Home / ಕವನ / ಕವಿತೆ / ಯಿಸ್ನು ಪಡಚ

ಯಿಸ್ನು ಪಡಚ

ಪದವಿ ನೋಡ್ಕೊಂಡ್ ದೊಡ್ಡೋನ್ ಅನ್ನೋದ್
ಲೋಕಕ್ ಒಂದ್ ಆಳ್ ರೋಗ!
ಇದನ ಕಾಣ್ಬೌದ್ ಎಲ್ಲಾ ರೂನೆ
ಇಸ್ನೂನ್ ಒಗಳೋದ್ರಾಗ! ೧

ಏನ್ ಯಿಸ್ನೂ ನೋ! ಬೆಪ್ಪಂಗ್ ಬಿದ್ದೌನ್
ಆಲಿನ್ ಸೌಂದ್ರದ್ ಮದ್ದ!
ಆಲ್ನಲ್ ಬೆಳ್ಳಾಕ್ ಚೀಪ್ತಾನಿರಾಕ್
ಅಸ್ಮಗೂನ ಸುದ್ದ? ೨

ಬುಳ್ಡೇಲ್ ಔಂಗ್ ಒಂದ್ ಇಂಕ್ರಾನಾರ
ಬುದ್ದಿ ಗಿದ್ದಿ ಇದ್ರೆ!
ಯೋಚ್ನೆ ಬೇಡ್ವ-ಯಾವಾಗ್ನಾರ
ಆಲ್ ಒಡದ್ ಉಳ ಬಿದ್ರೆ! ೩

ಯೆಸ್ನೂಂತ್ ಅಂದ್ರೆ -ಬ್ರಮ್ಮಂಗ್ ಅಪ್ಪ!
ಯೆಚ್ಗೆ ಯೋಳಾದ್ ಯಾಕ?
ಮಗನೆ ಮೊದ್ದಿನ್ ಮುದ್ದೆ ಆದ್ರೆ
ಅಪ್ಪ ಯೆಂಗಿರಬೇಕ! ೪

ನಾನೇನಾರ ಯಿಸ್ನಾಗಿದ್ರೆ
ಗೊತ್ತಾ ಏನ್ ಮಾಡ್ತಿದ್ದೆ?
ಯೆಂಡದ್ ಸೌಂದ್ರದ್ ಮದ್ಧಕ್ಕೋಗಿ
ಝಾಂಡ ಆಕ್ಬುಡ್ತಿದ್ದೆ! ೫

ಸೇಸನ್ ಸಾವಿರ್ ತಲೆಗೊಳ್ನೂವೆ
ಸಾಲಾ ಈಸ್ಕೊಂಬುಟ್ಟು
ಸೌಂದ್ರಕ್ ಬಾಯ್ ಇಟ್ ಈರ್‍ದಾಂತ್ ಅಂದ್ರೆ
ಸೌಂದ್ರಕ್ ಈ ಸೌಂದ್ರೆ ಛಟ್ಟು! ೬

ದೊಡ್ದ್ ಒಂದ್ ಸೌಂದ್ರ ಕಾಲಿ ಆದ್ರೆ
ಇನ್ನಾ ಅವೆ ಆರು!
ಆಲು! ತುಪ್ಪ! ಮೊಸರು! ಯೆಣ್ಣೆ!
ಕಬ್ಬಿನ್ನಾಲು! ನೀರು! ೭

ಮಿಕ್ಕಿದ್ ಆರ್‍ನು ಮುಂದ್ ಇಟ್ಕೊಂಡಿ
ಛೂ ಮಂತ್ರಾಂದ್ರೆ ಆಯ್ತು!
ಯಿಸ್ನು ಆದೋನ್ ಸಕ್ತೀಂತ್ ಅಂದ್ರೆ
ಎಲ್ಲಾ ಯೆಂಡ್ ಆಗೋಯ್ತು! ೮

ಬುದ್ದಿ ಇದ್ದೋರ್‍ಗ್ ಎಲ್ಲೈತ್ ಸಕ್ತಿ?
ಯೇನೇಳ್ಕೊಂಡ್ ಏನ್ ಬತ್ತು!
ಸಕ್ತಿ ಇದ್ದೋರ್‍ಗ್ ಬುದ್ದಿ ಇಲ್ದಿದ್ರ್
ಅದೂ ಒಂದು ಗತ್ತು! ೯

ದೊಡ್ಡೋನ್ ಯಿಸ್ನು ಕಲ್ತ್ಕೊಬಾರ್‍ದ
ಚಿಕ್ಕೋನ್ ಕುಡಕನ್ ಸೇರಿ!
ಚೆ! ಚೆ! ಚೆ! ಚೆ! ಎಲ್ಲಾರ್ ಉಂಟ!
ಆಲ್ನಲ್ ಔನ್ ಗೋರಿ! ೧೦
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...