ನನ್ನ ಪಾಡ ತೊಡುವಲ್ಲಿ-
ದನಿ ಕುಗ್ಗಿತು, ಬಾತವು ಕಣ್ಣು;
ನಿನ್ನ ನಾಡ ನೋಡುವಲ್ಲಿ-
ಗಮಗಮ ಹೂ, ಸೀ-ಸವಿ ಹಣ್ಣು
ಕೆಂಡ-ಬೆಂಕಿ ಕಂಡ ಅಲ್ಲಿ-
ಬರಿ ಇದ್ದಿಲು, ಸುಟ್ಟಿಹ ಬೂದಿ;
ಕತ್ತಲಲ್ಲಿ ಕಣ್ತೆರೆದರು-
ಕಿಡಿ ಬೆಳಕಿಗು ಸುತ್ತಲು ಹಾದಿ;
ನೆರೆಹಾವಳಿ ಮೆರೆದಲ್ಲಿ-
ಹಾಳೊಡಲಲಿ ಹಾಸಿದ ಮಳಲು;
ಬಯಲಾಟವು ನೆರೆದಲ್ಲಿ-
ನೆಲೆನೆಲೆ ಏರುವ ಹೊಳಲು.
*****