ಮುಗಿಯಲಾರದ ದುಃಖಕೆ

ಕಣ್ಣ ಬೆಳಕೇ
ಒಲವಿನ ಉಸಿರೇ
ಜೀವದ ಜೀವವೇ
ನಿನಗಾಗಿ ಬರೆಯುವೆ ಎಂದೆಂದೂ ಮುಗಿಯದ ಪ್ರೇಮ ಪತ್ರವ

ಉಸಿರಿಗೆ ಉಸಿರಾದವಳೇ
ಬೆಳಕಿಗೆ ಬೆಳಕಾದವಳೇ
ಕಣ್ಣ ಮುಂದಿನ ಬೆಳಕೆ
ದಾರಿ ಮುಂದಿನ ಕನಸೇ
ನಿನಗಾಗಿ ಬರೆಯುವೆ
ಎಂದೆಂದೂ ಮುಗಿಯದ ಕತೆಯ

ಅಂಗೈ ಬೊಗಸೆಯಲ್ಲಿ ಮುಖವಿಟ್ಟು ಮಳೆ ಸುರಿಸಿದವಳೆ
ಅಂಗೈಯ ಅಳಿಸದ ರೇಖೆಗಳಲ್ಲಿ ನದಿಯಾದವಳೇ
ನಿನಗಾಗಿ ಬರೆಯುವೆ ಎಂದೆಂದೂ ಮುಗಿಯದ ಪ್ರೇಮ ಕಾವ್ಯವ

ಕಣ್ಣಲ್ಲಿ ಕಣ್ಣಿಟ್ಟು ಬದುಕ ಹೊಸೆದವಳೇ
ಬಂಧವಿರದ ಬಂಧಕೆ ಧ್ವನಿಯಾದವಳೇ
ಮುಗಿಯಲಾರದ ದುಃಖಕೆ
ಸಾಂತ್ವಾನ ಹೇಳಿದವಳೆ

ಕಣ್ಣೀರ ಕತೆಗೆ ಕಣ್ಣೀರ ಬೆಸೆದು
ಜೀವ ಜೀವಕೆ ಉದ್ದೀಪನವಾದವಳೇ
ಒಲವ ಬದುಕ ಪಯಣದಲ್ಲಿ
ಜೊತೆಯಾಗಿ ನಿಂತವಳೇ

ಅವಮಾನಗಳ ಹಾಸಿಹೊದ್ದ
ಬದುಕಲಿ, ಪ್ರೀತಿಯ ಹಠವ ಜೀವಧಾತುವಾಗಿ ಬೆಸೆದವಳೇ
ನಿನಗಾಗಿ ಬರೆಯುವೆ
ಮನುಜ ಬದುಕಿನ ಸೆಣಸಾಟದ ಪತ್ರವ

ಮುಗಿಯದ ಅಳಿಯದ ಬದುಕ
ಅರ್ಥಕೆ ವ್ಯಾಖ್ಯಾನವಾದವಳೇ
ನಿನಗಾಗಿ ಬದುಕಿ ಬರೆಯುವೆ
ಎಂದೆಂದೂ ಅಂತ್ಯವಿಲ್ಲದ
ಒಲವಿನೋಲೆ ಬರೆಯುವೆ

ಭೂಮಿಯ ಎದೆಯೊಳಗಿನೊಲವ ಬಿತ್ತಿ
ಒಲವು ಒಲವ ಸಂತೈಸಿದಂತೆ
ಆಕಾಶದಲ್ಲಿ ಹೂ ಅರಳಿದ ಬಗ್ಗೆ
ಪತ್ರವೊಂದ ಬರೆವೆ ನಿನಗಾಗಿ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕವಿಯುತಿದೆ ಮೋಡ
Next post ಕದನ ವಿರಾಮದ ಮಾತು

ಸಣ್ಣ ಕತೆ

  • ದುರಾಶಾ ದುರ್ವಿಪಾಕ

    "ಒಳ್ಳೇದು, ಅವನನ್ನು ಒಳಗೆ ಬರಹೇಳು" ಎಂದು ಪ್ರೇಮಚಂದನು- ಘನವಾದ ವ್ಯಾಪಾರಸ್ಥನು- ಆಢ್ಯತೆಯಿಂದ, ತಾನು ಆಡುವ ಒಂದೊಂದು ಶಬ್ದವನ್ನು ತೂಕಮಾಡಿ ಚಲ್ಲುವಂತೆ ಸಾವಕಾಶವಾಗಿ ನುಡಿದನು. ಬಾಗಿಲಲ್ಲಿ ನಿಂತಿದ್ದ ವೃದ್ಧ… Read more…

  • ಕೆಂಪು ಲುಂಗಿ

    ಬೇಸಿಗೆಯ ರಜೆ ಬಂತೆಂದರೆ ಅಮ್ಮಂದಿರ ಗೋಳು ಬೇಡ; ಮಕ್ಕಳೆಲ್ಲಾ ಮನೆಯಲ್ಲೇ... ಟೀವಿಯ ಎದುರಿಗೆ ಇಲ್ಲವಾದರೆ ಅಂಗಳದ ಸೀಬೆಮರ ಮತ್ತು ಎತ್ತರವಾದ ಕಾಂಪೌಂಡಿನ ಗೋಡೆಗಳ ಮೇಲೆ.... ಯಾರಾದರೂ ಬಿದ್ದರೆ,… Read more…

  • ಮೇಷ್ಟ್ರು ರಂಗಪ್ಪ

    ಪ್ರಕರಣ ೫ ರಂಗಣ್ಣ ರೇಂಜಿನಲ್ಲಿ ಅಧಿಕಾರ ವಹಿಸಿ ನಾಲ್ಕು ತಿಂಗಳಾದುವು. ಸುಮಾರು ನಲವತ್ತು ಐವತ್ತು ಪಾಠಶಾಲೆಗಳ ತನಿಖೆ ಮತ್ತು ಭೇಟಿಗಳಿಂದ ಪ್ರಾಥಮಿಕ ವಿದ್ಯಾಭ್ಯಾಸದ ಸ್ಥಿತಿ ತಕ್ಕ ಮಟ್ಟಿಗೆ… Read more…

  • ಶಾಕಿಂಗ್ ಪ್ರೇಮ ಪ್ರಕರಣ

    ಅವನು ಅವಳನ್ನು ದಿನವೂ ತಪ್ಪದೇ ನೋಡುತ್ತಿದ್ದ. ಅವಳು ಕಾಲೇಜಿಗೆ ಹೋಗುವ ಹೊತ್ತಿಗೆ ಅವಳನ್ನು ಹಿಂಬಾಲಿಸುತ್ತಿದ್ದ. ಕಾಲೇಜು ಬಿಡುವ ಹೊತ್ತಿಗೆ ಗೇಟಿನ ಎದುರು ಕಾದು ನಿಂತು ಮತ್ತೆ ಹಿಂಬಾಲಿಸುತ್ತಿದ್ದ.… Read more…

  • ಕನಸುಗಳಿಗೆ ದಡಗಳಿರುದಿಲ್ಲ

    ಬೆಳಗ್ಗಿನ ಸ್ನಾನ ಮುಗಿಸಿದ ವೃಂದಾ ತನ್ನ ರೂಮಿಗೆ ಬಂದು ಬಾಗಿಲುಹಾಕಿಕೊಂಡು ಕನ್ನಡಿಯಲ್ಲಿ ತನ್ನ ದೇಹ ಸಿರಿಯನ್ನೊಮ್ಮೆ ನೋಡಿಕೊಂಡಳು. ಯಾಕೋ ಅವಳ ಮೈ - ಮನ ಒಮ್ಮೆ ಪುಲಕಿತವಾಯಿತು.… Read more…