ಗುರುಗಳು ತಮ್ಮ ಆಪ್ತ ಶಿಷ್ಯನನ್ನು ಕರೆದು “ನೀನು ಬಹಳದಿನ ನನ್ನಲ್ಲಿ ಅಭ್ಯಾಸ ಮಾಡಿರುವೆ. ಇನ್ನು ನೀನು ಹೊರಡುವ ಸಮಯ ಬಂತು. ಹೊರಡುವ ಮುನ್ನ ಈ ಪ್ರಶ್ನೆಗೆ ಉತ್ತರ ಹೇಳಿ ಹೋಗು” ಎಂದರು.
“ಆಲದ ಬೇರಲ್ಲಿ, ನನ್ನ ತಲೆಯ ಶಿಖೆಯಲ್ಲಿ ಏನು ವ್ಯತ್ಯಾಸ?” ಎಂದು ಕೇಳಿದರು.
“ಆಲದ ಬೇರು ಆಲದ ಮರದಿಂದ ಬಂದಿದೆ. ನಿಮ್ಮ ಶಿಖೆಯಲ್ಲಿನ ಕೂದಲು ತಲೆಯಿಂದ ಬಂದಿದೆ.” ಎಂದ.
“ಮೂಢ! ಇಷ್ಟು ದಿನ ಪಾಠ ಕಲಿತು ವ್ಯರ್ಥವಾಯಿತು. ನೀನು ಇನ್ನು ಮರ್ಮ ತಿಳಿಯಲಿಲ್ಲ. ಆಲದ ಬೇರು ಇಹದಲ್ಲಿ ಭೂಮಿಯ ಕಡೆಗೆ ಮುಖ ಮಾಡಿ ಬಗ್ಗಿದೆ. ನನ್ನ ಶಿಖೆಯ ಕೂದಲು ಮೇಲೆ ಪರದ ಕಡೆಗೆ ಮುಖ ಮಾಡಿದೆ.” ಎಂದರು.
ನಮ್ಮ ಚಿಂತನ ನಮ್ಮಲ್ಲಿ ಪ್ರತಿ ಬಿಂಬಿತವಾಗಿದೆ, ಎಂದಾಗ ಶಿಷ್ಯನಿಗೆ ಅರಿವಾಯಿತು.
*****