ಕೆಲಸದಾಕೆ: “ನಾಳೆಯಿಂದ ನಿಮ್ಮನೆ ಕೆಲಸಕ್ಕೆ ಬರುವುದಿಲ್ಲ ತಾಯೀ”
ಯಜಮಾನಿ: “ಯಾಕೆ ಬರೋದಿಲ್ಲಮ್ಮಾ?”
ಕೆಲಸದಾಕೆ: “ನನ್ನ ಮೇಲೆ ನಿಮಗೆ ಕೊಂಚವೂ ನಂಬಿಕೆ ಇಲ್ಲ”
ಯಜಮಾನಿ: “ಯಾರು ಹೇಳಿದ್ದು ಹಾಗಂತ, ನನ್ನ ಬೀರುವಿನ ಬೀಗದ ಕೈ ಗೊಂಚಲು ಸದಾ ಟೇಬಲ್ ಮೇಲೆ ಇಟ್ಟಿರುತ್ತೇನೆ. ನಿನ್ನನ್ನು ನಾನು ನಂಬುವುದಿಲ್ಲ ಎಂಬ
ಮಾತು ಸತ್ಯಕ್ಕೆ ದೂರವಲ್ಲವೆ?”
ಕೆಲಸದಾಕೆ: “ನೀವು ಹೇಳೋ ಮಾತು ಸತ್ಯವೇ ಹೌದು; ಆದರೆ ಬೀಗದ ಕೈಗೊಂಚಲಿನ ಒಂದು ಕೀಯೂ ಬೀರು ತೆಗೆಯಲು ಬರುತ್ತಿಲ್ಲವಮ್ಮಾ”
***