Home / ಕವನ / ಕವಿತೆ / ಎರಡು ಚಿತ್ರ

ಎರಡು ಚಿತ್ರ

ಹುಡುಗ ಹಾಡುತಿತ್ತು, ಮತ್ತೆ ಆಡುತಿತ್ತು,
ನಡುನಡುವೆ ಓಡುತಿತ್ತು;
ಹುಡಗ ಕೆಲೆಯುತಿತ್ತು, ಹಾಗೆ ಕುಣಿಯುತಿತ್ತು,
ಏನೋ ತೊದಲಾಡುತಿತ್ತು.
ಏನು ತಿಳಿಯತಿತ್ತೊ! ಏನು ಹೊಳೆಯುತಿತ್ತೊ!
ಕೈಹೊಯ್ದು ನಗುತಲಿತ್ತು;
ಏನು ನಿಟ್ಟಿಸುತಿತ್ತೊ! ಏನು ದಿಟ್ಟಿಸುತಿತ್ತೊ!
ಹಿಗ್ಗೊಂದು ಮಿಗುತಲಿತ್ತು.
ಒಮ್ಮೊಮ್ಮೆ ಬಂದದ್ದೆ ‘ಅಪ್ಪ ಅಪ್ಪಾ’ ಎಂದು
ತೊಡೆಗಳನ್ನಪ್ಪುತಿತ್ತು;
ಒಮ್ಮೆ ಮುನಿದಂತೆ ದುರುದುರನೆ ನೋಡುತ್ತಿತ್ತು,
ಎಲ್ಲವೂ ಒಪ್ಪುತಿತ್ತು.
ಮತ್ತೆ ಅಳುತಲು ಇತ್ತು, ಹುಚ್ಚುಚ್ಚು ನಗುತ್ತಿತ್ತು,
ಯಾಕೇನೊ ಚೀರುತಿತ್ತು;
ಮತ್ತೇನು ಮುಗುದೇನು? ಏನು ಮಾಡಿದ್ದೆಲ್ಲ
ಚೆಂದವೇ ತೋರುತಿತ್ತು.
* * * *

ಹಿರಿಯನಡ್ಡಾಡುತಿಹ, ಮನದೆಡೆಯಲಾಡುತಿಹ,
ಎದೆ ಹೊಕ್ಕು ನೋಡುತಿಹನು;
ಹಿರಿಯ ತೀರದ ದುಃಖವನ್ನು ತಾ ತಿರುತಿರುಗಿ
ಮನದೊಳಗೆ ತೋಡುತಿಹನು.
ತುದಿಸಿಗದ ತೊಡಕನ್ನು ಬಿಡಿಸಲೆಳಸುವನೊಮ್ಮೆ
ಬಿಡಿಸದೆಯೆ ಬಿಡುತಲಿಹನು;
ಎದೆಯ ಬೀದಿಯ ಬಳಸಿ, ಮನದ ಮಾರ್‍ಗವ ತುಳಿದು,
ಹಳೆ ಹಾದಿ ಹಿಡಿಯುತಿಹನು.
ಮುಳ್ಳಹಾಸಿಗೆ ಮಂಚ, ಹೊದೆಯೆ ಚಿಂತೆಯ ಕಂತೆ,
ಮೇಲೆ ಮಳೆಗರೆವ ಮುಗಿಲು;
ದಳ್ಳುರಿಯನಿಟ್ಟುಸಿರು ಬೀಸುವದು ಒಳಗೆಲ್ಲ,
ಉಸಿರಿಲ್ಲ ಒಮ್ಮೆ ನಗಲು.
* * * *

ಕರ್‍ಮಲೇಪವು ಇಲ್ಲ, ಬಗೆಯ ತಾಪವು ಇಲ್ಲ,
ಅಂದು ಒಂದು ನೀರ ಹೂವು;
ಮರ್‍ಮಭಿನ್ನರು ಮತ್ತೆ ಹೃದಯಭಿನ್ನರು ನಾವು
ಬುಡದೊಳಿಹ ಕೆಸರಠಾವು.
ಆಗಿ ಹುಣ್ಣಿಮೆಯ ಹಗಲು, ಗೌರಿಹುಣ್ಣಿಮೆ ಇರುಳು,
ಹೀಗಿಹುದು ಅದರ ದಿನವು;
ಚಿಗರಿಯಂದದಲಿಹುದು ದಿಂಕಿಡುವ ಅದರ ಮನ
ಕಿರಿಗರಿಯ ಹಾಗೆ ತನವು.
ಇಲ್ಲ ದುಃಖದ ಮಳೆಯು, ಇಲ್ಲ ಭೀತಿಯ ಚಳಿಯು
ಚಿಂತೆ ಸಂತಾಪವಿಲ್ಲ;
ಎಲ್ಲ ಸೊಗಸಿನ ಬೆಳೆಯು, ಎಲ್ಲ ಸೊಬಗಿನ ಕಳೆಯು,
ನಲಿವೊಲವು ಚೆಲವು ಎಲ್ಲ.
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...