ಶಿವನಾಮ

ಭಜಿಸು ಭಜಿಸು ನಿತ್ಯ ಶಿವ ನಾಮ
ಶಿವನಾಮವೊಂದೇ ಮುಕ್ತಿಗೆ ಸೋಪಾನ
ನೀನು ಕೋಟಿ ಪಾಪಗಳು ಮಾಡಿದರೇನು
ಅಳಿಸಿ ಹಾಕುವುದು ನಿನ್ನ ಆತ್ಮಧ್ಯಾನ

ಸತ್ಯವೊಂದೇ ಶಿವನಲ್ಲಿಗೆ ಕರೆದೊಯ್ಯುವುದು
ನಿರ್ದೋಷ ಮನವೆ ಅದಕ್ಕೆ ಸಾಕ್ಷಿ
ಮನವೊಂದು ನಿನ್ನವನಾದ ರಾಯ್ತು
ಸುಲಭವು ಅದು ದೂರವಿಲ್ಲ ಮೋಕ್ಷ

ಶಿವನ ಮೊಗಾರವಿಂದವೇ ಚೆನ್ನ ಚೆನ್ನ
ಅದೇ ಭಕ್ತಿರಸದ ಉನ್ಮತ್ತ ಧಾಮ
ಅವನ ನನ್ನು ಪಡೆದು ಕೊಂಡರಾಯ್ತು
ತೊಂದರೆಗಳಿಲ್ಲ ವಿಷಯ ಸುಖ ಕಾಮ

ಬಾಂಧವರನ್ನು ಪ್ರೀತಿಸುವಂತೆ ಪ್ರೀತಿಸು
ಶಿವನೆ ನಿನ್ನವನಾಗಿ ರೂಪಿಸಿಕೊಳ್ಳು
ಅವನ ಸಾನಿಧ್ಯ ಎಲ್ಲ ಇಹಪರ ಸುಖ
ಮಾಣಿಕ್ಯ ವಿಠಲ ಶಿವನ ಗೆಲ್ಲು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ವಾಗ್ದೇವಿ – ೩೫
Next post ಓ ಮನವೇ ಪ್ರೇಮ ಪೂಜಾರಿ

ಸಣ್ಣ ಕತೆ

  • ಬಾಳ ಚಕ್ರ ನಿಲ್ಲಲಿಲ್ಲ

    ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…

  • ಡಿಪೋದೊಳಗಣ ಕಿಚ್ಚು…

    ಚಿತ್ರ: ವಾಲ್ಡೊಪೆಪರ್‍ ಬೆಳಿ… ಬೆಳಿಗ್ಗೆನೇ… ಡಿಪೋದಲ್ಲಿ, ಜನ್ರು ಜಮಾಯಿಸಿದ್ದು ಕಂಡು, ಡಿಪೋ ಮ್ಯಾನೇಜರ್ ಮನೋಜ್ ಪಾಟೀಲರ ಹೃದಯ ಬಾಯಿಗೆ ಬಂತು. ’ಮ್ಯಾನೇಜರ್ ಡಿಪೋದಲ್ಲಿ ಕ್ಷಣ ಇಲ್ಲೆಂದ್ರೆ ಸಾಕು…… Read more…

  • ಕಳ್ಳನ ಹೃದಯಸ್ಪಂದನ

    ಅದು ಅಪರಾತ್ರಿ ೨ ಘಂಟೆ ಸಮಯ. ಎಲ್ಲರೂ ಗಾಢ ನಿದ್ರೆಯಲ್ಲಿದ್ದರು. ಊರಿನಿಂದ ಸ್ವಲ್ಪ ದೂರವಾಗಿದ್ದ ಕಲ್ಯಾಣ ನಗರದ ಬಡಾವಣೆ, ಅಷ್ಟಾಗಿ ಹತ್ತಿರ ಹತ್ತಿರವಲ್ಲದ ಮನೆಗಳು, ಒಂದು ವರ್ಷದ… Read more…

  • ಆವರ್ತನೆ

    ಒಬ್ಬ ಸಾಹಿತಿಯನ್ನು ನೋಡುವ ಕುತೂಹಲ ಯಾರಿಗಿಲ್ಲ? ಪಕ್ಕದೂರಿನ ಹೈಸ್ಕೂಲಿನಲ್ಲಿ ಕಾದಂಬರಿಕಾರ ಅ.ರ.ಸು.ರವರ ಕಾರ್ಯಕ್ರಮವಿದೆಯೆಂಬ ಸುದ್ದಿ ಕೇಳಿ ನಾವು ನೋಡಲು ಹೋದೆವು. ಅ.ರ.ಸು.ರವರ ಕೃತಿಗಳನ್ನು ನಾವಾರೂ ಹೆಚ್ಚಾಗಿ ಓದಿರಲಾರೆವು.… Read more…

  • ರಾಮಿ

    ‘ಸಲಾಮ್ರಿ’ ರೈಲಿನ ಹೊತ್ತಾಗಿದೆ. ವೆಂಕಟೇಶನು ಒಂದೇಸವನೆ ತನ್ನ ಕೈಯಲ್ಲಿಯ ಗಡಿಯಾರವನ್ನು ನೋಡುತ್ತಿದ್ದಾನೆ. ‘ಸಲಾಮ್ರೀಽ ಏಕ ಪೈಸಾ.’ ಆಗ ಮತ್ತೆ ಒದರಿದಳು. ಟಾಂಗಾದ ತುದಿ ಹಿಡಿದು ಕೊಂಡು ಓಡ… Read more…