Home / ಕಥೆ / ಸಣ್ಣ ಕಥೆ / ಕೈಲಾಗದ ಅರಸರು

ಕೈಲಾಗದ ಅರಸರು

ಚಿಕ್ಕದೇವರಾಜ ಒಡೆಯರ ತರುವಾಯ ಅವರ ಪುತ್ರ ಕಂಠೀರವ ನರಸರಾಜರೆಂಬುವರು ಪಟ್ಟವನ್ನೇರಿದರು. ಇವರು ಜನ್ಮತಃ ಮೂಕರಾಗಿದ್ದರು. ತಂದೆಗೆ ಆಪ್ತನಾಗಿ ಮಂತ್ರಿ ಪದವಿಯಲ್ಲಿದ್ದ ತಿರುಮಲಾರ್ಯನು ಇರುವವರೆಗೂ ಆಡಳಿತವು ಭದ್ರವಾಗಿತ್ತು. ಆತನು ತೀರಿಹೋದ ಮೇಲೆ ಆಡಳಿತದಲ್ಲಿ ಬಿಗಿತಪ್ಪಿತು. ಮೂಕರಸರು ಆಳುತ್ತಿರುವಲ್ಲಿ ಅಧಿಕಾರಿಗಳಿಗೆ ಹಿಂದಿನಷ್ಟು ನಯಭಯಗಳಿರಲಿಲ್ಲ. ಆದರೂ ಚಿಕ್ಕದೇವರಾಜ ಒಡೆಯರ ನೆನಪು ಇನ್ನೂ ಬಲವಾಗಿತ್ತು. ಮೂಕರಸರು ಹತ್ತು ವರ್ಷಕಾಲ ಅನುಭವಿಸಿದರು.

ಮೂಕರಸರ ತರುವಾಯ ದೊಡ್ಡ ಕೃಷ್ಣರಾಜ ಒಡೆಯರೆಂಬ ಅವರ ಮಕ್ಕಳು ದೊರೆಗಳಾದರು. ಇವರಿಗೆ ಕೋಪವು ಬಲು ಬೇಗ ಬರುತ್ತಿತ್ತು; ಕೋಪ ಬಂದಾಗ ನ್ಯಾಯಾನ್ಯಾಯಗಳನ್ನು ನೋಡದೆ ಎದುರಾದವರನ್ನು ಅತಿಯಾಗಿ ಹಿಂಸೆಗೆ ಗುರಿಮಾಡಿ ಕ್ರೌರ್ಯವನ್ನು ತೋರುತ್ತಿದ್ದರು; ಆದರೆ ಪರಕ್ಷಣವೇ ಅವರನ್ನು ಕರೆಸಿ ಬಹುಮಾನವನ್ನು ಮಾಡುತ್ತಿದ್ದರು. ಸ್ಥಿರಬುದ್ದಿಯು ಈ ದೊರೆಗಿರಲಿಲ್ಲ; ಹೆಮ್ಮೆಯೂ ಲೋಲುಪ್ತಿಯ ಇದ್ದವು. ಹತ್ತೊಂಭತ್ತು ವರ್ಷಕಾಲ ರಾಜರಾಗಿದ್ದರೂ ಆಡಳಿತದ ವಿಚಾರಗಳನ್ನು ತಿಳಿಯಲು ಪ್ರಯತ್ನಿಸದ ಅವುಗಳೆಲ್ಲವನ್ನೂ ಮಂತ್ರಿಗಳಿಗೆ ಬಿಟ್ಟು ಕೊಟ್ಟು ತಾವು ಸುಖಗಳಲ್ಲಿ ಮಗ್ನರಾಗಿ ತಮ್ಮ ಸಮಾನರೇ ಇಲ್ಲವೆಂದು ತಿಳಿದಿದ್ದರು. ಅಧಿಕಾರಿಗಳೂ ರಾಜರಿಗೆ ಬೇಕಾದ ಸುಖಗಳನ್ನೊದಗಿಸುತ್ತ ಅವರಿಗೆ ರಾಜಕಾರ್ಯಗಳ ತೊಂದರೆಕೊಡದೆ ತಾವೇ ಕೆಲಸಕಾರ್ಯಗಳನ್ನು ನಿರ್ವಹಿಸುತ್ತಿದ್ದರು. ರಾಜರು ಕೇಳಿದಷ್ಟು ಹಣ ಬೊಕ್ಕಸದಿಂದ ಬರುತ್ತಿತ್ತು. ಆದ್ದರಿಂದ ಈ ರಾಜರು ಸಂಗೀತ, ಸಾಹಿತ್ಯ, ನಾಚು, ರಂಗು ಮುಂತಾದುವುಗಳಲ್ಲಿಯೇ ಆಸಕ್ತರಾಗಿದ್ದರು. ಮೃಗಶಾಲೆಗೇ ವರ್ಷಕ್ಕೆ ಒಂದು ಲಕ್ಷ ವರಹಗಳನ್ನು ಇವರು ವೆಚ್ಚ ಮಾಡುತ್ತಿದ್ದರು. ಆ ಮೃಗ ಶಾಲೆಯಲ್ಲಿ ಹುಲಿ, ಕರಡಿ, ಸಿವಂಗಿ, ಕಾಡೆಮ್ಮೆ, ಹುಲ್ಲೆ ಕರು, ಕಡವೆ, ಸಾರಂಗ, ಕಪಿ, ಗಿಣಿ, ಮಲೆಸೇನ, ಕಾಳಿಂಗ, ನವಿಲು, ಪುನುಗಿನಬೆಕ್ಕು, ಪಾರಿವಾಳ, ಗೌಜಹಕ್ಕಿ, ಲಾವಕನಹಕ್ಕಿ, ಗಿಡಗ, ಭೈರಿ ಮುಂತಾದ ನಾನಾ ಬಗೆಯ ಮೃಗಗಳಿದ್ದವು. ಈ ರಾಜರು ಈ ಮೃಗಗಳ ಸಹವಾಸದಲ್ಲಿಯೂ ತಮ್ಮ ಸುಖವಿನೋದಗಳಲ್ಲಿಯೈ ಕಾಲ ಕಳೆಯುತ್ತ ಬೊಕ್ಕಸದ ಹಣವನ್ನು ವೆಚ್ಚ ಮಾಡಿದರು.

ಈ ದೊಡ್ಡ ಕೃಷ್ಣರಾಜ ಒಡೆಯರವರಿಗೆ ಮಕ್ಕಳಿರಲಿಲ್ಲ. ಅವರ ಹಿರಿಯ ಕುಟುಂಬ ದೇವಾಜಮ್ಮಣ್ಣಿಯವರು ರಾಜ್ಯದ ಸೂತ್ರಗಳನ್ನು ಕೈಹಿಡಿದು ದತ್ತುಮಾಡಿಕೊಳ್ಳುವ ಯೋಚನೆಮಾಡಿದರು. ಮುಂದೆ ಆಳಿದ ಚಾಮರಾಜ ಒಡೆಯರೆಂಬವರೂ ಚಿಕ್ಕ ಕೃಷ್ಣರಾಜ ರೆಂಬವರೂ ಗೊಂಬೆಗಳಂತಾದರು.
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...