ಧೀನ ಖೇಲ ಮದೀನದಲಾವಿಯ ನೋಡ || ಪ ||
ಸಾಲು ಮಳಿಗೆ ಬೈಲಾದ ಬೈಲಿನೊಳು
ಕಲ್ಲುಮುಳ್ಳಿನ ಮೇಲೆ ಕಾಲನೂರಿ || ೧ ||
ಮರಣ ಶರಣರಿಗೆ ಪಂಚಾಮೃತ ಘನ
ಸುರನ ಶಾಖವನು ಸುಟ್ಟು ಧರಣಿಯ ಮೇಲೆ || ೨ ||
ಭೂವಲಯದೊಳು ಶಿಶುನಾಳಧೀಶನ
ಹಾವಿನ ಫಣಿಯನು ಮೆಟ್ಟಿ ತುಳದಿತು || ೩ ||
*****
ಧೀನ ಖೇಲ ಮದೀನದಲಾವಿಯ ನೋಡ || ಪ ||
ಸಾಲು ಮಳಿಗೆ ಬೈಲಾದ ಬೈಲಿನೊಳು
ಕಲ್ಲುಮುಳ್ಳಿನ ಮೇಲೆ ಕಾಲನೂರಿ || ೧ ||
ಮರಣ ಶರಣರಿಗೆ ಪಂಚಾಮೃತ ಘನ
ಸುರನ ಶಾಖವನು ಸುಟ್ಟು ಧರಣಿಯ ಮೇಲೆ || ೨ ||
ಭೂವಲಯದೊಳು ಶಿಶುನಾಳಧೀಶನ
ಹಾವಿನ ಫಣಿಯನು ಮೆಟ್ಟಿ ತುಳದಿತು || ೩ ||
*****