ಇದನ್ನು ಕತೆಯೆನ್ನಿ, ಏನು ಬೇಕಾದರೂ ಎನ್ನಿ. ಅದು ಪ್ರಸ್ತುತವಲ್ಲ. ನಿಮಗೆ ಕತೆಯೇ ಬೇಕಿದ್ದರೆ ನಾನೊಂದು ಪ್ರೇಮ ಕತೆಯನ್ನೋ, ಕೌಟುಂಬಿಕ ಕತೆಯನ್ನೂ ಬರೆಯಬಹುದು. ಹಾಗೆ ಬರೆದರೆ ಅದು ಮತ್ತೊಂದು ಸಾಮಾನ್ಯ ಕತೆಯೇ ಆಗುವುದು ಕಂಡುಬಂದ ಅನುಭವಗಳನ್ನು ಕಲ್ಪನೆಯ ಸಂದರ್‍ಭಗಳಿಗೆ ಹೊಂದಿಸಿ ನಿಮ್ಮ ಮನಸ್ಸನ್ನು ಸೆಳೆಯಬಹುದು. ಆದರೆ ಸದ್ಯ ಬೇಡ, ಅದು ನನ್ನ ಉದ್ದೇಶವೂ ಅಲ್ಲ. ನಾನು ನಿಮ್ಮಲ್ಲಿ ಅನೇಕರಿಗೆ ಬದುಕಿನ ಯಾವುದೋ ಕಾಲದಲ್ಲಿ ಶರೀರದ ನಾಡಿಯ ಬಿಸಿಯಲ್ಲಿ, ಮನಸ್ಸಿನ ಅಜ್ಞಾನದ ಕತ್ತಲೆಯಲ್ಲಿ ಸರಿದುಹೋದ ಅನುಭವದ ಹತ್ತಿರ ಎಳೆಯ ಬಯಸುತ್ತೇನೆ.
ನನ್ನ ಎಳೆಯ ಮಗ ನನಗೆ ಎದುರಾಡುವುದನ್ನು, ಹೆಂಡತಿಯ ಸಂಬಂಧದ ನಡುವೆ ಬರುವ ರೀತಿಯನ್ನು ನೋಡಿದರೆ ನನ್ನ ತಂದೆ ನನ್ನ ವಿರೋಧಿಯಾಗಿದ್ದುದರ ಸತ್ಯ ಅರಿವಾಗುತ್ತದೆ. ನಾನು ಎಳೆಯನಾಗಿರುವಾಗ ನನಗೆ ನೆನಪಿದೆ. ತಂದೆ ಬೆಳಗಾತ ಎದ್ದು ಹೋದರೆ ಮಧ್ಯಾಹ್ನ ನಾನು ಶಾಲೆಗೆ ಹೋಗಿರುವ ಹೊತ್ತಿನಲ್ಲಿ ಬಂದು ತಾಯಿಯೊಡನೆ ಕೆಲ ಹೊತ್ತು ಇದ್ದು ಹೋಗುತ್ತಿದ್ದ. ಮತ್ತೆ ನಾನು ಮಲಗಿದ ನಂತರ ರಾತ್ರಿಯಲ್ಲಿ ಬರುತ್ತಿದ್ದ. ನಮ್ಮ ದೊಡ್ಡ ಮನೆ ಮತ್ತು ಸಂಸಾರದ ಹೊಣೆಗಾರಿಕೆ ಅದಕ್ಕೆ ಕಾರಣವೆಂದು ಅಮ್ಮ ಹಲವು ಸಲ ಹೇಳಿದ್ದರೂ ನನಗೆ ಅದರ ಅರ್‍ಥ ಆಗಿರಲಿಲ್ಲ. ನನಗೆ ಮಾತ್ರ ಅವನ ಮೇಲೆ ಸಿಟ್ಟು. ಅವನು ನಾನಿಲ್ಲದಾಗ ಬಂದು ತಾಯಿಯ ಜೊತೆಗಿದ್ದು ಹೋಗುವುದು ರಜೆಯ ದಿನಗಳಲ್ಲಿ ಮನೆಯೊಳಗಿರುವ ಎಲ್ಲ ಹೊತ್ತೂ ಅಮ್ಮನೊಡನೆ ಮಲಗುವ ಕೋಣೆಯಲ್ಲಿರುವುದು, ನನ್ನನ್ನು ಕರೆಯದೆ ನನ್ನೊಡನೆ ಆಡದೇ ಮಾತಾಡದೆ ಇರುವುದು ನನ್ನ ಸಿಟ್ಟಿಗೆ ಕಾರಣವಾಗುತ್ತಿತ್ತು. ನಾನು ಅವನನ್ನು ಕರೆಯುತ್ತ ಹತ್ತಿರ ಹೋದರೆ ತಾಯಿ. ‘ಮಗು ಅಪ್ಪನಿಗೆ ತೊಂದರೆಯಾಗುತ್ತದೆ. ಹೋಗು ಹೊರಗೆ ಆಡು’ ಎಂದು ಹೇಳುವುದರಿಂದ ಒಂದು ರೀತಿಯ ಆಘಾತವೇ ಆಗುತ್ತಿತ್ತು.
‘ಆದರೆ ಆಗಲಿ ನಾನು ಇಲ್ಲೇ ಇರುತ್ತೇನೆ’ ಎಂದು ಹಟ ತೋರಿಸಿದರೆ ‘ಹೋಗಣ್ಣ’ ಅಪ್ಪನಿಗೆ ಏನೋ ತುಂಬಾ ಕೆಲಸವಿದೆ…’ ಎಂದು ತಾಯಿ ಬೆನ್ನಿಗೆ ತಟ್ಟಿ, ಕೆನ್ನೆಗೊಂದು ಮುತ್ತನಿಟ್ಟು ದೂಡುವ ಪ್ರಯತ್ನ ಮಾಡುವಳು. ‘ಹಾಗಾದರೆ ನೀನೂ ಬಾ… ನನ್ನ ಜೊತೆಗೇ ಇರು… ಅಪ್ಪನ ಹತ್ತಿರವೇ ಏಕಿರಬೇಕು’ ಎಂದು ಕೇಳಿದರೆ ಅವರಿಗೆ ಏನಾದರೂ ಬೇಕಾಗುತ್ತದೆ…. ಅದಕ್ಕೆ’ ಎಂದು ತಾಯಿ ಹೇಳುವಳು. ಇದರಿಂದ ನನಗೆ ಸಮಾಧಾನವಾಗದೆ, ‘ಇಲ್ಲ, ನೀನು ನನ್ನೊಟ್ಟಿಗೆ ಬಂದಿರು. ಅಪ್ಪ ಒಬ್ಬನೇ ಕೂತಿರಲಿ’ ಎಂದು ಹೇಳಿದರೆ ತಂದೆಗೆ ಸಿಟ್ಟು ಬಂದಿರುವುದು, ಮುಖದಲ್ಲಿ ಕಾಣಿಸುತ್ತಿತ್ತು. ಕಣ್ಣರಳಿಸಿ ತುಟಿಯ ಮೇಲೆ ನಾಲಿಗೆಯಾಡಿಸಿ, ತಾಯಿಯ ಮುಖವನ್ನು ಒಂದಿಷ್ಟು ನೇರ ನೋಡಿ…
‘ಹೋಗೋ…. ಅಧಿಕ ಪ್ರಸಂಗಿ’ ಎನ್ನುತ್ತ ನಗುವ ಯತ್ನ ಮಾಡುವುದು ಕಾಣುತ್ತಿತ್ತು. ನನಗೆ ಅಪಮಾನವಾದಂತಾಗಿ ಹೊರಗೆ ಹೋಗಿ ಖಿನ್ನನಾಗಿ ಕುಳಿತಿರುತ್ತೇನೆ. ಮನಸ್ಸಿನಲ್ಲಿ ಇಂಥ ಪ್ರಸಂಗದಲ್ಲೆಲ್ಲ. ಒಂದು ರೀತಿಯ ಅಸಹಾಯ ಭಾವ ಲಹರಿ ಉಂಟಾಗುತ್ತಿದ್ದು, ಅಕ್ಕನ ಜೊತೆಯಾಗಲಿ, ಉಳಿದವರ ಜೊತೆಯಾಗಲಿ ಆಟವಾಡಲು ಮನಸ್ಸಾಗದಿದ್ದುದು ಯಾವದೋ ಮಾನಸಿಕ ಅಪೂರ್‍ತಿಯ ಸಿಟ್ಟಿನಿಂದಲೇ ಎಂದು ಈಗ ಅನಿಸುತ್ತದೆ.
ನನ್ನ ತಾಯಿ ಸುಂದರವಾದ ಹೆಂಗಸು, ತಂದೆಯ ಹಾಗೆಯೆ. ನಾನೂ ಹಾಗೆಯೇ, ನನ್ನನ್ನು ತಾಯಿ ತಬ್ಬಿಕೊಂಡು ಪ್ರೀತಿ ಮಾಡುವಾಗಲೆಲ್ಲ ನನಗೆ ಉಂಟಾಗುತ್ತಿದ್ದ ಆನಂದವನ್ನು ಯಾರಲ್ಲೂ ಹೇಳುವಂತಿರಲಿಲ್ಲ. ಆದರೆ ನಮ್ಮಿಬ್ಬರ ಸುಖದ ನಡುವೆ ತಂದೆ ಯಾವಾಗಲೂ ಬರುವುದು, ಅಡ್ಡಿಯಾದಂತೆ ನನಗನಿಸುತ್ತಿತ್ತು. ನನ್ನನ್ನು ತಾಯಿ ಪ್ರೀತಿಸಿ ಮುದ್ದಿಸುವಂತೆಯೇ ಅಪ್ಪನನ್ನು ಮುದ್ದಿಸುವುದು, ಬಿಗಿಯಾಗಿ ಹಿಡಿದುಕೊಳ್ಳುವುದು. ಇನ್ನೂ ಏನೇನೂ ಮಾಡುವುದನ್ನು ನಾನು ಎಷ್ಟೋ ಸಲ ಕಂಡಿದ್ದೇನೆ. ನನಗೆ ಅದರ ಪ್ರಾಯ ಮೀರುತ್ತಿದ್ದಂತೆ ರಾತ್ರಿ ಅವರ ಮಧ್ಯದಲ್ಲಿಯೆ ಮಲಗಿದ್ದರೆ…
‘ಅವನನ್ನು ಬೇರೆ ಮಲಗಿಸು, ಇನ್ನೂ ಅವನು ಮಗುವಲ್ಲ’ ಎಂದು ತಾಯಿಗೆ ಅಪ್ಪ ಹೇಳುತ್ತಿದ್ದದ್ದು ನನ್ನ ಎಳೆಯ ಭಾವನೆಯನ್ನು ಎಷ್ಟೋ ಸಾರಿ ಚಿವುಟಿತ್ತು. ನನಗೆ ತಾಯಿಯ ಸಾನಿಧ್ಯ ಸಂಪರ್ಕ ಹೆಚ್ಚು ಹೆಚ್ಚು ಬೇಕೆಂದಷ್ಟು ಅಪ್ಪ ಅವಳನ್ನು ನನ್ನಿಂದ ದೂರ ಮಾಡುತ್ತಿದ್ದಾನೆಂದು, ನನ್ನ ಮತ್ತು ಅವಳ ನಡುವೆ ಅಡ್ಡಿಯಾಗಿ ನಿಲ್ಲುತ್ತಿದ್ದನೆಂದು ಸಿಟ್ಟು ಬರುತ್ತಿತ್ತು. ಈ ಆತಂಕ ನನ್ನಲ್ಲಿ ಹುಟ್ಟಿಕೊಂಡ ಸಂದರ್ಭವನ್ನು ಹೇಳಿದರೆ ಬಹಶ ನೀವು ಒಪ್ಪಬಹುದು. ನನಗೆ ಈಗಲೂ ಸ್ಪಷ್ಟವಾಗಿದೆ. ರಾತ್ರಿ ಮಂಚದ ಎದುರು ಮಿಣುಕು ಚಿಮಣಿಯೊಂದು ಉರಿಯುತ್ತಿತ್ತು. ತಡವಾಗಿರಬೇಕು. ಮಂಚದಲ್ಲಿ ನಾನು ಮಲಗಿದ್ದೆ. ನಿದ್ದೆ ಬಂದಿರಲಿಲ್ಲ. ಅಪ್ಪನೂ ಬಂದಿರಲಿಲ್ಲ. ಅಮ್ಮ ನನ್ನನ್ನು ಮಲಗಿಸುವ ಪ್ರಯತ್ನ ಮಾಡಿ ಮಾಡಿ ಹೊರಗೆ ಹೋಗುತ್ತಿದ್ದಳು. ತುಂಬು ಚಳಿ, ಅಪ್ಪ ಬಂದಿರಬೇಕು. ಅವನು ಬಿಸಿ ಮಿಂದು, ಉಂಡು ಮಲಗಲು ಮಂಚಕ್ಕೆ ಬರುವಷ್ಟರಲ್ಲಿ ನನಗೆ ನಿದ್ರೆ ಬಂದಿರಬೇಕೆಂದು ತಿಳಿದು ನನ್ನನ್ನು ಮಂಚದ ಕೊನೆಗೆ ಸರಿಸಿದ್ದಳು. ಅಪ್ಪ ಒಮ್ಮೆಲೆ ಅಮ್ಮನನ್ನು ಅಪ್ಪಿ ಹಿಡಿದು ಮುದ್ದಿಸಿದ, ಅವಳ ಸೀರೆಯನ್ನು ಎಳೆದ ಅಮ್ಮ ಕೋಪಿಸಿಕೊಳ್ಳುವಂತಿತ್ತು. ನನಗೆ ನಿದ್ದೆ ಬಂದಿರಲಿಲ್ಲ. ನಾನು ಕದ್ದು ಕದ್ದು ಇದನ್ನು ನೋಡಬೇಕೆಂದು ಮತ್ತೆ ಮತ್ತೆ ಮನಸ್ಸಾಯಿತು.
ಅಮ್ಮ ‘ಬಿಡಿ ಮಗೂಗೆ ಎಚ್ಚರವಾಗಬಹುದು’ ಎಂದರು. ಅಪ್ಪ ಈಚೆ ಕತ್ತು ಹಾಕಿ ನೋಡಿದ. ನನಗೆ ನಿದ್ದೆ ಬಂದಂತಿತ್ತು.
‘ಇಲ್ಲ ಮಲಗಿದ್ದಾನೆ’ ಎಂದು ಅವಳನ್ನು ಸರಿಯಾಗಿ ಒತ್ತಿಕೊಂಡು ಅವಳ ರವಕೆಯನ್ನು ಎಳೆದ. ಅವಳ ಬತ್ತಲೆ ಎದೆಯಲ್ಲಿ ತನ್ನ ಮುಖ ಮುಚ್ಚಿ ಎರಡೂ ಕೈಗಳನ್ನು ಆಡಿಸಿದ. ಅವಳು…
‘ನೋಡಿ ಮಗುವಿಗೆ ಎಚ್ಚರವಾಗಬಹುದು. ಅವಸರ ಏಕೆ… ಚಿಮಣಿ ತೆಗೆಯುತ್ತೇನೆ ತಡೀರಿ…’ ಎಂದು ಕೈಚಾಚಿದಳು. ಅಪ್ಪ ‘ತಡಿ ಚಿಮಣಿ ಇರಲಿ. ಮಂದ ಬೆಳಕಿನಲ್ಲಿ ಮಜಾ ಆಗುತ್ತದೆ… ಇದನ್ನೆಲ್ಲ ನೋಡಲಿಕ್ಕಾಗುತ್ತದೆ’ ಎಂದು ಅವಳ ಕೈಯನ್ನು ಎಳೆದು ತನ್ನ ಸೊಂಟದ ಒಳಗೆ ಹಾಕಿ ತನ್ನ ಕೈಯಿಂದ ಅವಳನ್ನು ಪೂರ್ಣ ಬತ್ತಲೆ ಮಾಡಿದ್ದನ್ನು ತಾನೂ ಬತ್ತಲೆಯಾದದ್ದನ್ನು ಬಿಗಿಯಾಗಿ ಏದುವುದನ್ನು ನೋಡಿದ್ದು. ಬರುತ್ತಿದ್ದ ನಿದ್ರೆ ಎಲ್ಲೋ ಓಡಿ, ಮೈ ಬಿಸಿಗೊಂಡು ಆ ಚಳಿಯಲ್ಲಿಯೂ ಬೇವರಿದ್ದು ನನಗೆ ಈಗಲೂ ನೆನಪಿದೆ. ಅಂದು ಹುಟ್ಟಿದ ತಳಮಳ ಆಕರ್ಷಣೆಯಾಗಿ ಬೆಳೆದು ಕ್ರಮೇಣ ಎಳೆತಪ್ಪಿ ಕ್ಷುದ್ರವಾದ್ದು ಏಕೆಂದು ಹೇಳಲಿ? ಎಷ್ಟೋ ಸಾರಿ ಇದರಿಂದ ನನ್ನ ವಿದ್ಯಾಭ್ಯಾಸಕ್ಕೆ ತೊಂದರೆ ಉಂಟಾಗಿದ್ದು ನಾನು ಅಂತರ್ಮುಖಿಯಾಗಿ ನನ್ನ ಮಾನಸಿಕ ವಿಕಾಸ ಒಳಮುಖಿಯಾಗಿ ಬೆಳೆಯುತ್ತಿತ್ತೆಂದು ಇದು ನನ್ನ ಬುದ್ಧಿಯನ್ನು ಹೆಚ್ಚು ದುರ್ಬಲಗೊಳಿಸಿತೆಂದು ಈಗ ಅನಿಸುತ್ತದೆ. ಎಷ್ಟೋ ಸಾರಿ ನಾನು ನನ್ನಷ್ಟಕ್ಕೆ ಮೂಕನಾಗಿ ತಾಯಿ ತಂದೆಯರಿಂದ ಬೈಸಿ, ಹೊಡೆಸಿಕೊಂಡದ್ದು ಇದರಿಂದ ನಾನು ಬೆಳೆಯಲಾರೆನೆಂಬ ಬದುಕಲಾರೆನೆಂಬ ನಿರಾಶೆ ಭಯ ಹುಟ್ಟಿಕೊಂಡು ಮನಸ್ಸನ್ನು ಹಿಂಡುತ್ತಿದ್ದದ್ದು ಆ ಕಾರಣವಾಗಿ ಎಂದು ನಾನು ಯುವಕನಾಗಿ ಬೆಳೆಯುತ್ತಿದ್ದಾಗ ತಿಳಿಯತೊಡಗಿತ್ತು. ಸದಾ ತಾಯಿಯ ಮೈಗೆ ಅಂಟಿಕೊಂಡಿರಬೇಕೆಂಬ ಹಂಬಲ ತಂದೆಯ ಆಕ್ರಮಣ ಹೆಚ್ಚಾದಂತೆಲ್ಲ ಬೆಳೆಯುತ್ತಿದ್ದುದು ಯಾವ ರೋಗದ ಲಕ್ಷಣವೆಂದು ಈಗ ನನ್ನ ಮಗನ ವರ್ತನೆಯನ್ನು ಗಮನಿಸಿ ಉಂಟಾಗುತ್ತದೆ. ಅವನು ಐದಾರು ವರ್ಷದ ಹುಡುಗ ಮೊನ್ನೆಯೊಮ್ಮೆ ತಾಯಿಯ ಜೊತೆಯಲ್ಲಿ ನಾನು ಮಲಗಲೇ ಬಾರದೆಂದು ರಂಪ ಮಾಡಿ ನನ್ನಿಂದ ಪೆಟ್ಟು ತಿಂದಿದ್ದ. ಆನಂತರ ಅವರು ಸಂತೈಸಿದಾಗ…
‘ಇನ್ನು ನಮ್ಮ ಜೊತೆ ಅಪ್ಪ ಮಲಗಲೇ ಬಾರದು. ಅವನು ಬೇರೆ ಮಲಗಲಿ, ಹೊರಗೆ’
‘ಹಾಗೆ ಹೇಳಬಾರದು ಮಗು ‘ಅವರು ನಿನ್ನ ಅಪ್ಪ ಅಲ್ಲವಾ…’
‘ಮತ್ತೆ ನೀನು ಅವನ ಹತ್ತಿರವೇ ಯಾಕೆ ಮಲಗಬೇಕು…’
‘ನಾನು ಅವರ ಹೆಂಡತಿ, ಅವರನ್ನು ಮದುವೆಯಾಗಿದ್ದೇನೆ. ಅದೆಲ್ಲ ನಿನಗೀಗ ತಿಳಿಯದು.’
‘ಎಲ್ಲಾ ತಿಳಿಯುತ್ತದೆ. ನಾನು ನಿನ್ನನ್ನು ಪ್ರೀತಿಸುವದನ್ನು ಅವನು ಸಹಿಸುವುದಿಲ್ಲ.’
‘ಏ ಹುಡುಗಾ… ಇದನ್ನೆಲ್ಲಾ ನಿನಗೆ ಯಾರು ಕಲಿಸಿದರೋ, ಮದುವೆಯಾದ ಮೇಲೆ ನೋಡು, ನೀನೂ ನಿನ್ನ ಹೆಂಡತಿಯನ್ನೇ ಪ್ರೀತಿಸುತ್ತೀ…’
‘ಹಾಗಾದರೆ ನಾನೀಗಲೇ ಮದುವೆಯಾಗುತ್ತೇನೆ… ನಿನ್ನನ್ನು’
ಅವಳು ನಕ್ಕು- ‘ನನ್ನನ್ನೆ’.. ಎಂದದ್ದಕ್ಕೆ! ‘ಹೌದು, ನಿನ್ನನ್ನೆ. ಆ ಮೇಲೆ ಅಪ್ಪ ಹೇಗೆ ನಿನ್ನನ್ನು ಪ್ರೀತಿಸುತ್ತಾನೆ… ಹೇಗೆ ಅಪ್ಪಿಕೊಳ್ಳುತ್ತಾನೆ… ಹೇಗೆ ಒಟ್ಟಿಗೆ ಮಲಗುತ್ತಾನೆ ನೋಡುವಾ.. ನಾನು ಅವನನ್ನು ನಿನ್ನ ಹತ್ತಿರ ಬರಲೂ ಬಿಡಲಾರೆ. ಎಂದೆಲ್ಲ ಹೇಳಿದ್ದನ್ನು ಯೋಚಿಸಿದರೆ ಎಳೆ ಮನಸ್ಸು ಎಂಥೆಂಥ ಗೂಢ ಭಾವನೆಗಳ ಮೂಲ ಸ್ಥಾನವಾಗಿದೆ ಎಂದು ಆಶ್ಚರ್ಯವಾಗುವುದು. ತನ್ನ ತಾಯಿಯ ಕಡೆಗೆ ನನ್ನ ಮಗನ ಆಕರ್ಷಣೆ. ನನ್ನ ಬಗೆಗಿರುವ ಈರ್ಷೆ ಮತ್ತು ದುರ್ಲಕ್ಷ್ಯ ಸುಮಾರು ಅದೇ ಪ್ರಾಯದಲ್ಲಿ ನನಗೆ ನನ್ನ ತಾಯಿ ತಂದೆಯಲ್ಲಿ ಇದ್ದ ಪ್ರಕಾರದ್ದೆ ಅಲ್ಲವೇ?
ಆದರೆ ನನ್ನ ಮನಸ್ಸಿನಲ್ಲಿ ಮೂಡಿ ಸ್ಥಾಯಿಯಾಗಿ ಉಳಿದ, ತಂದೆ ತಾಯಿಯರ ಕುರಿತಾದ ದುರ್‍ಭಾವನೆ ನಮ್ಮ ಮಕ್ಕಳಲ್ಲಿಯೂ ನಮ್ಮ ಬಗ್ಗೆ ಬೆಳೆದು ಉಳಿಯಬಾರದಲ್ಲ! ತಂದೆಯನ್ನು ನಾನು ನನ್ನ ಸಮಕಕ್ಷಿ ಎಂದೇ ತಿಳಿದು ತಾಯಿಯ ಮೇಲಿನ ಮೋಹದಿಂದ ಬಹುಕಾಲದವರೆಗೆ ವೈರ ಸಾಧಿಸಿದ್ದೆ. ಅವನ ಒಲವು ವಾತ್ಸಲ್ಯದಲ್ಲಿಯೂ ಕುಂದನ್ನೂ, ಸ್ವಾರ್ಥವನ್ನೂ ಬಗೆಯುವ ಧಾರ್ಷ್ಟ್ಯ ನನ್ನಲ್ಲಿ ಬೆಳೆದುಕೊಂಡಿತ್ತು. ನನ್ನ ಅನುದಿನದ ಉಸಿರಾಟದಲ್ಲಿ ಆ ಕಾಳಜಿ ತಪ್ಪದೇ ಬಂದು ನನ್ನ ಭಾವ-ವಿಚಾರಗಳನ್ನು ಅಮುಕಿ ಹಿಡಿಯುತ್ತಿತ್ತು. ಇದು ಮಾತ್ರ ತಾತ್ಕಾಲಿಕವೂ. ಮನುಷ್ಯನ ಒಳಗೆ ನುಸುಳಿಕೊಂಡಿರುವ ಮಾನಸಿಕ ಕ್ರೌರ್‍ಯವೂ ಆಗಿದೆ ಎಂದು ತಿಳಿಯುವ ಪ್ರಾಯ ಬಂದಾಗ ನನ್ನಪ್ಪ ನನ್ನನ್ನು ಬಿಟ್ಟು ಹೋಗಿದ್ದ. ಈ ಆಘಾತ ತಾಯಿಯ ಎದೆಯಲ್ಲಿ ನನ್ನ ಬಗ್ಗೆ ಹೇಸಿಗೆ ತಿರಸ್ಕಾರಗಳನ್ನು ಹುಟ್ಟಿಸಿದ್ದರೂ ತಪ್ಪಲ್ಲ. ನಂತರ ಅವಳು ನನ್ನ ವಿಷಯದಲ್ಲಿ ತೋರಿಸುತ್ತಿದ್ದ ಅಸಡ್ಡೆ, ಅಸಹನೆ ನನ್ನನ್ನು ಏಕಾಂತಕ್ಕೆ ದಬ್ಬಿ ಒಂಟಿಯನ್ನಾಗಿ ಮಾಡಿತ್ತು. ಅವಳ ಮೋಹಕ, ಹೃದಯಕ್ಕೆ ತಂಪನ್ನೆರೆಯುವ ಸಾನಿಧ್ಯ ಕಡಿಮೆಯಾದಂತೆ ನನ್ನ ಮನಸ್ಸಿನ ರೋಷ, ಅಸಹನೆ ಹೆಚ್ಚಾಗಿ ಬೆಳೆಯುತ್ತಿದ್ದು, ಒಮ್ಮೆ ಕಣ್ಣಾರೆ ಕಂಡ ದೃಶ್ಯ, ಈಗ ಮತ್ತೆ ಕಣ್ಣೆದುರು ಬಂದು ಅರ್ಥವತ್ತಾಗಿ ಕುಣಿಯುತ್ತಿದ್ದು ಯಾವ ವಿವರಣೆಯನ್ನು ಅಂಗೀಕರಿಸಲು ಸಿದ್ದವಾಗದೆ ಅವಳನ್ನು ಶಾಶ್ವತವಾಗಿ ಆರೋಪಿಸುವಂತೆ ಮಾಡಿತ್ತು. ಈಗ ಒಂದು ಕ್ಷಣ ತಾಳಿ, ಇಲ್ಲಿ ನೀವು ಸಿಂಡರಿಸಬಹುದು. ನಿಮ್ಮ ಅನಿಸಿಕೆ ಸರಿಯಾಗಲು ಸಾಧ್ಯವಿದೆ. ನಾನು ಈವರೆಗೂ ಹೇಳಿದ ಅಥವಾ ಇನ್ನು ಹೇಳುವ ವಿಷಯದಲ್ಲಿ ನಿಮ್ಮ ಆಸಕ್ತಿಯನ್ನು ಕುತೂಹಲವನ್ನು ಕೆರಳಿಸುವ ಸಾಮಾನು ಇಲ್ಲದೇ ಹೋಗಬಹುದು. ನಿಮಗೆ ಮನೋರಂಜನೆ ಮಾಡುವ ಉದ್ದೇಶ ನನ್ನದು ಸುತರಾಂ ಅಲ್ಲ. ಒಳತೋಟಿಗಷ್ಟು ಕಸರತ್ತು ಮಾಡಲು ಅಲ್ಪ ಅವಕಾಶ ಹಾಗೂ ವಸ್ತುವನ್ನು ಕೊಡಬೇಕೆಂದೇ ನಾನು ಹೀಗೆ ಬರೆಯುತ್ತಿದ್ದೇನೆ. ನಿಮ್ಮ ಪ್ರತಿಕ್ರಿಯೆ ನನ್ನ ವಿಚಾರ ಅನುಭವಗಳ ಪ್ರತಿಕೂಲವಾಗಿದ್ದು ನಾನು ಕೈಗೊಂಡ ಈ ಕಾರ್ಯ ಅರ್ಥಹೀನವಾಗಲೂ ಸಾಧ್ಯವಿದೆ ಆದರೆ….
ಹೆತ್ತ ತಾಯಿಯೊಬ್ಬಳ ಸುಖ-ಸಂಪರ್ಕದಾಶೆಯಲಿ ವಿಕೃತಿಯಾಗಿರುತ್ತದೆ. ಸ್ವಲ್ಪ ಕಾಲ ತಂದೆಯನ್ನು ನನ್ನ ಪ್ರತಿರೋಧಿಯೆಂದು ತಿಳಿಯುತ್ತಿದ್ದ ಸಂದರ್ಭಗಳೆಲ್ಲ ಈಗ ನೆನಪಾಗಿ ನಗೆ ಬರುತ್ತದೆ. ಪಾಪ ಪ್ರಜ್ಞೆಯಿಂದ ಮನಸ್ಸು ಖಿನ್ನವಾಗುತ್ತದೆ. ಆದರೂ ಈ ಗತಿಯನ್ನು ಮನುಷ್ಯನ ಮಾಂಸಖಂಡಗಳ ರಕ್ತನಾಳಗಳಲ್ಲಿ ಪ್ರಕೃತಿ ನಿಗೂಢವಾಗಿ ಇರಿಸುವುದನ್ನು ನೋಡಿದರೆ ಆಶ್ಚರ್ಯವಾಗುತ್ತದೆ.
ನನ್ನ ತಾಯಿ ಈಗಲೂ ಇದ್ದಾಳೆ. ಜೊತೆಯಲ್ಲಿ. ನಾನು ಅವಳನ್ನು ಅಮ್ಮ ಎಂದು ಕರೆಯದೆ ಎಷ್ಟೋ ಕಾಲವಾಯಿತು. ನನ್ನ ಸ್ವಂತದ ಸಣ್ಣಪುಟ್ಟ ಕೆಲಸಗಳನ್ನು ಆಕೆ ಮಾಡುವ ಆತುರ ತೋರಿಸಿದರೂ ನನಗೆ ಮುಜಗರವಾಗುತ್ತದೆ. ನನ್ನ ಮಗ ಇಂದು ಮಾಡುವಂತೆಯೆ ಅಂದು ನಾನು ಅವಳ ಸೀರೆಯನ್ನೇ ಹೊದ್ದುಕೊಳ್ಳುವ ಅವಳಿಗೆ ಅಂಟಿ ಮಲಗುವ, ಅವಳ ಮೈಯ ಬಿಸಿಯಲ್ಲಿ ಹಿತವನ್ನು ಸುಖ ತೃಪ್ತಿಯನ್ನು ಪಡೆಯುವ, ಅವಳ ಎದೆಯ ಮೇಲೆ ಮುಖವಿಟ್ಟು ಮೈಮರೆಯಲು ಆತುರಪಟ್ಟಿದ್ದು ಇಂದು ಇಲ್ಲವಾಗಿದೆ. ನನ್ನ ಮಗನಾದರೂ ಮುಂದೆ ನನ್ನ ವೈರಿಯಾಗಿ, ತಾಯಿಯ ವೈರಿಯಾಗಿ, ಈರ್ಷೆಯ ಮರೆಯಲ್ಲಿ ಬೆಳೆಯಬಹುದೆಂಬ ಹೆದರಿಕೆ ಉಂಟಾಗಿದೆ.
ತಾಯಿಯ ಕುರಿತಾದ ನನ್ನ ವರ್ತನೆ, ಭಾವನೆ ತಪ್ಪಲ್ಲವೆಂದು ನಾನು ಹೇಳಲಾರೆ. ಅವಳ ಒಂದು ಮುಖ ನನ್ನ ಎಳೆಯ ಕಣ್ಮನದ ಎದುರು ಬಂದುದರಿಂದ ಹೀಗಾಗಿರಬಹುದು.
ನಾನೊಮ್ಮೆ ಮಳೆಯಲ್ಲಿ ತೊಯ್ದು ಶಾಲೆಯಿಂದ ಬೇಗ ಮನೆಗೆ ಬಂದಾಗ ಚಾವಡಿಯ ಜಗಲಿಯಲ್ಲಿ ತಾಯಿಯನ್ನು ಅಪ್ಪಿಕೊಂಡು ಕುಳಿತಿದ್ದ ಪುರುಷ ನನ್ನ ತಂದೆಯಾಗಿರಲಿಲ್ಲ. ನಾನು ಸಣ್ಣವನೆಂದು ಸಣ್ಣವನೆಂದು ನನ್ನನ್ನು ನೋಡಿಯೂ ವಿಕಾರಗೊಳ್ಳದ ಅವಳ ಮುಖ ನನ್ನ ಕಣ್ಣಿಗೆ ಈಗಲೂ ಬಂದು ತಟ್ಟುತ್ತದೆ. ನನ್ನಪ್ಪ ಈ ರೀತಿ ಮಾಡುವುದನ್ನು ಸಹಿಸದ ನನ್ನ ಮನಸ್ಸಿಗೆ ಅದು ತಟ್ಟಿರಬಹುದೆಂಬ ಕಲ್ಪನೆಯೂ ತಾಯಿಗೆ ಬರದೇ ಇದ್ದುದು ಈಗಲೂ ನನಗೆ ಬಗೆಹರಿಯದ ಒಗಟಾಗಿದೆ. ನಾನು ಅವಳಲ್ಲಿ ಇಟ್ಟುಕೊಂಡಿದ್ದ ಸಂಬಂಧ ಅವಳಿಗೆ ಅರ್ಥವಾಗಿರದೆ ಹೋಗಲು ಸಾಧ್ಯವಿದೆ. ಆದರೆ ನಾನದನ್ನು ಈಗಲೂ ಎಣಿಸಿ ಸಂಕಟ ಪಡುತ್ತೇನೆ. ತಾಯಿ ಮತ್ತು ನನ್ನ ನಡುವೆ ಬೆಳೆದು ನಿಂತ ಈ ವೈಷಮ್ಯ ಕೇವಲ ಆ ಒಂದು ಘಟನೆಯ ಪರಿಣಾಮ ಮಾತ್ರವಾಗಿರಲಾರದು. ನಾನು ಅವಳಲ್ಲಿ ತೋರಿಸುತ್ತಿದ್ದ ಭಾವಕ್ರಿಯೆಗೆ ಅಡ್ಡಿಯಾಗಿ ಬರುತ್ತಿದ್ದ ಎಲ್ಲದರ ಮೇಲೆ ಹುಟ್ಟಿದ ತಿರಸ್ಕಾರವೇ ಆದಾಗಿರಬಹುದು.
ಹೀಗಿರಲು ಮೊನ್ನೆ ಯಾವದೋ ಒಂದು ಪಾರ್ಟಿಗೆ ನಾವು ಹೊರಟಾಗ ನಮ್ಮ ಹುಡುಗ ಹಟ ಹಿಡಿದ. ‘ನೋಡು ಮಗೂ.. ಹಟ ಹಿಡಿಯಬಾರದು. ಸಿಟ್ಟು ಬಂದರೆ ಹೊಡೆಯುತ್ತೇನೆ’ ಎಂದು ಸ್ವಲ್ಪ ಸಿಟ್ಟಿನಿಂದ ಅವಳು ಹೇಳಿದಾಗ….
‘ನಾನೂ ಬರುತ್ತೇನೆ… ಇಲ್ಲವಾದರೆ ನೀನು ಹೋಗಬೇಡ. ಅಪ್ಪ ಒಬ್ಬನೇ ಹೋಗಲಿ. ಯಾವಾಗಲೂ ನೀವಿಬ್ಬರೇ ಯಾಕೆ ಹೋಗಬೇಕು’ ಎನ್ನುತ್ತ ಕಣ್ಣೀರು ಸುರಿಸಹತ್ತಿದ. ಅವನ ಮನಸ್ಸಿನಲ್ಲಿ ಏನಾಗುತ್ತಿತ್ತೊ, ಅಳು ಮುಖವನ್ನು ನೋಡಿದರೆ ಕರುಳು ಚುರುಕ ಎನ್ನುವಂತಿತ್ತು. ಅವಳು ಕನಿಕರಿಸಿ ಅವನನ್ನು ಎತ್ತಿಕೊಂಡು ಮುದ್ದಿಸಿ ‘ಸರಿ, ನೀನೂ ಬಾ…’ ಎಂದಳು. ನನಗಾಗ ಏನೂ ಹೊಳೆಯದೆ ಸಿಟ್ಟು ಬಂತು. ಇಂಥ ಅವಕಾಶಗಳಲ್ಲಿ ಇವನ ಉಪದ್ರ ಎಂದು ರೇಗಿತು. ಕೆನ್ನೆಗೆ ಒಂದೇಟು ಬಿಗಿದು ‘ಸುಮ್ಮನೆ ತಮ್ಮನ ಜೊತೆ ಆಡು. ಅಜ್ಜಿ ಇದ್ದಾರೆ. ಭಾಷೆ ಇಲ್ಲದವರಂತೆ ಮಾಡಬೇಡ ಮತ್ತೆ ಹೊಡೆಯುತ್ತೇನೆ’ ಎಂದು ಪುನಃ ಕೈಯೆತ್ತಿದೆ. ಅವನು ಹೆದರಿಕೊಂಡ. ಅಳು ಹೆಚ್ಚಿತು.
‘ಯಾಕೆ ಮಗುವನ್ನು ಸುಮ್ಮನೆ ಹೊಡೆಯುತ್ತೀರಿ. ನೀವೇ ಹೋಗಿ, ನಾನು ಬರುವುದಿಲ್ಲ’ ಎಂದು ಅವಳು ಹೇಳಿದಾಗ ನನಗೆ ನಿರಾಶೆಯಾಯಿತು. ಆ ಪಾರ್ಟಿಯ – ಮಜವೇ ಹಾರಿ ಹೋದಂತಾಗಿ ನಾನೂ ಟೈ ಬಿಚ್ಚಿದೆ. ಮಗನ ಮುಖ ನೋಡಿದೆ. ನಯವಾದ ಕೆನ್ನೆ ಕೆಂಪಾಗಿತ್ತು. ಮುಖದ ಅಳು ಯಾರಿಗಾದರೂ ಕನಿಕರವನ್ನು ಹುಟ್ಟಿಸುವಂತಿತ್ತು. ಅವಳ ಎದೆಯಲ್ಲಿ ಮುಖವಿಟ್ಟು ಒರಟ್ಟಾಗಿ ನನ್ನನ್ನು ನೋಡಿದ. ನನ್ನ ಸಿಟ್ಟು, ಮೇಲೆ ತಿರಸ್ಕಾರಗಳ ಎಳೆ ಆ ಮುಖದಲ್ಲಿ ನನಗೆ ಗೋಚರಿಸಿತು. ಟೇಬಲಿನಿಂದ ಒಂದು ಸಿಗರೇಟು ಹಚ್ಚಿ ನಿಲುಗನ್ನಡಿಯಲ್ಲಿ ನನ್ನ ಮುಖ ನೋಡಿದೆ. ನಾನು ಸಣ್ಣವನಿರುವಾಗ ಮಾಡಿದ್ದೇನು ಎಂಬ ಸವಾಲು ಧುತ್ತೆಂದು ಎದುರು ನಿಂತಿತ್ತು. ಅದು ಹೆಚ್ಚು ಹೆಚ್ಚು ಬೆಳೆದಂತೆ ಅದನ್ನು ನೋಡುವ ನನ್ನ ದೃಷ್ಟಿ ಕ್ಷೀಣಿಸಿತ್ತು. ಕ್ರಮೇಣ ಅದು ಹಾವಿನಂತೆ ಸುತ್ತಿಕೊಂಡು ಹೆಡೆಯೆತ್ತಿ ನಿಂತಂತೆನಿಸಿ ಮನಸ್ಸು ವಿಧ್ವಂಸಗೊಂಡಿತು.
ಮಗ ನನ್ನ ಬೆನ್ನಿಗೆ ಕೈ ಹಾಕಿದ. ಅವಳು ಅವನನ್ನು ಈಗಲೂ ಹಿಡಿದುಕೊಂಡಿದ್ದಳು.
‘ಅವನನ್ನು ಹೆಚ್ಚು ತಲೆಯಲ್ಲಿ ಇಟ್ಟುಕೊಳ್ಳಬೇಡ’ ಎನ್ನಬೇಕೆಂದು ತೆರೆದ ಬಾಯಿಗೆ ‘ನೀವೇ ಹೋಗಿ…’ ಎಂದು ಮಗ ಹೇಳಿ ತುಟಿ ಅರಳಿಸಿದ.
ಅಂದೇ ನಾವು ಮಗುವನ್ನು ಹಾಸ್ಟೇಲಿನ ಶಾಲೆಗೆ ಹಾಕುವ ನಿರ್‍ಧಾರ ಮಾಡಿದೆವು.
*****


















