ಬಂಗರ ಚಂದ್ರಾ ಮುಗಿಲಾ ಇಂದ್ರಾ

ಬಂಗರ ಚಂದ್ರಾ ಮುಗಿಲಾ ಇಂದ್ರಾ
ಹೌವ್ವನೆ ನಕ್ಕಿದ್ದಾ|| ಏನ್ಚಂದಽಽ ಏನ್ಚಂದಽಽ ||ಪಲ್ಲ||

ಚಂಚಂದಾಗಿ ಆಡ್ಯಾಡ್ಯಾಡ್ತಾ-
ನನ್ನನ್ರಾಗ ಇಲ್ಲಾಗಿ ಹೋದ
ಬಂದೇನೆಂದು ಬ್ಯಾಸತ್ತಾನು
ಹೇಳೇಳ್ರಾಗ ಗಳ್ಳನೆ ಹೋದ ||೧||

ಕಂಡ್‍ಕಂಡಾನು ಕಲ್ಲಾಬಿಲ್ಲಿ
ಹೌವ್ವವ್ವಾರಿ ಸೆರಗಿಡಿರಾಗ
ಕಣ್ಣಾರೆಪ್ಪಿ ಗಪ್‍ಗಪ್ಪಾಗಿ
ಬಿಚ್ಚಿದ ಎದಿಯಾ ಕಟ್‍ಕಟ್‍ರಾಗ ||೨||

ಮಿಂಡಾ ಬಂದು ಪುಂಡಿ ಕಟ್ಟಿ
ಪೆಂಡಿ ಹೊತ್ತಾ ಎನ್ನನ್ರಾಗ
ಗೂಳಿ ಮ್ಯಾಗ ಗೂಳಿ ಬಂದು
ಗೋಳು ಆತು ಅನ್ನನ್ರಾಗ ||೩||

ಸುತ್ತಾಡ್ಕೊಂತ ಸರಗಾಡ್ಕೊಂತ
ಹರಗ್ಯಾಡ್ಕೊಂತ ಹಿಡಿಹಿಡಿರಾಗ
ಸುದ್ದಿಲ್ದಂಗ ಸದ್ದಿಲ್ದಂಗ
ಇದ್ದಲ್ಲಿದ್ದು ಇಲ್ದಂಗಾದಾ ||೪||

ಗುಂಗುರುಗೂದ್ಲಾ ಸಿಂಗರಗಲ್ಲಾ
ಅಲ್ಲಾ ಬೆಲ್ಲಾ ಮೆಲ್‍ಮೆಲ್‍ರಾಗ
ಬಂದಾ ಬಂದಾ ಎನ್‌ಎನ್ ರಾಗ
ಬಂದಂಗಾಗಿ ಬಾಲ್ದಂಗಾದಾ ||೫||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕೊಲೆಗೆಡುಕಿ
Next post ಕಳವು

ಸಣ್ಣ ಕತೆ

  • ಅವಳೇ ಅವಳು

    ಇತ್ತೀಚೆಗೆ ಅವಳೇಕೋ ತುಂಬಾ ಕಾಡುತ್ತಿದ್ದಾಳೆ- ಮೂವತ್ತು ವರ್ಷಗಳೇ ಸಂದರೂ ಮರೆಯಾಗಿಲ್ಲ ಜೀವನದಲ್ಲಿ ಅದೆಷ್ಟೋ ನಡೆಯಬಾರದ ಅಥವಾ ನಡೆಯಲೇಬೇಕಾದ ಅನೇಕ ಘಟನೆಗಳು ನಡೆದು ಹೋಗಿವೆ. ದೈಹಿಕವಾಗಿ, ಮಾನಸಿಕವಾಗಿ, ವ್ಯಾವಹಾರಿಕವಾಗಿ,… Read more…

  • ಅಮ್ಮ

    ‘ಅಮ್ಮನ್ಗೆ ಯಿಡೀ ರಾತ್ರೆಲ್ಲ ವಾಂತಿ ಭೇದಿ ವುಬ್ಸ ಆಯಾಸ... ಕುತ್ರೂಸಾ... ಬಾಳಾ ಯೆಚ್ಕುಡ್ಮೆಯಾಗಿ ರಾಮ್ಪಾರ್ದ ಡಾಕಿಟ್ರಾತ್ರ ತೋರ್ಸಿದ್ರು ಗುಣಾಗಿಲ್ಲ! ನೀ ಆದಷ್ಟು ಗಡಾನೇ ವೂರ್ಗೆ ಬಾಣ್ಣ...’ ಸೇಕ್ರಿ,… Read more…

  • ಇರುವುದೆಲ್ಲವ ಬಿಟ್ಟು

    ನಿಂತ ರೈಲು ಬೋಗಿಯೊಳಗಿಂದ ನನ್ನ ದೃಷ್ಟಿ ಹೊರಗಿನ ನಿಲ್ದಾಣವನ್ನು ವೀಕ್ಷಿಸುತ್ತಿತ್ತೇ ಹೊರತು ನನ್ನ ಮನಸ್ಸು ಮಾತ್ರ ನಾಗಾಲೋಟದಿಂದ ಓಡುತ್ತಿತ್ತು. ಒಂದು ರೀತಿಯಲ್ಲಿ ಆಲೋಚನೆಗಳು ನನ್ನ ಗೆಳೆಯ ಎಂದೇ… Read more…

  • ಟೋಪಿ ಮಾರುತಿ

    "ಏ ಕಾಗಿ, ಕಾಳೀ ಮಗನ! ಯಾಕ ಕೂಗ್ತೀಯಾ?" ಭಾವಿಯಲ್ಲಿಯ ಹಗ್ಗ ಮೇಲೆ ಕೆಳಗೆ ಹೋಗುತ್ತಿರುತ್ತದೆ. ಒಂದು ಮೊಳ ಹಗ್ಗ ಸೇದಿದರೆ ಅರ್‍ಧ ಮೊಳ ಒಳಗೆ ಸೇರಿರುತ್ತದೆ. "ಥೂ… Read more…

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…