ಒಂದು ದಿನ ಗೊರ್ಬಚೋವ್, ರೇಗನ್ ಮತ್ತು ರಾಜೀವ್‌ಗಾಂಧಿ ಒಂದೆಡೆ ಸೇರಿ ತಮ್ಮ ತಮ್ಮದೇಶಗಳ ಬಗ್ಗೆ ಏನು ಅಭಿಪ್ರಾಯವಿದೆ ಎಂಬುದನ್ನು ದೇವರನ್ನು ಕೇಳಿ ತಿಳಿದು ಕೊಳ್ಳಬೇಕೆಂದು ಬಯಸಿದರು. ಮೊದಲಿಗೆ ರಷ್ಯಾದ ಗೊರ್ಬಚೋವ್ ದೇವರನ್ನು ಕೇಳಿದರು: “ನಮ್ಮ ದೇಶ ಭ್ರಷ್ಟಾಚಾರದಿಂದ ಯಾವಾಗ ಮುಕ್ತವಾದೀತು?”
ದೇವರು:    ಇನ್ನು ೨೬ ವರ್ಷಗಳಲ್ಲಿ.
ರೇಗನ್ ಇದೇ ಪ್ರಶ್ನೆಯನ್ನು ಹಾಕಿದಾಗ, ದೇವರು “ಇದು ತುಂಬಾ ಸಮಯ ತೆಗೆದುಕೊಳ್ಳುತ್ತದೆ ಕನಿಷ್ಠ ಪಕ್ಷ ಒಂದು ಶತಮಾನವಾದರೂ ಬೇಕು” ಅಂದ. ನಮ್ಮ ಭಾರತದ ಬಗ್ಗೆ ಏನು ಹೇಳುತ್ತೀಯಾ ರಾಜೀವ್‌ಗಾಂಧಿ ದೇವರನ್ನು ಕೇಳಿದರು. ದೇವರ ಕಣ್ಣುಗಳಲ್ಲಿ ಬಳಬಳ ನೀರು ಬಂತು; ಅದನ್ನು ಒರೆಸಿಕೊಳ್ಳುತ್ತ ನಿಮ್ಮ ಭಾರತ ಭ್ರಷ್ಟಾಚಾರದಿಂದ ಮುಕ್ತ ವಾಗುವ ಹೊತ್ತಿಗೆ ನಾನು ಬದುಕಿರುವುದಿಲ್ಲವಲ್ಲಾ!” ಎಂದನಂತೆ
***

ಪಟ್ಟಾಭಿ ಎ ಕೆ
Latest posts by ಪಟ್ಟಾಭಿ ಎ ಕೆ (see all)