Home / ಕಥೆ / ಕಿರು ಕಥೆ / ಹಿತ್ತಾಳೆ ಕಿವಿ

ಹಿತ್ತಾಳೆ ಕಿವಿ

ಬಿಜ್ಜಳ ಮಹಾರಾಜರ ಬಳಿ ಅಣ್ಣ ಬಸವಣ್ಣನವರು ಮಹಾ ಮಂತ್ರಿಯಾದ ಹೊಸದರಲ್ಲಿ ಕಲ್ಯಾಣ ನಗರಿಯಲ್ಲಿದ್ದ ಚಾಡಿ ಕೋರರಾದ ಮಲ್ಲಪ್ಪ ಶೆಟ್ಟಿ ಕೊಂಡಿ ಮಂಚಣ್ಣ ಮುಂತಾದವರೆಲ್ಲ ಸೇರಿಕೊಂಡು ಒಮ್ಮೆ ಅಣ್ಣ ಬಸವಣ್ಣನವರು ಏಕಾಂತವಾಗಿದ್ದಾಗ ಅಲ್ಲಿಗೆ ಬಂದರು.

‘ಬಿಜ್ಜಳ ಮಹಾರಾಜರು ನಿಮ್ಮ ಬಗ್ಗೆ ಮೊನ್ನೆ ದಿನ ಎಲ್ಲರ ಎದುರಿಗೆ ನಿಮ್ಮನ್ನು ಕೇವಲವಾಗಿ ನಿಂದಿಸಿದರು!’ ಎಂದು ಬಂದವರು ಪೀಠಿಕೆ ಹಾಕಿ ಮಾತಿಗೆ ಮಾತು ಪೋಣಿಸುತ್ತಾ ಕುಳಿತರು.

“ನೀವು ಬಿಜ್ಜಳ ಮಹಾರಾಜರ ಮಾತುಗಳನ್ನು ಸತ್ಯವೆಂದು ನಂಬುವಿರೇನು ? ಅವರು ನಮ್ಮ ಬಗ್ಗೆ ಪ್ರೀತಿಯಿರುವವರು. ನಿಮ್ಮ ಮನಸ್ಥಿತಿ ಹಾಗೆ ಆಲೋಚಿಸಿರಬಹುದು. ಇಲ್ಲವೆ ನೀವು ಪೂರ್‍ವಗ್ರಹ ಪೀಡಿತರಿರಬಹುದು. ನಿಮಗೆ ಯಾವುದು ಸತ್ಯವೆನಿಸುವುದು?” ಅಣ್ಣ ಬಸವಣ್ಣನವರು ಬಂದಿದ್ದವರನ್ನು ಪ್ರಶ್ನಿಸಿ ಅವರ ಮುಖ ನೋಡುತ್ತಾ ಕುಳಿತರು.

ಅಲ್ಲಿದ್ದವರೆಲ್ಲ ಬೆವರ ತೊಡಗಿದರು. ತೊದಲ ತೊಡಗಿದರು.

‘ಮಹಾ ಮಂತ್ರಿಗಳೇ… ಬಿಜ್ಜಳ ಮಹಾರಾಜರು ಏನೆಂದು ನಮಗೇನು ತಿಳಿಯದು. ಸತ್ಯಾಸತ್ಯತೆ ಕುರಿತು ನಾವು ಆಲೋಚಿಸಿಲ್ಲ. ನಿಮ್ಮ ಬಗ್ಗೆ ಹಾಗೆ ಅಂದಿದ್ದನ್ನು ಹೇಳಲು ಬಂದಿದ್ದೆವು’ ಎಂದರು.

“ನಿಮ್ಮ ಚಾಡಿ ಮಾತುಗಳಿಂದೇನು ಲಾಭವಿಲ್ಲ. ಕಲ್ಯಾಣದ ಜನತೆಗೆ ಬಿಜ್ಜಳ ಮಹಾರಾಜರ ಬೊಕ್ಕಸ ತುಂಬಿಸಲು ಚಿಂತಿಸಿ, ಮಹಾರಾಜರ ಜನರ ತಲೆ ತುಂಬಿಸಿ ನೀವೂ ಹಾಳಾಗಬೇಡಿ ! ನೀವು ಮೊದಲು ಹೊರಡಿ. ಇನ್ನೆಂದು ನನ್ನ ಬಳಿ ಅವರಿವರ ಸುದ್ದಿ ತಂದು ನನ್ನ ಸಮಯ ವ್ಯರ್‍ಥ ಮಾಡಬೇಡಿ’ ಎಂದು ಅಣ್ಣ ಬಸವಣ್ಣನವರು ಖಾರವಾಗಿ ಪ್ರತಿಕ್ರಿಯಿಸಿದರು.

‘ನಾವು ನಿಮಗೆ ಉಪಕಾರ ಮಾಡಲು ಬಂದಿದ್ದೆವು. ನೀವು ನಮ್ಮನ್ನು ಅವಮಾನಿಸಿ ಕಳಿಸಿದ್ದು ಸರಿಯಿಲ್ಲ. ಇದರ ಪ್ರತಿಫಲ ಉಂಡೇ ಉಣ್ಣುವಿರಿ…’ ಎಂದು ಬಂದಿದ್ದವರು ಕೂಗಾಡಿದರು.

ಅಣ್ಣ ಬಸವಣ್ಣನವರು ಬಂದಿದ್ದವರನ್ನು ಮೌನ ವ್ರತದಿ ಸಾಗ ಹಾಕಿದರು.
*****

Tagged:

Leave a Reply

Your email address will not be published. Required fields are marked *

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...