ಆಶ್ರಮದಲ್ಲಿ ಶಿಷ್ಯ ಆಟ ಆಡಿಕೊಂಡು ಕಾಲ ಕಳೆಯುತ್ತಿದ್ದ. ಅವನಿಗೆ ಗುರೋಪದೇಶದಲ್ಲಿ ಏಕಾಗ್ರತೆ ಇರಲಿಲ್ಲ.
ಗುರುವು ಅವನನ್ನು ಕರೆದರು. “ಗೂಟಕ್ಕೆ ಕಟ್ಟಿ ಹಾಕಿದ್ದಿಯಾ?” ಎಂದರು.
“ದನವನ್ನೇ? ಗುರುಗಳೇ?” ಎಂದ ಶಿಷ್ಯ.
“ಅಲ್ಲ ನಿನ್ನ ಮನವನ್ನು” ಎಂದರು ಗುರುಗಳು.
ಶಿಷ್ಯನಿಗೆ ಅಂದಿನ ಪಾಠದ ಅರಿವಾಯಿತು. ಗುರುವಿನ ಮಾತಿನ ಮರ್ಮವನ್ನು ತಿಳಿದ.
*****