ಜನ್ಮಭೂಮಿ ಇದು
ಕರ್‍ಮ ಭೂಮಿ ಇದು
ಸ್ವರ್ಗಕ್ಕಿಂತ ಮಿಗಿಲಾದುದು
ಆದಿಯಿಂದಲಿ ಅನಾದಿಕಾಲದ
ವಿಶ್ವಕರ್‍ಮದ ಭೂಮಿ ನಮ್ಮದು

ಭರತ ಭೂಮಿ ಇದು
ಪುಣ್ಯ ಭೂಮಿ ಇದು
ವೀರ ಚರಿತೆಯ ಬೀಡಿದು
ರಾಜ ಮಹಾರಾಜರ
ತ್ಯಾಗ ಶೀಲರ ಭೂಮಿನಮ್ಮದು

ಗಂಗೆ ತುಂಗೆಯರು ಹುಟ್ಟಿದರಿಲ್ಲಿ
ವೇದ ಪುರಾಣಗಳು ಮೆರೆದವಿಲ್ಲಿ
ಧರ್‍ಮ ಕರ್‍ಮ ಜ್ಯೋತಿ ಬೆಳಗಿದ
ಶ್ರೀ ರಾಮನಾಳಿದ ಭೂಮಿ ನಮ್ಮದು

ಭಾರತವೆ ನಮ್ಮ ಉಸಿರು
ಈ ಭೂಮಿ ನಮ್ಮ ಹಸಿರು
ಇಲ್ಲಿ ಹುಟ್ಟಿದ ನಾವೇ ಧನ್ಯರು
ನಾವೇ ಧನ್ಯರು ಮಾನ್ಯರು
*****