Sanna Kathe

#ಸಣ್ಣ ಕಥೆ

ಮರಳ ಮೇಲೆ ಮೂಡದ ಹೆಜ್ಜೆ

0

ಮಳೆ ಸುರಿಯುತ್ತಿದೆ. ಮನೆಯಿಂದ ಹೊರಬೀಳುವುದು ಕಷ್ಟ ಎನ್ನುವಷ್ಟು ಮಳೆ. ನೆಲ ಮುಗಿಲುಗಳ ಸಲ್ಲಾಪ ನಿರಂತರ. ಭೂಮಿತಾಯಿ ಹಸಿರು ಸೆರಗು ಹೊದ್ದು ನಗುತ್ತಿರುವಾಗಲೇ ನೆನಪುಗಳು ಸುಗ್ಗಿ. ಮಳೆ ನೀರಿಗೆ ಸಮುದ್ರ ಸೇರುವ ಆತುರ. ಸುರಿವ ಮಳೆಯಲ್ಲೂ ರೇನ್ ಕೋಟ್ ತೊಟ್ಟು ಸಮುದ್ರದ ಆರ್ಭಟ ನೋಡಲು ಕಡಲದಂಡೆಗೆ ಬಂದಾಗಿತ್ತು. ಭೂಭಾಗವನ್ನು ಕ್ಶಣರ್ಧದಲ್ಲಿ ನುಂಗಿ ಹಾಕುವಂತೆ ಬೋರ್ಗರೆವ ಕಡಲ ಅಲೆ. […]

#ಸಣ್ಣ ಕಥೆ

ಸಾಸಿವೆಯಷ್ಟು ಸುಖಕ್ಕೆ…..

0

ಇಡೀ ಕೋಣೆ ಸಿಗರೇಟ್ ವಾಸನೆಯಿಂದ ತುಂಬಿತ್ತು. ಕೋಣೆಗಿದ್ದ ಒಂದೇ ಒಂದು ಕಿಟಿಕಿ ಸಹ ಮುಚ್ಚಿತ್ತು. ಫ಼್ಯಾನ್ ತಿರುಗುತ್ತಿತ್ತು. ಕೋಣೆ ಯಿಂದ ಹೊರಹೋಗಲಾದ ಹೊಗೆ, ಫ಼್ಯಾನ್ ಗಾಳಿ, ಬಿಯರ್ ಕುಡಿದ ದೇಹದಿಂದ ಹೊರಟ ಉಸಿರು ಸೇರಿ ಇಡೀ ಕೋಣೆ ಯಲ್ಲಿ ವಿಚಿತ್ರ ಕಮುಟು ವಾಸನೆ ಸೃಷ್ಟಿ ಯಾಗಿತ್ತು. ಟಿ.ವಿ.ಯಲ್ಲಿ ಯಾವುದೋ ಇಂಗ್ಲಿಷ್ ಸಿನಿಮಾ ಮೂಡಿ ಬರುತ್ತಿತ್ತು. ಸಿ.ಡಿ.ಪ್ಲೇಯರ್ […]

#ಸಣ್ಣ ಕಥೆ

ಕಡಲ ದಂಡೆಗೆ ಬಂದ ಬಯಲು

0

“ಬಯಲು ಬಯಲನೆ ಉಂಡು, ಬಯಲು ಬಯಲಾಗಿತ್ತು……” ಸಂಜೆ ಏಳಕ್ಕೆ ಬೀಚ್ ಹತ್ತಿರ ಬರುತ್ತೇನೆ….. ಕಾಯುತ್ತಿರು. ಯುದ್ಧನೌಕೆ ಮ್ಯೂಜಿಯಂ ಒಳಗಿಂದ ಪುಟಾಣಿ ರೈಲು ಹಳಿ ದಾಟಲು ಇರುವ ಕಾಲುದಾರಿಯ ಮೂಲಕ ಬೀಚ್ ತಲುಪುತ್ತೇನೆ. ಸಣ್ಣಗೆ ಮರ್ಕ್ಯೂರಿ ಬೆಳಕಿದೆ. ಹೆದರಿಕೆಯಿಲ್ಲ… ಆ ಕಡೆಯಿಂದ ಬಂದ ದೂರವಾಣಿಯಲ್ಲಿ ಆಕೆ ಆಗ್ರಹಪೊರ್ವಕವಾಗಿ ಹೇಳಿದಳು. ’ಆಯ್ತು’ ಎಂದು ಉತ್ತರಿಸಿ ಮೊಬೈಲ್ ಕಟ್ ಮಾಡಿದ […]

#ಸಣ್ಣ ಕಥೆ

ದಾಲೂರಪ್ಪ

0

ದಾಲೂರಪ್ಪ, ಇದು ಆತನ ಹೆಸರು. ಆದರೆ ಇದು ಆತನ ನಿಜ ಹೆಸರಲ್ಲ. ದಾಲೂ ಎಂಬ ಮಗ ಆತನಿಗಿದ್ದ. ಆತನ ಹೆಸರು ನನಗೆ ಇಂದಿಗೂ ಗೊತ್ತಿಲ್ಲ. ನಾನು ಸೇರಿದಂತೆ ನನ್ನ ಅಕ್ಕ, ತಮ್ಮ, ಅವ್ವೆ ಎಲ್ಲರೂ ಆತನನ್ನ ಕರೆಯುವುದು ದಾಲೂರಪ್ಪ ಎಂದು. ದಾಲೂನ ಅಪ್ಪ ’ದಾಲೂರಪ್ಪ’ ಎಂದು ನಾವು ಸರಳವಾಗಿ ಕರೆಯಲಾರಂಭಿಸಿದೆವು. ನಾನಾಗ ಏಳನೇ ತರಗತಿಯಲ್ಲಿದ್ದೆ. ಆಗ […]

#ಸಣ್ಣ ಕಥೆ

ಕೊರಗು

0

ಏ ಕೃಷ್ಣ ಭಿಕ್ಷೆ ಬೇಡ್ಬೇಡ್ವೋ….. ನನ್ನ ಮನೆತನದ ಮರ್ಯಾದೆ ಹರಾಜಿಗಿಡಬೇಡ….. ನಿನ್ಗೆ ಏನ್ ಬೇಕಂತಾದ್ರು ಹೇಳೋ …. ನಿನ್ನ ಕಾಲ್ಮುಗಿತೀನಿ…. ತುಂಡು ಬೀಡಿಗಾಗಿ, ಹನಿ ಸರಾಯಿಗಾಗಿ ಭಿಕ್ಷೆ ಬೇಡ್ಬೇಡ. ಮನೆಯಲ್ಲಿ ನಿನಗೇನ ಕಮ್ಮಿ ಆಗೈತಿ…. ಒಂದೇ ಸಮನೆ ಪುರುಷೋತ್ತಮ ರಾಯರು ಬಡಬಡಿಸುತ್ತಿದ್ದರು. ಪುರುಷೋತ್ತಮ ರಾಯರಿಗೆ ಕೃಷ್ಣ ಮೊದಲ ಮಗ. ತಮ್ಮ ಕಣ್ಮುಂದೆ ಮಗ ಹುಚ್ಚನಾದುದನ್ನು ಕಂಡು […]

#ಸಣ್ಣ ಕಥೆ

ಬೀರನ ಕನಸುಗಳ ಸುತ್ತ……

0

ಇಡೀ ಊರು ಮಳೆ ನೀರಿನಲ್ಲಿ ಅದ್ದಿ ತೆಗೆದಂತಿತ್ತು. ಕಳೆದ ಮೂರು ದಿನಗಳಿಂದ ಸುರಿಯುತ್ತಿದ್ದ ಮಳೆಯಿಂದ ಮನೆಯ ಗೂಡುಗಳಲ್ಲಿ ಅವಿತಿದ್ದ ಜನ ಹಕ್ಕಿ ಮರಿಗಳಂತೆ ಕುತ್ತಿಗೆ ಯನ್ನು ಬಾಗಿಲಿಂದ ಚಾಚಿ ಮಳೆಯ ಆರ್ಭಟವನ್ನು ನೋಡುತ್ತಿದ್ದರು. ಬರ ಎಂಬ ಶಬ್ದವನ್ನೇ ಕಳೆದ ಮೂರು ದಿನಗಳಿಂದ ಭೋರ್ಗರೆಯುತ್ತಿದ್ದ ಬಾನು ಅಳಿಸಿ ಹಾಕಿತ್ತು. ಕಳೆದ ಎರಡು ತಿಂಗಳಿಂದ ಮಡುಗಟ್ಟಿದ್ದ ಮೋಡ…. ಸಿಡಿಲಿ, […]

#ಸಣ್ಣ ಕಥೆ

ಇರುವುದೆಲ್ಲವ ಬಿಟ್ಟು

0

ಕುಮಾರನಿಗೆ ಪಕ್ಕದ ಮನೆಯ ರೆಡಿಯೋದಲ್ಲಿ ಬಸಪ್ಪ ಮಾದರ ಧ್ವನಿ ಕೇಳಿ ಎಚ್ಚರವಾಯ್ತು. ದೇಹಲಿ ಕೇಂದ್ರದಿಂದ ವಾರ್ತೆಗಳು ಬರುತ್ತಿದ್ದವು. ಹಾಸಿಗೆಯಿಂದ ಎದ್ದವನೆ ಕದ ತೆಗೆದ. ಬೆಳಗಿನ ಸೊಗಸು ಕೊರೆವ ಚಳಿಯಲ್ಲೂ ಹಿತ ಎನಿಸಿತು. ಅಪಘಾನಿಸ್ತಾನದಲ್ಲಿ ನಡೆದ ಯುದ್ಧದ ಸಮಾಚಾರ ನೋಡುವ ಕಾತುರದಿಂದ ಕಣ್ಣುಜ್ಜಿ ಕೊಳ್ಳುತ್ತಾ ಗೇಟ್ ನತ್ತ ನಡೆದ. ಮನೆಯ ಓನರ್ ಸಾಕಿದ ನಾಯಿ ಸ್ನೂಪಿ ಬಾಲ […]

#ಸಣ್ಣ ಕಥೆ

ಕರಾಚಿ ಕಾರಣೋರು

0

ಮಳೆಗಾಲ ಆರಂಭವಾಯಿತೆಂದರೆ ಕುಂಞಿಕಣ್ಣ ಕುರುಪ್ಪನ ಏಣೆಲು ಗದ್ದೆಗೆ ನೇಜಿ ಕೆಲಸಕ್ಕೆ ಹೋಗಲು ಕಪಿಲಳ್ಳಿಯ ಹೆಂಗಸರು, ಗಂಡಸರು ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ವರ್ಷವಿಡೀ ವಿಪ್ರರ ಮತ್ತು ವಿಪ್ರಾತಿವಿಪ್ರರ ಆಡಿಕೆ ತೋಟಗಳಲ್ಲಿ ನುಸಿ, ಉಮಿಲಿ, ಕುರ್ಡ ಕಚ್ಚಿಸಿಕೊಂಡು ಪುಳಿಚ್ಚಾರಿನಲ್ಲೇ ಸಂಭ್ರಮಿಸಬೇಕಾಗಿದ್ದವರಿಗೆ ಕೆಸರು ನೀರಲ್ಲಿ ಉಳುತ್ತಾ, ನೇಜಿ ತೆಗೆದು ನೆಡುತ್ತಾ, ಓ ಬೇಲೆ, ರಾವು ಕೊರಂಗು, ದೂಜಿ ಕೆಮ್ಮಯಿರಾ ಹಾಡುತ್ತಾ, ಚೊರಲ್ಲಿ […]

#ಸಣ್ಣ ಕಥೆ

ನಂಟಿನ ಕೊನೆಯ ಬಲ್ಲವರಾರು?

0

ಕುಳಿತವನು ಅಲುಗದಂತೆ ತದೇಕ ಚಿತ್ತದಿಂದ ಕಡಲನ್ನು ನೋಡುತ್ತಿದ್ದ. ಹಾಗೇ ಕುಳಿತು ಅರ್ಧಗಂಟೆ ಕಳೆದಿತ್ತು. ಮೊಲದ ಬಾರಿಗೆ ಕಡಲ ಕಂಡವನ ಚಿತ್ತ ಕಲಕುವುದೇಕೆಂದು ಕುಳಿತಲ್ಲೇ ಅವನನ್ನು ಬಿಟ್ಟು ತಿರುಗಾಡಿ ಬಂದೆ. ಸೂರ್ಯ ಮರೆಯಾಗುತ್ತಿದ್ದ. ಕ್ಷಣಕ್ಷಣವೂ ಮುಗಿಲು ಅದ್ಭುತ ಬಣ್ಣಗಳನ್ನು ಪಡೆದುಕೊಳ್ಳುತ್ತಿತ್ತು. ಮೋಹಕ ಸಂಜೆ ಅದಾಗಿತ್ತು. ಹಕ್ಕಿಗಳು ಮುಗಿಲಕಡೆಯಿಂದ ಗೂಡಿಗೆ ಮರಳುತ್ತಿದ್ದವು. ಬಂಗಾರದ ಕೊಡದ ಆಕಾರ ತಾಳಿದ ಸೂರ್ಯ […]

#ಸಣ್ಣ ಕಥೆ

ಕೂನನ ಮಗಳು ಕೆಂಚಿಯೂ….

0

ಬೊಮ್ಮನಹಳ್ಳಿ ಸಂತೆಯಿಂದ ದಲ್ಲಾಳಿಗೆ ಸಂಚಾಗಾರ ಎಂದು ನೂರು ರೂಪಾಯಿ ಸೇರಿ ಒಂದು ಸಾವಿರದ ಒಂದುನೂರು ಕೊಟ್ಟು ತಂದ ’ಚೆನ್ನಿ’ಕರುಹಾಕಿ ಮೂರು ತಿಂಗಳಲ್ಲಿ ಕೊಟ್ಟಿಗೆಯೊಳಗೆ ಕಾಲು ಜಾರಿ ಬಿದ್ದದ್ದೆ ನೆಪವಾಗಿ ಸತ್ತದ್ದು ದ್ಯಾಮಣ್ಣನಿಗೆ ಹೃದಯಾಘಾತವಾದಂತಾಗಿತ್ತು. ಮುಂಜಾನೆ ಆಗತಾನೆ ಕತ್ತಲನ್ನು ಹಿಂದೆ ಸರಿಸಿತ್ತು. ಕಟ್ಟೆಮ್ಯಾಲೆ ದ್ಯಾಮಣ್ಣ ಬದುಕೇ ನಿಂತುಹೊದಂತೆ ತಲಿಮ್ಯಾಗ ಕೈಹೊತ್ತು ಕುಳಿತದ್ದನ್ನು ಕಂಡ ಭರಮಪ್ಪ ’ಏ ದ್ಯಾಮಣ್ನ […]