ಕವಿಯುತಿದೆ ಮೋಡ
ಸುಳಿಗಾಳಿ ಕಂಪ ಹೀರಿ
ನನ್ನೆದೆಯ ಭಾವ ತುಂಬಿ
ಚದುರಿದೆ ಮೋಡ ಬಾನಲಿ ||

ಕರಗುತಿದೆ ಮೋಡ
ಸುಳಿಗಾಳಿ ತಂಪಲೆರೆದು
ನನ್ನದೆಯ ಕಾಮನೆ
ಹೊರಹೊಮ್ಮಿ ಚಿಮ್ಮಿ ||

ಹಸಿರಾಗುತಿದೆ ನೆಲವು
ಬಣ್ಣಗಳ ತುಂಬಿ ಚೆಲ್ಲಿ
ಭಾವ ಸಂಗಮದಿ
ನಿಶೆಯಿಂದ ಹಸಿರು ಉಸಿರಾಗಿ ||
*****