ಆಕೆ ಕಥೆಗಳನ್ನು ಬರೆಯುತಿದ್ದಳು. ಪಕ್ಕದಮನೆಯ ಕಾಲೇಜು ಹುಡುಗಿ ಆಕೆ ಬರೆದ ಕಥೆಗಳನ್ನು ಓದುತ್ತಿದ್ದಳು. ಇಂದು ಸುಖಾಂತವಾದ ಕಥೆ ಮಾರನೆಯ ದಿನ ಬದಲಾಯಿಸಿ ಪ್ರೀತಿಯ ಜೋಡಿಯಲ್ಲಿ ಒಬ್ಬರನ್ನು ಸಾಯಿಸುತ್ತಿದ್ದಳು. ಓದಿ ಬೇಸತ್ತ ಹುಡುಗಿ ಆಂಟಿಗೆ ‘ಕೊಲೆಗಡುಕಿ’ ಎಂದು ಬಿರುದು ಕೊಟ್ಟಳು. ಅಲ್ಲಿ ಕಾಲನ ಕೈವಾಡ ತೋರಿರುವೆ ಎಂದಳು ಕಥೆಗಾರ್‍ತಿ.
*****