ನನ್ನ ಹಾದಿ ನನಗೆ
ನಿಮ್ಮ ಹಾದಿ ನಿಮಗೆ

ಒಂದೊಂದು ಸಂದರ್ಭದಲ್ಲಿಯೂ
ಈ ಮೇಲಿನ ಮಾತುಗಳಿಗೆ

ಒಂದೊಂದು ಅರ್ಥ

ಹಾದಿ ಎಂದರೆ ಇಲ್ಲಿ ನಿಲುವು
‘ನನ್ನ’ ಎಂಬುದು ಅದಕ್ಕೆ ಒಲವು

ಇದು ಒಂದು ಸರ್ತಿ

ಹಾದಿ ಎಂದರೆ ಇಲ್ಲಿ ಹಾದಿ
‘ನನ್ನ’ ಎಂದರೂ ಹಾಗೇ ಓದಿ

ಇದು ಇನ್ನೊಂದು ಸರ್ತಿ

ಹೇಗಿದ್ದರೂ ಇಲ್ಲಿಂದ ಮುಂದೆ
ಆಗಲಾರದು ಹಾದಿ ಒಂದೇ

ನನ್ನ ಹಾದಿ ನನಗೆ
ನನ್ನ ಹಿಂದೆಯೇ ಬಂದರೆ
ಇಕೋ
ನನ್ನ ಹಾದಿಯೂ ಇನ್ನು ನಿಮಗೆ
*****