ನೈವೇದ್ಯ ತೀರ್ಥ ಪ್ರಸಾದಗಳೆಲ್ಲ
ನಮಗೇ ಸ್ವಾಹರ್ಪಿತ
ಒಡವೆ, ವಸ್ತ್ರ, ಕಾಣಿಕೆಗಳು
ನಮ್ಮ ಸ್ವಯಾರ್ಜಿತ.
ಗುಡಿಯ ಸುತ್ತು, ಧ್ಯಾನ
ಉರುಳು ಸೇವೆ, ನಮಸ್ಕಾರ
ನಮ್ಮ ಯೋಗಾರ್ಥಕ
ಬೇಡುವುದೆಲ್ಲ ನಮ್ಮ ಸುಖಕ
ಪೂಜೆಯುಂಟು ಧರ್ಮಕ
ಸ್ತೋತ್ರ, ಮಂತ್ರ, ದೀಪ, ಧೂಪ…
ಹೂ..ಪತ್ರಿಗಳೊಂದೇ
ನಿನಗೆ………..ಅರ್ಪಿತ……
ಕೊಡುವುದೊಂದೇ
ನಿನ್ನ ಕಾಯಕ
ನೀ…. ಕರುಣಿಸು ವರವ
ಎಣಿಸದಿರು
ಅವರವರ ಭಕ್ತಿ ಭಾವವ.
*****