ಓ ಮನವೇ ಪ್ರೇಮ ಪೂಜಾರಿ ನಾನು
ನುಡಿಸುವ ವೀಣೆಯ ಶೃತಿಯೆ ನಾನು

ನುಡಿಯುವ ಮನದಾ ವೈಣಿಕ ಕೇಳೆ
ಕರೆವ ಕೊರಳ ಮಂಜುಳ ನಾದವೇ ನಾನು

ಭಾವದಿ ಕರೆವ ಭಾಮಿನಿ ಕೇಳೆ
ಮಧುರ ರಾಗಿ ಕರೆವ ತರಂಗಿಣಿ ನಾನು

ಅನುರಾಗದಿ ಕರೆವ ಆನಂದಿನಿ ಕೇಳೆ
ಮೋಹನ ಮುರಳಿಗಾನ ಸಖಿಯೇ ನಾನು

ಒಲಿದ ಮನದಾ ಮಾನಸೀ ಕೇಳೆ
ಸಪ್ತಸ್ವರ ಲಲಿತ ನಾಟ್ಯ ಮಯೂರಿ ನಾನು

ಚೈತ್ರಹೊನಲ ನಿತ್ಯೋತ್ಸವ ಕೇಳೆ
ಹೊಂಬೆಳಕ ಕಿರಣ ನವವಸಂತ ನಾನು

ಪ್ರೇಮ ಚಿತ್ತದೆ ಬೆರೆವೆ ಸ್ವಪ್ನಸುಂದರಿ ಕೇಳೆ
ತನ್ಮಯದೆ ಕಳೆವ ಹಂಸಗಮನೆ ನಾನು

ನಾನು ತಾನೆಂದ ಅರಿವ ಪ್ರಕೃತಿಯೆ ಕೇಳೆ
ಉಸಿರಾಗಿಹ ಹಸಿರ ಪ್ರೇರಕ ಪುರುಷನೇ ನಾನು
*****