ದುಃಖದಲಾವಿ ಏ ಐಸುರ ಪೇಳುವ ಸುದ್ಧಿ
ಮಕ್ಕಾಮದೀನ ವಿಸ್ತಾರ || ಪ್ರ ||
ಲಕ್ಷವಿಟ್ಟು ಕಥಿಗಳ ಕೇಳರಿ ಸರ್ವರು
ಸಿಕ್ಕಾರ ಯಜೀದನ ಗಡಿಯಲ್ಲಿ ತಾವು ಹೋಗಿ
ಶೇಷಧರ ಗಿರಿಜೇಶ ನಿತ್ಯ ಪಾರೇಶಗೋಕುಲ ಹಾಸ್ಯ ಎನ್ನುತ ಜನ
ಭಾಷೆ ಬಲ್ಮೆ ಹಾಸ್ಯನರವರ ದಾಸರಲ್ಲವು ಕರುಣ ಶರಧಿ || ೧ ||
ಯಂಥಾ ಕೆಡಕ ಯಜೀದ
ಪಂಥಾ ಹ್ಯಾವ ಬಹಳ ಪಿತೂರಿ ನಡಸಿದ
ಅಂತರಂಗದಿ ಪತ್ರಬರೆದು ಬೇಗನೆ ಕಳಿಸಿ
ತಂತ್ರ ತಿಳಿಯದೆ ಜಲ್ಮ ಕೊಲಿಸ್ಯಾನೋ ಕ್ಷಣದಲ್ಲಿ
ರಂಗ ಮಾಣಿಕ ಹಾರ ಕೊರಳೊಳು
ಮಂಗಲಾತ್ಮಕ ಮಹಿಮ ತಿಳಿದು ಪೂರ
ಯಂಕಟ ರಿಗಮ ಗರಿ ಗರಿ
ಪಮ ಗರಿ ಗರಿ ರಿಗಮ ಪದಾ || ೨ ||
ಪಡಿದಾ ಶಿವ ಶಿವ ಎನ್ನುತ
ಒಡಿಯಸ್ವಾಮಿ ಮುನಿದಾನು ಶ್ರೀ ಗುರುನಾಥ
ಕಡಲಶಯನ ಕಾಲ ಸಾಂಬನೆ ಗತಿಯೆಂದು
ಬಿಡದೆಯೆಂದು ಮುಕ್ತಿ ಪಡೆದಾನು ಕರ್ಬಲದಿ
ಗೋಪುರ ಪಂಚಮ ಹರಿವರ
ದೀಪ ಸಂಪನ್ನ ತಾಳಿ ಉದರದಿ
ರೂಪ ಮೀರಿದ ಶಶಿಯು ದ್ರೌಪದಿ
ಆಳಿದವನು ಧರ್ಮನು || ೩ ||
ನೀಗಿತು ಮಾಯಾಮಥನ
ಮೋಸದಲಿ ಮೂಲಾತು ಕಬ೯ಲ ಸದನ
ತೂಗಿ ಹಾಡುವೆ ಗ್ರಾಮ ಶಿಶುನಾಳಧೀಶನ
ತೂಗಿ ಆಡು ಅಲಾವಿ ನೀನ || ೪ ||
*****