ಉಘೇ ಉಘೇ ಉಘೇ
ಹಿಂದು ದೇಶ ಹಿಂದು ಹೃದಯ
ಸಿಂಧು ಗೋದೆ ಗಂಗೆಯು
ಅಂದಿಗಿಂದಿಗೆಲ್ಲ ಒಂದೆ
ಹಿಂದು ಜನ ಸ್ವತಂತ್ರರು
ಉಘೇ ಉಘೇ ಉಘೇ

ಮುಳಿಗಿ ಸೂರ್ಯ ಬೆಳಗಿ ಸೂರ್ಯ
ಮುಳುಗಿ ಪರರು ಮೇಗಡೆ
ಕಳೆದು ನನ್ನ ನಿನ್ನ ಬಂಧ
ತಿಳಿಯೊ ನಾವ್ ಸ್ವತಂತ್ರರು

ಸಾಗಿ ವರ್ಷ ಮಾಗಿ ಪುಣ್ಯ
ಸಾಗಿ ಬಂತು ಸುಗ್ಗಿಯು
ತ್ಯಾಗದಲ್ಲಿ ರಕ್ತರಾಗಿ
ಈಗ ಬೀರಿ ನಗುವನು
ಉಘೇ ಉಘೇ ಉಘೇ

ಸೋಸಿ ಸಪ್ತ ಲೋಕದಿತಿ
ಹಾಸವೆಲ್ಲ ನೋಡಿರಿ
ಸಾಸಿ ಎನಿಸಿ ಬಾಳಿ ಬದುಕಿ
ಈ ಸ್ವತಂತ್ರದಿರವಲಿ
ಉಘೇ ಉಘೇ ಉಘೇ
*****

Latest posts by ಹೊಯಿಸಳ (see all)