ಹಸಿವು ಸೋಲುವುದಿಲ್ಲ
ರೊಟ್ಟಿ ಗೆಲ್ಲುವುದಿಲ್ಲ
ಪಂದ್ಯವೆಂಬ ಭ್ರಮೆ
ಹಸಿವು ರೊಟ್ಟಿಗೆ.
ಆದರಿಲ್ಲಿ ಸೋಲು
ಗೆಲುವುಗಳಿಲ್ಲ
ದಾಖಲಾಗುವುದಿಲ್ಲ
ಚಕ್ರ ತಿರುಗುತ್ತದೆ
ರೊಟ್ಟಿ ಹಸಿವು
ಕೈ ಹಿಡಿದು
ಸುತ್ತಬೇಕಿದೆ
ಜೊತೆ ಜೊತೆಗೇ.
*****
ಹಸಿವು ಸೋಲುವುದಿಲ್ಲ
ರೊಟ್ಟಿ ಗೆಲ್ಲುವುದಿಲ್ಲ
ಪಂದ್ಯವೆಂಬ ಭ್ರಮೆ
ಹಸಿವು ರೊಟ್ಟಿಗೆ.
ಆದರಿಲ್ಲಿ ಸೋಲು
ಗೆಲುವುಗಳಿಲ್ಲ
ದಾಖಲಾಗುವುದಿಲ್ಲ
ಚಕ್ರ ತಿರುಗುತ್ತದೆ
ರೊಟ್ಟಿ ಹಸಿವು
ಕೈ ಹಿಡಿದು
ಸುತ್ತಬೇಕಿದೆ
ಜೊತೆ ಜೊತೆಗೇ.
*****