ನಗುವಿರಲಿ
ಅಳುತಿರಲಿ
ಎರಡನ್ನು ನಂಬೆ.
ನಗೆ ನಂಜು
ಅಳು ಮಂಜು
ಇದೀತು ಎಂಬೆ.
ಮಾತಿರಲಿ
ಇರದಿರಲಿ
ಎರಡು ಸಮ ತಾನು.
ಇದು ಮರುಳು
ಅದು ಹುರುಳು
ಇರಲಾರದೇನು?
ಹೊರಗೊಂದು
ಒಳಗೊಂದು
ಲಕ್ಷಣವು ಸಾಕು.
ಹಾಗೇನು?
ಹೀಗೇನು?
ಲಕ್ಷ್ಯವೇ ಬೇಕು.
*****
ನಗುವಿರಲಿ
ಅಳುತಿರಲಿ
ಎರಡನ್ನು ನಂಬೆ.
ನಗೆ ನಂಜು
ಅಳು ಮಂಜು
ಇದೀತು ಎಂಬೆ.
ಮಾತಿರಲಿ
ಇರದಿರಲಿ
ಎರಡು ಸಮ ತಾನು.
ಇದು ಮರುಳು
ಅದು ಹುರುಳು
ಇರಲಾರದೇನು?
ಹೊರಗೊಂದು
ಒಳಗೊಂದು
ಲಕ್ಷಣವು ಸಾಕು.
ಹಾಗೇನು?
ಹೀಗೇನು?
ಲಕ್ಷ್ಯವೇ ಬೇಕು.
*****