ಹರಪನಹಳ್ಳಿ ನಾಗರಾಜ್

#ಕವಿತೆ

ಭೂಮಿಗೆ ಆಕಳಿಕೆ ಸಮಯ

0

ಸೀರೆ ಸೆರಗ ತಾಗಿದ ಗಾಳಿ ಪ್ರೇಮದ ನವಿರು ಹೊತ್ತುತಂತು ಆಡಿದ ಆಡದೇ ಉಳಿದ ಮಾತು ಮೌನಗಳ ಸಂಕಲನ ಮೋಡಗಳಲ್ಲಿ ಚಿತ್ರ ಬಿಡಿಸಿತು ನೀನಿಡುವ ಪ್ರತಿ ಹೆಜ್ಜೆಯಲಿ ಕನಸು ಇಣುಕುತ್ತಿದೆ ಗೆಳತಿ ಮನಸುಗಳ ಅಗಣಿತ ತರಂಗಗಳು ಎದೆತಾಕುತ್ತಲೇ ಇರುವ ಸೋಜಿಗಕ್ಕೆ ಏನೆನ್ನಲಿ ? *** ನಿನ್ನ ದನಿ ಕೇಳದ ಭೂಮಿಗೆ ಆಕಳಿಕೆ ಸಮಯ ಅದಕ್ಕೆ ಮಗ್ಗಲು ಬದಲಿಸುತ್ತಿದೆ […]

#ಕವಿತೆ

ಪಾರಿವಾಳಗಳು ಹಾರಿಹೋದವು

0

ನನ್ನ ದೇಶದ ಗಾಳಿ ಪಕ್ಕದ ದೇಶಕ್ಕೂ ಬೀಸಿತು ಬೀಸುವಾಗ ಇಲ್ಲಿನ ತಣ್ಣನೆಯ ಪ್ರೇಮದ ಬಿಸಿಯುಸಿರನ್ನು ಹೊತ್ತೊಯಿತು ನನ್ನ ದೇಶದ ಬೆಳಕು ಪಕ್ಕದ ದೇಶಕ್ಕೂ ಪಯಣ ಬೆಳೆಸಿತು ಹೋಗುವಾಗ ಒಂದಿಷ್ಟು ಅರಿವು ನೋವುಗಳನ್ನು ಹೊತ್ತೊಯಿತು ಗಾಳಿ ಬೆಳಕುಂಡ ಜನ ಅಲ್ಲಿ ಇಲ್ಲಿಯ ಸುದ್ದಿ ಮಾತಾಡಿದರು ಆದರೆ ಎರಡು ಕಡೆ ಸೇನೆಯಲ್ಲಿನ ದಂಡನಾಯಕರು ಕಿಡಿಕಿಡಿಯಾದರು ಗಾಳಿ ಬೆಳಕುಗಳು ತಂದ […]

#ಸಣ್ಣ ಕಥೆ

ಕಾರಣ ಗೊತ್ತಿಲ್ಲ……..

0

ಆ ರಸ್ತೆಯ ಕೊನೆಯಲ್ಲಿರುವ ಮರ. ಏನಿಲ್ಲಾ ಅಂದ್ರೂ ಒಂದು ತಲೆಮಾರು ದಾಟಿರಬಹುದು. ಅದರ ಕೆಳಗೆ ನಿಂತರೆ ಆಕಾಶ ಕಾಣುತ್ತಿರಲಿಲ್ಲ. ತನ್ನನ್ನು ತಾನೆ ಸಿಂಗರಿಸಿಕೊಂಡಂತಿರುವ ಮರದ ಟೊಂಗೆಗಳಿಗೆ ಆವರಿಸಿರುವ ಎಲೆಗಳು ತನ್ನನ್ನು ಮೀರಿ ಮೇಲಿರುವುದು ಕಾಣದಷ್ಟು ದಟ್ಟವಾಗಿದ್ದವು. ಆ ಮರದ ಕೆಳಗೆ ಅವನು ಕಳೆದ ಹತ್ತೊಂಬೊತ್ತು ವರ್ಷಗಳಿಂದ ಬೈಕ್ ನಿಲ್ಲಿಸಿ, ಕೆಲ ನಿಮಿಷ ನಿಂತು ಏನನ್ನೋ ಧ್ಯಾನಿಸಿ, […]

#ಹನಿಗವನ

ಹನಿಗಳು

0

ಹಗಲು ರಾತ್ರಿಯನ್ನದೇ ಮಳೆ ಸುರಿಯಿತು ನಾನು ನೀನು ಮಾತಾಡಿಕೊಂಡಾಂತೆ ಅತ್ಯಂತ ಉಲ್ಲಾಸಿತಳಾಗಿ ನಕ್ಕಿದ್ದು ಭೂಮಿ ಮಾತಾಡುತ್ತಲೇ ನಾವು ನಕ್ಕು ಅತ್ತಂತೆ ನಡುನಡುವೆ ಮತ್ತೆ ನಕ್ಕು ಉಲ್ಲಾಸಿತ ಗೊಂಡಂತೆ ಮಡಿಲಲ್ಲಿ ನೂರು ನೋವು ತುಂಬಿಕೊಂಡು ನಗುವ ಆಕೆ ನೂರು ಸಂಕಟ ನುಂಗಿಯೂ ನಕ್ಕಂತೆ ನಾವು ***** ಮಳೆ ಸುರಿದಾಯ್ತು ಹನಿಯುಂಡ ಭೂಮಿ ನಿದ್ದೆ ಹೋಗಿದೆ ಮೈಮುರಿಯುತ್ತಿದೆ ನೆಲ […]

#ಸಣ್ಣ ಕಥೆ

ಜಾಲ

0

ಮನದೊಳಗಣ ಭಾವನೆಗಳನ್ನು, ಕತ್ತಲನ್ನು, ಬೆಳಕನ್ನು ಬಗೆಬಗೆದು ಮತ್ತೊಬ್ಬರ ಎದುರು ಬೆತ್ತಲಾಗುವುದು ಸಾಮಾನ್ಯವೇ? ಅಂಥ ವ್ಯಕ್ತಿ ಯೊಬ್ಬ ಸಿಕ್ಕಾಗ ಎದೆಯೊಳಗೆ ಅಡಗಿದ ಜಗತ್ತನ್ನು ಬಿಚ್ಚಿಡಬೇಕು ಎಂದೆನಿಸಿತು ಆಕೆಗೆ. ಕತ್ತಲ ಎದೆಗೆ ಒದ್ದಂತೆ ಹಗಲು ಆಗತಾನೆ ಗೆಲುವಿನ ನಗೆ ಬೀರಿತ್ತು. ಮುಂಗಾರಿನ ಮೋಡಗಳನ್ನು ಸರಿಸಿ ಸೂರ್ಯ ಇಣುಕಿದ್ದ. ಆಕಾರ ಭೂಮಿ ಉಲ್ಲಾಸದಿಂದ ಸಂಭ್ರಮಿಸುತ್ತಿದ್ದ ಸಮಯ. ಭೂಮಿ ಮಗ್ಗಲು ಬದಲಾಯಿಸಿದಂತೆ […]

#ಕವಿತೆ

ಮುಗಿಯಲಾರದ ದುಃಖಕೆ

0

ಕಣ್ಣ ಬೆಳಕೇ ಒಲವಿನ ಉಸಿರೇ ಜೀವದ ಜೀವವೇ ನಿನಗಾಗಿ ಬರೆಯುವೆ ಎಂದೆಂದೂ ಮುಗಿಯದ ಪ್ರೇಮ ಪತ್ರವ ಉಸಿರಿಗೆ ಉಸಿರಾದವಳೇ ಬೆಳಕಿಗೆ ಬೆಳಕಾದವಳೇ ಕಣ್ಣ ಮುಂದಿನ ಬೆಳಕೆ ದಾರಿ ಮುಂದಿನ ಕನಸೇ ನಿನಗಾಗಿ ಬರೆಯುವೆ ಎಂದೆಂದೂ ಮುಗಿಯದ ಕತೆಯ ಅಂಗೈ ಬೊಗಸೆಯಲ್ಲಿ ಮುಖವಿಟ್ಟು ಮಳೆ ಸುರಿಸಿದವಳೆ ಅಂಗೈಯ ಅಳಿಸದ ರೇಖೆಗಳಲ್ಲಿ ನದಿಯಾದವಳೇ ನಿನಗಾಗಿ ಬರೆಯುವೆ ಎಂದೆಂದೂ ಮುಗಿಯದ […]

#ಸಣ್ಣ ಕಥೆ

ಮರಳ ಮೇಲೆ ಮೂಡದ ಹೆಜ್ಜೆ

0

ಮಳೆ ಸುರಿಯುತ್ತಿದೆ. ಮನೆಯಿಂದ ಹೊರಬೀಳುವುದು ಕಷ್ಟ ಎನ್ನುವಷ್ಟು ಮಳೆ. ನೆಲ ಮುಗಿಲುಗಳ ಸಲ್ಲಾಪ ನಿರಂತರ. ಭೂಮಿತಾಯಿ ಹಸಿರು ಸೆರಗು ಹೊದ್ದು ನಗುತ್ತಿರುವಾಗಲೇ ನೆನಪುಗಳು ಸುಗ್ಗಿ. ಮಳೆ ನೀರಿಗೆ ಸಮುದ್ರ ಸೇರುವ ಆತುರ. ಸುರಿವ ಮಳೆಯಲ್ಲೂ ರೇನ್ ಕೋಟ್ ತೊಟ್ಟು ಸಮುದ್ರದ ಆರ್ಭಟ ನೋಡಲು ಕಡಲದಂಡೆಗೆ ಬಂದಾಗಿತ್ತು. ಭೂಭಾಗವನ್ನು ಕ್ಶಣರ್ಧದಲ್ಲಿ ನುಂಗಿ ಹಾಕುವಂತೆ ಬೋರ್ಗರೆವ ಕಡಲ ಅಲೆ. […]

#ಸಣ್ಣ ಕಥೆ

ಸಾಸಿವೆಯಷ್ಟು ಸುಖಕ್ಕೆ…..

0

ಇಡೀ ಕೋಣೆ ಸಿಗರೇಟ್ ವಾಸನೆಯಿಂದ ತುಂಬಿತ್ತು. ಕೋಣೆಗಿದ್ದ ಒಂದೇ ಒಂದು ಕಿಟಿಕಿ ಸಹ ಮುಚ್ಚಿತ್ತು. ಫ಼್ಯಾನ್ ತಿರುಗುತ್ತಿತ್ತು. ಕೋಣೆ ಯಿಂದ ಹೊರಹೋಗಲಾದ ಹೊಗೆ, ಫ಼್ಯಾನ್ ಗಾಳಿ, ಬಿಯರ್ ಕುಡಿದ ದೇಹದಿಂದ ಹೊರಟ ಉಸಿರು ಸೇರಿ ಇಡೀ ಕೋಣೆ ಯಲ್ಲಿ ವಿಚಿತ್ರ ಕಮುಟು ವಾಸನೆ ಸೃಷ್ಟಿ ಯಾಗಿತ್ತು. ಟಿ.ವಿ.ಯಲ್ಲಿ ಯಾವುದೋ ಇಂಗ್ಲಿಷ್ ಸಿನಿಮಾ ಮೂಡಿ ಬರುತ್ತಿತ್ತು. ಸಿ.ಡಿ.ಪ್ಲೇಯರ್ […]

#ಸಣ್ಣ ಕಥೆ

ಕಡಲ ದಂಡೆಗೆ ಬಂದ ಬಯಲು

0

“ಬಯಲು ಬಯಲನೆ ಉಂಡು, ಬಯಲು ಬಯಲಾಗಿತ್ತು……” ಸಂಜೆ ಏಳಕ್ಕೆ ಬೀಚ್ ಹತ್ತಿರ ಬರುತ್ತೇನೆ….. ಕಾಯುತ್ತಿರು. ಯುದ್ಧನೌಕೆ ಮ್ಯೂಜಿಯಂ ಒಳಗಿಂದ ಪುಟಾಣಿ ರೈಲು ಹಳಿ ದಾಟಲು ಇರುವ ಕಾಲುದಾರಿಯ ಮೂಲಕ ಬೀಚ್ ತಲುಪುತ್ತೇನೆ. ಸಣ್ಣಗೆ ಮರ್ಕ್ಯೂರಿ ಬೆಳಕಿದೆ. ಹೆದರಿಕೆಯಿಲ್ಲ… ಆ ಕಡೆಯಿಂದ ಬಂದ ದೂರವಾಣಿಯಲ್ಲಿ ಆಕೆ ಆಗ್ರಹಪೊರ್ವಕವಾಗಿ ಹೇಳಿದಳು. ’ಆಯ್ತು’ ಎಂದು ಉತ್ತರಿಸಿ ಮೊಬೈಲ್ ಕಟ್ ಮಾಡಿದ […]

#ಕವಿತೆ

ಹಿತ್ತಲು ಕಲಿಸಿದ ಪಾಠ

0

ಹಿತ್ತಲು ನನ್ನದು ಯಾಕೆಂದರೆ ಅಲ್ಲಿಯೇ ನನ್ನ ಕನಸುಗಳು ಚಿಗುರಿದ್ದು ಪಿಸುಮಾತು ಆಡಿದ್ದು ನಲ್ಲನ ಜೊತೆ ಕಾಮನಬಿಲ್ಲ ಏರಿದ್ದು ಗೆಳತಿಗೆ ಎಲ್ಲಾ ಉಸುರಿದ್ದು ಕಣ್ಣೀರು ಹಾಕಿದ್ದು ಮತ್ತೆ ಮತ್ತೆ ಕಣ್ಣೋರಿಸಿಕೊಂಡು ಆತನ ಮಾತು ಕೇಳಿ ಸಮಾಧಾನಿಸಿಕೊಂಡಿದ್ದು ಮುಳುಗಿಯೇ ಹೋಗಿದ್ದ ಬದುಕಿಗೆ ಮತ್ತೆ ಬಣ್ಣ ತುಂಬಿದ್ದು ಇದೇ ಹಿತ್ತಲಲ್ಲಿ ಅದೇ ಬಸಲೇ ಬಳ್ಳಿ ಚಪ್ಪರದ  ನೆರಳಲ್ಲಿ ನಡು ಮನೆಯ […]