ಯ ಸ್ಥಿತಿ ಸರಿ ಇರಲಿಲ್ಲವಾದ್ದರಿಂದ ಆಗಾಗ ಆಕೆ ಎಲಿಯಟ್ನಿಂದ ದೂರ ಹೋಗುತ್ತಿದ್ದಳು. ನಿಶ್ಯಕ್ತಿ, ತಲೆನೋವು, ನಿದ್ರಾಹೀನತೆಯ ಕೊರಗು, ಅತಿಯಾದ ಒತ್ತಡಗಳಿಂದ ಬಳಲುತ್ತಿದ್ದ ಯಾವುದೋ ಮಾನಸಿಕ ಕೊರಗಲ್ಲಿ ನರಳುತ್ತಿದ್ದ ಆಕೆ ವೈದ್ಯರ ಸಲಹೆಯಂತೆ ಸರಿಯಾಗುವ ನೀರಿಕ್ಷೆಗೆ ಕಾದು ಅದಾಗದೇ ಕೊನೆಗೆ ಈ ದಂಪತಿಗಳು ಬೇರೆಯಾದರು. ಮುಂದೆ ಆಕೆಯ ಸಹೋದರ ಆಕೆಯನ್ನು ಮಾನಸಿಕ ರೋಗಿಗಳ ಆಶ್ರಮಕ್ಕೆ ಆಕೆಯ ಇಚ್ಛೆಗೆ ವಿರುದ್ಧವಾಗಿ ಸೇರಿಸುತ್ತಲೂ ಹೃದಯಾಘಾತಕ್ಕೆ ಒಳಗಾಗಿ ೧೯೪೭ ರಲ್ಲಿ ಸಾಯುವವರೆಗೂ ಆಕೆ ಅಲ್ಲಿಯೇ ಇದ್ದಳು.

ತಮ್ಮ ಬದುಕಿನ ಕಥೆಯನ್ನು ಎಲಿಯಟ್ ತನ್ನ ನಾಟಕ Tom & Viv ಎಂಬ ಹೆಸರಿನಲ್ಲಿ ಬರೆದಿದ್ದಾನೆ. ಮುಂದೆ ೧೯೧೯ರಲ್ಲಿ ಇದು ಸಿನೇಮಾ ಕೂಡಾ ಆಗಿ ಪ್ರಸಿದ್ಧಿ ಪಡೆಯಿತು. ಎಲಿಯಟ್ ಹೇಳುವಂತೆ ಈ ವಿವಾಹ ವಿವಿಯನ್ಗೆ ಸಂತಸ ತರಲಿಲ್ಲ. ಬದಲಿಗೆ ಎಲಿಯಟ್ನು ೧೯೨೨ರಲ್ಲಿ ಬರೆದ ಅಪೂರ್ವ ಕವಿತೆ The Waste Landಗೆ ಸಾಕಾರ ಸತ್ವವಾಯಿತು. ಎಲಿಯಟ್ ಜೊತೆ ತಳಕು ಹಾಕಿಕೊಂಡ ಮತ್ತೊಂದು ಹೆಣ್ಣು ಲಂಡನ ಯುನಿವರ್‍ಸಿಟಿಯ Mary Trevelyan. ಆತನ ಜೊತೆಯಾಗಿ ವಿವಾಹವಾಗಬಯಸಿದ್ದಳು. ಆದರೆ ನೆನಪಿನ ಬುತ್ತಿಯನ್ನೆ ಬಿಟ್ಟುಹೊರಟಳು.

ಕೊನೆಯಲ್ಲಿ ತನ್ನ ೬೮ನೇ ವಯಸ್ಸಿಗೆ ತನಗಿಂತ ತೀರಾ ಚಿಕ್ಕ ಪ್ರಾಯದ ತನ್ನ ಸೆಕ್ರೆಟರಿಯಾಗಿದ್ದ ವೆಲೆರಿಕ್ ಫ್ಲೆಚರ್ ಎಂಬ ೩೦ ವರ್ಷದ ತರುಣಿಯನ್ನು ವಿವಾಹವಾದ. ಅವರಿಬ್ಬರ ನಡುವಿನ ಹೊಂದಾಣಿಕೆಗಳು ಸರಳವಿದ್ದವು. ಆದರೂ ಹೊರ ಜಗತ್ತಿಗೆ ಮದುವೆ ಗೌಪ್ಯವಾಗಿತ್ತು. ಚರ್ಚವೊಂದರಲ್ಲಿ ನಡೆದ ವಿವಾಹದಲ್ಲಿ ಆಕೆಯ ಪೋಷಕರ ಹೊರತುಪಡಿಸಿ ಬೇರಾರು ಇರಲಿಲ್ಲ. ಎಲಿಯಟ್ಗೆ ಮಕ್ಕಳಿರಲಿಲ್ಲ. ಸಾಹಿತ್ಯ ಉಸಿರಾಗಿತ್ತು. ಕೃತಿಗಳೇ ಕುಡಿಗಳಾಗಿದ್ದವು. “Tradition and Individual Talent” ವಿಮರ್‍ಶೆಗೆ ಹೊಸ ತಾತ್ವಿಕ ನೆಲೆಗಟ್ಟನ್ನು ಪರಿಚಯಿಸಿದ ಕೃತಿ. ಏಲಿಯಟ್ನ ಪ್ರಸಿದ್ಧ ನಾಟಕಗಳು Murder in the Cathedral, “ದಿ ಕಾಕ್‍ಟೇಲ್ ಪಾರ್‍ಟಿ” ಇಪ್ಪತ್ತನೇಯ ಶತಮಾನದಲ್ಲಿ ಸಾಹಿತ್ಯದ ನಾನಾ ಪ್ರಕಾರಗಳಲ್ಲಿ ನಾಟಕ, ಕಾವ್ಯ, ಸಾಹಿತ್ಯ ವಿಮರ್‍ಶೆ ಹೀಗೆ ದಶಕಗಳ ಕಾಲ ಎಲಿಯಟ್ ತನ್ನ ಛಾಪು, ಪ್ರಭಾವ ಹೊಂದಿದ್ದ. ೧೯೪೮ರಲ್ಲಿ ಸಾಹಿತ್ಯಕ್ಕೆ ನೊಬೆಲ್ ಪ್ರಶಸ್ತಿಯನ್ನು ಬಾಚಿಕೊಂಡ. ೧೯೬೫ ರಲ್ಲಿ ಎಲಿಯಟ್ ಮರಣದ ನಂತರ ಆತನ ಕೃತಿಗಳ ಸಂರಕ್ಷಿಸುವ ಕಾಪಿಡುವ ಕೆಲಸದಲ್ಲಿ ತೊಡಗಿಸಿಕೊಂಡ ಪತ್ನಿ ಫ್ಲೆಚರ್ ಕೂಡಾ ೨೦೧೨ ರಲ್ಲಿ ಇಹಲೋಕ ತ್ಯಜಿಸಿದಳು. ಏಲಿಯಟ್ನ ಕೃತಿಗಳಲ್ಲಿ ಭಾರತೀಯ ಉಪನಿಷತ್ತುಗಳ ತತ್ವಜ್ಞಾನದ ನೆರಳಿದೆ ಎಂಬುದು ನಮ್ಮ ಹೆಮ್ಮೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹೀಗೆ ನೀನು ನನ್ನ ಬಿಟ್ಟು ಹೋಗಬೇಡ
Next post ವಿ ಜಿ ಭಟ್ಟರಿಗೆ

ಸಣ್ಣ ಕತೆ

 • ಸಾವಿಗೊಂದು ಸ್ಮಾರಕ

  ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…

 • ವಿರೇಚನೆ

  ರವಿವಾರ ರಜವೆಂದು ರಾಮರಾವು ಶನಿವಾರ ರಾತ್ರಿಯೇ ಭೇದಿಗೆ ಔಷಧಿ ತೆಗೆದುಕೊಂಡ, ಕೆಲವು ತಿಂಗಳುಗಳಿಂದ ಊಟಕ್ಕೆ ರುಚಿಯಿಲ್ಲ. ತಿಂದದ್ದು ಜೀರ್ಣವಾಗುವುದಿಲ್ಲ. ರಾತ್ರಿ ನಿದ್ರೆ ಬರುವುದಿಲ್ಲ, ಹೊಟ್ಟೆ ಉಬ್ಬುತ್ತಿದೆ, ದೃಷ್ಟಿ… Read more…

 • ಬ್ರಿಟನ್ ದಂಪತಿಗಳ ಪ್ರೇಮ ದಾಖಲೆ

  ಫ್ರಾಂಕ್ ಆಗ ಇನ್ನು ಹದಿನಾಲ್ಕು ವರ್ಷದ ಹುಡುಗ ತೆಳ್ಳಗೆ ಬೆಳ್ಳಗೆ ಇದ್ದು, ಕರಿಯ ಬಣ್ಣದ ದಟ್ಟ ಕೂದಲಿನ ಬ್ರಿಟಿಷ್ ಬಾಲಕ. ಹೈಸ್ಕೂಲಿನಲ್ಲಿ ಓದುತ್ತಿದ್ದ ಫ್ರಾಂಕ್‌ಗೆ ಕಾಲ್ಚೆಂಡು ಆಟ… Read more…

 • ಕಳ್ಳನ ಹೃದಯಸ್ಪಂದನ

  ಅದು ಅಪರಾತ್ರಿ ೨ ಘಂಟೆ ಸಮಯ. ಎಲ್ಲರೂ ಗಾಢ ನಿದ್ರೆಯಲ್ಲಿದ್ದರು. ಊರಿನಿಂದ ಸ್ವಲ್ಪ ದೂರವಾಗಿದ್ದ ಕಲ್ಯಾಣ ನಗರದ ಬಡಾವಣೆ, ಅಷ್ಟಾಗಿ ಹತ್ತಿರ ಹತ್ತಿರವಲ್ಲದ ಮನೆಗಳು, ಒಂದು ವರ್ಷದ… Read more…

 • ಮೌನರಾಗ

  ಇಪ್ಪತ್ತೊಂಬತ್ತು ದಾಟಿ ಮೂವತ್ತಕ್ಕೆ ಕಾಲಿರಿಸುತ್ತಿದ್ದ ಸುಧೀರ್ ಮದುವೆಯ ಬಗ್ಗೆ ತಾಯಿ ಸೀತಮ್ಮ, ತಂದೆ ರಂಗರಾವ್ ಅವರಿಗೆ ಬಹಳ ಕಾತುರವಿತ್ತು. ಹೆಣ್ಣುಗಳನ್ನು ಸಂದರ್ಶಿಸಲು ಒಪ್ಪದೇ ಇದ್ದ ಸುಧೀರನ ಮನೋ… Read more…